ಕರ್ನಾಟಕ

karnataka

ETV Bharat / briefs

ಚಿಕಿತ್ಸೆಗಾಗಿ ಹಣದ ಬೇಡಿಕೆ, ಕೈದಿ ಸಾವು.. 2000 ಕೈದಿಗಳ ಉಪವಾಸ ಸತ್ಯಾಗ್ರಹ - undefined

ವಿಚಾರಣಾಧೀನ ಕೈದಿಯೊಬ್ಬ ಅನಾರೋಗ್ಯದಿಂದ ನರಳುತ್ತಿದ್ದರೂ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದಾನೆ. ಇದನ್ನು ಖಂಡಿಸಿ 2000 ವಿಚಾರಣಾಧೀನ ಕೈದಿಗಳು ತಿಂಡಿ ಸೇವಿಸದೆ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಕೈದಿ ಸಾವು

By

Published : Jun 17, 2019, 7:17 PM IST

Updated : Jun 17, 2019, 7:25 PM IST

ಆನೇಕಲ್​: ಪರಪ್ಪನ ಅಗ್ರಹಾರದಲ್ಲಿ ಮತ್ತೆ ಕೈದಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ವಿಚಾರಣಾಧೀನ ಕೈದಿಯೊಬ್ಬ ಅನಾರೋಗ್ಯದಿಂದ ನರಳುತ್ತಿದ್ದರೂ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದಾನೆ. ಇದನ್ನು ಖಂಡಿಸಿ 2000 ವಿಚಾರಣಾಧೀನ ಕೈದಿಗಳು ತಿಂಡಿ ಸೇವಿಸದೆ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

3 ನೇ ಬ್ಯಾರಕ್​ನ 4ನೇ ಕೊಠಡಿಯಲ್ಲಿ ನರಳುತ್ತಿದ್ದ ಅಮೀರ್ ಎಂಬ ಕೈದಿ ಅನಾರೋಗ್ಯದಿಂದ ಬಳಲುತ್ತಿದ್ದ. ಆದರೆ ಜೈಲಿನ ಅಧಿಕಾರಿಗಳು ಚಿಕಿತ್ಸೆ ಕೊಡಿಸಲು ಹಣದ ಆಮಿಷವೊಡ್ಡಿದ್ದರು. ತೀವ್ರ ಅಸ್ವಸ್ತನಾಗಿದ್ದ ಅಮೀರ್​ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾನೆ. ಜೈಲು ಅಧಿಕಾರಿಗಳ ಈ ಕ್ರಮವನ್ನು ಪ್ರಶ್ನಿಸಿ 2000 ವಿಚಾರಣಾಧೀನ ಕೈದಿಗಳು ತಿಂಡಿ ಸೇವಿಸದೆ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಸಚಿವರು ಸ್ಥಳಕ್ಕೆ ಬರಬೇಕೆಂದು ಪಟ್ಟುಹಿಡಿದು ಧರಣಿ ಕುಳಿತಿದ್ದಾರೆ

ಕೈದಿ ಸಾವು

ಎಕ್ಸಿಕ್ಯೂಟಿವ್ ಜೈಲರ್ ಮಂಜುನಾಥ್ ಕಡೂರು ನಿರ್ಲಕ್ಷ್ಯ ತೋರಿದ್ದರಿಂದ ಕೈದಿ ಸಾವನ್ನಪ್ಪಿದ್ದಾನೆ. ಇದು ಮುಂದುವರಿಯುತ್ತಲೇ ಇದೆ ಎಂದು ಖೈದಿಗಳು ಅಳಲು ತೋಡಿಕೊಂಡಿದ್ದಾರೆ.

Last Updated : Jun 17, 2019, 7:25 PM IST

For All Latest Updates

TAGGED:

ABOUT THE AUTHOR

...view details