ಕರ್ನಾಟಕ

karnataka

ETV Bharat / briefs

ಕಲಬುರಗಿ ಜನರ ನಿದ್ದೆ ಕದ್ದ ಕಳ್ಳರ ಬಂಧನ: ಬ್ರಹ್ಮಪುರ ಪೊಲೀಸರ ಕಾರ್ಯಾಚರಣೆ - ಕಲಬುರಗಿ ಜಿಲ್ಲಾ ಸುದ್ದಿ

ಕಲಬುರಗಿ ನಗರದಲ್ಲಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಖದೀಮರನ್ನು ಬಂಧಿಸಿರುವ ಬ್ರಹ್ಮಪುರ ಪೊಲೀಸರು ಜೈಲಿಗಟ್ಟಿದ್ದಾರೆ.

Theif arrested by kalaburagi police
Theif arrested by kalaburagi police

By

Published : Jun 7, 2020, 1:34 PM IST

ಕಲಬುರಗಿ: ನಾಲ್ವರು ಕುಖ್ಯಾತ ಕಳ್ಳರನ್ನು ಬಂಧಿಸುವಲ್ಲಿ ಬ್ರಹ್ಮಪುರ ಪೊಲೀಸರು ಯಶಸ್ವಿಯಾಗಿದ್ದಾರೆ‌.

ಬಂಧಿತರನ್ನು ಸೋಹೇಲ್ ಟಾಂಗೆವಾಲೆ (26), ವಿನಾಯಕರ ನಾರಬಂಡಿ (22), ಮಹಮ್ಮದ್ ಗೌಸ್ ಉಮೇರ್ (28), ಮನೋಜ್ ಕಾಂಬಳೆ (21) ಎಂದು ಗುರುತಿಸಲಾಗಿದೆ.

ಶರಣ ನಗರದ ಪ್ರಸನ್ನ ಗಣಪತಿ ದೇವಸ್ಥಾನಕ್ಕೆ ಕನ್ನ ಹಾಕಿದ್ದ ಖದೀಮರು ದೇವಸ್ಥಾನದಲ್ಲಿದ್ದ ಬೆಳ್ಳಿ, ತಾಮ್ರದ ಪೂಜಾ ಸಾಮಗ್ರಿಗಳ ಕಳ್ಳತನ ಮಾಡಿದ್ದರು. ಅಲ್ಲದೆ ನಗರದ ವಿವಿಧೆಡೆ ನಡೆದ ಬೈಕ್ ಕಳ್ಳತನ ಪ್ರಕರಣಗಳಲ್ಲೂ ಭಾಗಿಯಾಗಿದ್ದರು.

ಬಂಧಿತರಿಂದ ಪೂಜಾ ಸಾಮಗ್ರಿ, 8 ದ್ವಿಚಕ್ರವಾಹನ ಸೇರಿ 2.66 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ABOUT THE AUTHOR

...view details