ಕಲಬುರಗಿ: ಈಚೆಗೆ ನಂದಿನಿ ಹಾಲಿನ ವಾಹನ ತಡೆದು ದರೋಡೆ ಮಾಡಿದ್ದ ಆರೋಪಿಗಳನ್ನು ಶಹಬಾದ ನಗರ ಪೊಲೀsರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಲಬುರಗಿಯ ಪರಮೇಶ್ವರ್ ಹಡಪದ್, ಸಿದ್ದೇಶ್ವರ್ ಮುದ್ದಡಗಿ, ಧನರಾಜ್ ರಾಥೋಡ್, ಅಕ್ಷಯ ರತ್ನಾಕರ್ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಕೆಎಂಎಫ್ ಘಟಕದ ಹಾಲು ಹಾಗೂ ಇತರ ಉತ್ಪನ್ನಗಳ ಮಾರಾಟ ಮಾಡಿ ಮೇ 17ರಂದು ಶಹಾಬಾದ್ಯಿಂದ ಕಲಬುರಗಿಗೆ ಬರುತ್ತಿದ್ದ ಕೆಎಂಎಫ್ ಘಟಕದ ಟೆಂಪೋವನ್ನು ಎರಡು ಬೈಕ್ ಮೇಲೆ ಬಂದ ದುಷ್ಕರ್ಮಿಗಳು ಭಂಕೂರ್ ಕ್ರಾಸ್ ಬಳಿ ಅಡ್ಡಗಟ್ಟಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಹಣ ಇದ್ದ ಬ್ಯಾಗ್, ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು.