ಕರ್ನಾಟಕ

karnataka

ETV Bharat / briefs

ಹಮ್ ಬೋಲಾ ಮೋದಿ ಫಿರ್ಸೆ ಆಯೇಗಾ...! ನೆಟ್ಟಿಗರ ಗಮನ ಸೆಳೆಯುತ್ತಿದೆ 'ಹಳ್ಳಿ ಬಾಯ್​' ರ‍್ಯಾಪ್​ - ರಣ್​ವೀರ್ ಸಿಂಗ್

ಕೆಲ ತಿಂಗಳ ಹಿಂದೆ ಬಾಲಿವುಡ್ ರಣ್​ವೀರ್ ಸಿಂಗ್ ನಟನೆಯಲ್ಲಿ ಗಲ್ಲಿಬಾಯ್ ಹೆಸರಿನ ಸಿನಿಮಾ ತೆರೆಗೆ ಬಂದಿತ್ತು. ಈ ಚಿತ್ರದ ಅಪ್ನ ಟೈಮ್ ಆಯೇಗಾ ಎನ್ನುವ ಹಾಡು ಸಿನಿಪ್ರಿಯರ ಬಾಯಲ್ಲಿ ನಲಿದಾಡಿತ್ತು.

ಬಾಲಕನ ರ‍್ಯಾಪ್​

By

Published : May 3, 2019, 1:35 PM IST

ನವದೆಹಲಿ:ದೇಶವೇ ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬ ಲೋಕಸಭಾ ಚುನಾವಣೆಯಲ್ಲಿ ಭಾಗಿಯಾಗುತ್ತಿದೆ. ಮುಂದಿನ ಪ್ರಧಾನಿ ಯಾರಾಗಲಿದ್ದಾರೆ ಎನ್ನುವ ಪ್ರಶ್ನೆ ಎಲ್ಲರಲ್ಲೂ ಇದೆ. ಅದಕ್ಕೆ ಈ ಬಾಲಕ ಉತ್ತರ ನೀಡಿದ್ದಾನೆ.

ಕೆಲ ತಿಂಗಳ ಹಿಂದೆ ಬಾಲಿವುಡ್ ರಣ್​ವೀರ್ ಸಿಂಗ್ ನಟನೆಯಲ್ಲಿ ಗಲ್ಲಿಬಾಯ್ ಹೆಸರಿನ ಸಿನಿಮಾ ತೆರೆಗೆ ಬಂದಿತ್ತು. ಈ ಚಿತ್ರದ ಅಪ್ನ ಟೈಮ್ ಆಯೇಗಾ ಎನ್ನುವ ಹಾಡು ಸಿನಿಪ್ರಿಯರ ಬಾಯಲ್ಲಿ ನಲಿದಾಡಿತ್ತು.

ಸದ್ಯ ಇದೇ ಹಾಡಿನ ಧಾಟಿಯಲ್ಲಿ ಹಳ್ಳಿ ಹುಡುಗನೊಬ್ಬ ಮೋದಿ ಫಿರ್ಸೆ ಆಯೇಗಾ ಎಂದು ಹಾಡಿದ್ದಾನೆ. ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದು ಹುಡುಗ ಐದು ನಿಮಿಷದ ಹಾಡಿನಲ್ಲಿ ಹಲವಾರು ಬಾರಿ ಪುನರುಚ್ಚರಿಸಿದ್ದಾನೆ.

ಬಾಲಕನ ಮೋದಿ ಫಿರ್ಸೆ ಆಯೇಗಾ ಹಾಡು ನೆಟ್ಟಿಗರ ಮನಗೆದ್ದಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಆದರೆ ಮೋದಿಯೇ ಪ್ರಧಾನಿ ಆಗಲಿದ್ದಾರಾ ಎನ್ನುವುದು ಮೇ 23ರಂದು ತಿಳಿಯಲಿದೆ.

ABOUT THE AUTHOR

...view details