ಮಂಗಳೂರು: ನಗರದ ಸೂರಿಂಜೆ ಭತ್ತದ ಗದ್ದೆಯಲ್ಲಿ ಕಂಡು ಬಂದಿರುವ ತೈಲ ರಿಫೈನರಿ ಆಯಿಲ್ ಅಲ್ಲ ಎಂದು ಎಂಆರ್ ಪಿಎಲ್ ಸ್ಪಷ್ಟನೆ ನೀಡಿದೆ.
ಗದ್ದೆಯಲ್ಲಿ ಕಂಡು ಬಂದಿರುವುದು ತೈಲ ರಿಫೈನರಿ ಆಯಿಲ್ ಅಲ್ಲ: ಎಂಆರ್ ಪಿಎಲ್ ಸ್ಪಷ್ಟನೆ - mangalore news
ಸೂರಿಂಜೆಯಲ್ಲಿನ ಭತ್ತದ ಗದ್ದೆಯಲ್ಲಿ ತೈಲ ಕಾಣಿಸಿಕೊಂಡ ಬಗ್ಗೆ ದೂರು ಬಂದಿತ್ತು. ಈ ಹಿನ್ನೆಲೆ ಸ್ಥಳ ಪರಿಶೀಲನೆ ಮಾಡಲಾಗಿದೆ.
The oil found in the chin is not a refinery oil
ಸೂರಿಂಜೆಯಲ್ಲಿನ ಭತ್ತದ ಗದ್ದೆಯಲ್ಲಿ ತೈಲ ಕಾಣಿಸಿಕೊಂಡ ಬಗ್ಗೆ ದೂರು ಬಂದಿತ್ತು. ಆದ್ದರಿಂದ ಎಂಆರ್ ಪಿಎಲ್ ಸಂಸ್ಥೆಯ ಪರಿಸರ ಇಂಜಿನಿಯರ್ಗಳು ಕೆಎಸ್‌ಪಿಸಿಬಿ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿದ್ದಾರೆ.
ನಮ್ಮ ಸಂಸ್ಥೆಯ ಅವಲೋಕನಗಳ ಪ್ರಕಾರ ಇದು ಯಾವುದೋ ಜೈವಿಕ ಮೂಲಗಳಿಂದ ಆಗಿರುವ ಹಾಗೆ ಕಂಡು ಬರುತ್ತಿದೆ. ಗದ್ದೆಯಲ್ಲಿದ್ದ ತೈಲ ಮಾದರಿಯನ್ನು ಎಂಆರ್‌ಪಿಎಲ್ ಮತ್ತು ಕೆಎಸ್‌ಪಿಸಿಬಿ ತೆಗೆದುಕೊಂಡಿದ್ದು, ಈ ಬಗ್ಗೆ ಪರಿಶೀಲನೆ ಮಾಡಲಾಗುತ್ತದೆ ಎಂದು ಎಂಆರ್ ಪಿಎಲ್ ಸ್ಪಷ್ಟಪಡಿಸಿದೆ.