ಚಿಕ್ಕಮಗಳೂರು: 15 ವರ್ಷಗಳಿಂದ ಸ್ವಂತ ಮಕ್ಕಳಂತೆ ಬೆಳಸಿದ್ದ ಶ್ರೀಗಂಧದ ಮರಗಳಿಗೆ ರಾತ್ರೋರಾತ್ರಿ ಕಳ್ಳರು ಕೊಡಲಿ ಪೆಟ್ಟು ಕೊಟ್ಟು ಮರಗಳನ್ನು ಕಳ್ಳತನ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ರಾತ್ರೋರಾತ್ರಿ ಶ್ರೀಗಂಧದ ಮರಗಳನ್ನು ಕದ್ದು ಪರಾರಿಯಾದ ಕಳ್ಳರು - Chikkamagaluru sandals theft news
ರಾತ್ರೋರಾತ್ರಿ ಕಳ್ಳರು ಶ್ರೀಗಂಧದ ಮರಗಳಿಗೆ ಕೊಡಲಿ ಪೆಟ್ಟು ಕೊಟ್ಟು ಮರಗಳನ್ನು ಕಳ್ಳತನ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.
Sandal trees
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ದೋರನಾಳು ಗ್ರಾಮದಲ್ಲಿ ವಿಶುಕುಮಾರ್ ಎಂಬುವರು ಕಳೆದ 15 ವರ್ಷಗಳಿಂದ ತಮ್ಮ ತೋಟದಲ್ಲಿ ಶ್ರೀಗಂಧದ ಮರಗಳನ್ನು ಬೆಳೆಸಿದ್ದರು. ರಾತ್ರೋರಾತ್ರಿ ತೋಟಕ್ಕೆ ನುಗ್ಗಿದ ಕಳ್ಳರು ಮೂರು ಶ್ರೀಗಂಧದ ಮರಗಳಿಗೆ ಕೊಡಲಿ ಪೆಟ್ಟು ನೀಡಿ, ಬೃಹತ್ ಗಾತ್ರದ ಲಕ್ಷಾಂತರ ರೂ. ಬೆಲೆ ಬಾಳುವ ಮರಗಳನ್ನು ಕಳ್ಳತನ ಮಾಡಿದ್ದಾರೆ.
ಬೆಳಗ್ಗೆ ತೋಟಕ್ಕೆ ವಿಶುಕುಮಾರ್ ಭೇಟಿ ನೀಡಿದ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ತರೀಕೆರೆಯ ವಲಯ ಅರಣ್ಯಧಿಕಾರಿ ಕಚೇರಿಯಲ್ಲಿ ದೂರು ನೀಡಲಾಗಿದ್ದು, ಅರಣ್ಯಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.