ಕರ್ನಾಟಕ

karnataka

ETV Bharat / briefs

ನರಭಕ್ಷಕ ಹುಲಿ ನಾಪತ್ತೆ: ಚಿರತೆಗಳು ಕ್ಯಾಮರಾಗೆ ಪದೇ ಪದೆ ಸೆರೆ!

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕೆಬ್ಬೇಪುರದಲ್ಲಿ ವ್ಯಕ್ತಿಯೊಬ್ಬರನ್ನು ತಿಂದು ಹಾಕಿದ ಹುಲಿರಾಯ ಪತ್ತೆಯಾಗಿಲ್ಲ. ಆದ್ರೆ, ಚಿರತೆಗಳು ಕ್ಯಾಮರಾ ಕಣ್ಣಲ್ಲಿ ಸೆರೆಯಾಗುತ್ತಲೇ ಇವೆ.

The Tiger missing: appear in the leopard

By

Published : Sep 6, 2019, 8:58 PM IST

Updated : Sep 7, 2019, 10:29 PM IST

ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕೆಬ್ಬೇಪುರದಲ್ಲಿ ವ್ಯಕ್ತಿಯೊಬ್ಬರನ್ನು ತಿಂದು ಕೊಂದು ಹಾಕಿದ ಹುಲಿರಾಯ ಪತ್ತೆಯಾಗಿಲ್ಲ. ಅರಣ್ಯ ಇಲಾಖೆ ಕೂಂಬಿಂಗ್ ನಡೆಸಿದರೂ ಅದರ ಸುಳಿವು ಸಿಗಲಿಲ್ಲ. ಆದರೆ, ಚಿರತೆಗಳು ಪತ್ತೆಯಾಗುತ್ತಿವೆ.

ಚೌಡಹಳ್ಳಿ ಗ್ರಾಮದ ಶಿವಮಾದಯ್ಯ (65) ಎಂಬುವರನ್ನು ಹುಲಿ ಕೊಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಕೆರೆ ಅರಣ್ಯ ವಲಯ ಹಾಗೂ ಗೋಪಾಲಸ್ವಾಮಿ ಬೆಟ್ಟ ಅರಣ್ಯ ವಲಯದಲ್ಲಿ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿದ್ದರು. ಕುಂದಕೆರೆ ಅರಣ್ಯದಲ್ಲಿ ಅಳವಡಿಸಿದ್ದ ಕ್ಯಾಮರಾಗಳಲ್ಲಿ 3-4 ಚಿರತೆಗಳು ಪದೇ ಪದೆ ಸೆರೆ ಸಿಕ್ಕಿವೆ. ಆದರೆ, ಹುಲಿ ಮಾತ್ರ ಪತ್ತೆಯಾಗಿಲ್ಲ ಎಂದು ಅರಣ್ಯಾಧಿಕಾರಿ ಮಂಜುನಾಥ್ 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ್ದಾರೆ.

ಕ್ಯಾಮರಾದಲ್ಲಿ ಸೆರೆಯಾದ ಚಿರತೆ

ಕೊಂದಿರುವುದು ಚಿರತೆ ಎಂಬ ಶಂಕೆ:ಕೊಂದಿದ್ದು ಹುಲಿಯಲ್ಲ ಚಿರತೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಈ ಕುರಿತು ಗಂಭೀರ ತನಿಖೆ ಕೈಗೊಂಡಿದ್ದಾರೆ. ಹುಂಡಿಪುರ, ಕೆಬ್ಬೇಪುರದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಹುಲಿಯೇ ಕೊಂದಿರಬಹುದು ಎನ್ನಲಾಗಿತ್ತು. ಈಗ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ಚಿರತೆಗಳು ಮಾತ್ರ ಕ್ಯಾಮರಾಗೆ ಸೆರೆಯಾಗಿದೆ. ಹುಲಿಯ ಸುಳಿವಿಲ್ಲದ ಕಾರಣ ಮೇಲ್ನೋಟಕ್ಕೆ ಚಿರತೆಯೇ ಕೊಂದಿರಬಹುದು ಎಂದು ಬಂಡೀಪುರ ಸಿಎಫ್​ಒ ಬಾಲಚಂದ್ರ ಪ್ರತಿಕ್ರಿಯಿಸಿದ್ದಾರೆ.

ಸ್ಥಳೀಯರ ಪ್ರಕಾರ ಹುಲಿಯೇ ವ್ಯಕ್ತಿಯನ್ನು ಕೊಂದಿದ್ದು ದಪ್ಪ ಉಗುರುಗಳು- ಹಲ್ಲುಗಳೇ ಸಾಕ್ಷಿ ಎಂದು ವಾದಿಸುತ್ತಿದ್ದಾರೆ. ಅರಣ್ಯ ಇಲಾಖೆ ಹುಲಿ ಬದಲಿಗೆ ಚಿರತೆಯೇ ಕೊಂದಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಹುಂಡಿಪುರದ ಹುಲಿರಾಯ ಮತ್ತಷ್ಟು ನಿಗೂಢನಾಗುತ್ತಿದ್ದು, ಅರಣ್ಯ ಇಲಾಖೆ ಶೀಘ್ರವೇ ಇದಕ್ಕೆ ಇತಿಶ್ರೀ ಹಾಡಬೇಕಿದೆ.

Last Updated : Sep 7, 2019, 10:29 PM IST

ABOUT THE AUTHOR

...view details