ಕರ್ನಾಟಕ

karnataka

ಸುಳ್ಳು ಜಿಡಿಪಿ ವಿಚಾರ..ಅರವಿಂದ್ ಸುಬ್ರಮಣಿಯನ್​ ಹೇಳಿಕೆಗೆ ತಿರುಗೇಟು ನೀಡಿದ ಕೇಂದ್ರ

By

Published : Jun 12, 2019, 5:19 PM IST

ದೇಶದ ಒಟ್ಟಾರೆ ಆರ್ಥಿಕತೆಯನ್ನ ಕುಲಂಕಷವಾಗಿ ಲೆಕ್ಕ ಹಾಕಲಾಗಿದ್ದು, ಇದರಲ್ಲಿ ಯಾವುದೇ ತಪ್ಪು ಇಲ್ಲ ಎನ್ನುವ ಮೂಲಕ ಈ ಕೇಂದ್ರ ಸರ್ಕಾರದ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ್ ಸುಬ್ರಮಣಿಯನ್​ ಅವರ ಆರೋಪವನ್ನ ಕೇಂದ್ರ ಸರ್ಕಾರ ತಳ್ಳಿ ಹಾಕಿದೆ.

ಅರವಿಂದ್ ಸುಬ್ರಹ್ಮಣ್ಯನ್​

ನವದೆಹಲಿ:ದೇಶದ ಜೆಡಿಪಿ ಲೆಕ್ಕಾಚಾರದಲ್ಲಿ ಸರಿಯಾದ ವಿಧಾನ ಬಳಕೆ ಮಾಡಲಾಗಿಲ್ಲ ಎಂಬ ಗಂಭೀರ ಆರೋಪ ಮಾಡಿದ್ದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಹ್ಮಣ್ಯನ್ ಅವರಿಗೆ ಇದೀಗ ಕೇಂದ್ರ ಸರ್ಕಾರ ತಿರುಗೇಟು ನೀಡಿದೆ.

ಸುಬ್ರಮಣಿಯನ್​ ಹೇಳಿದ್ದೇನು?

ದೇಶದ ಒಟ್ಟಾರೆ ಆರ್ಥಿಕತೆಯನ್ನ ಕುಲಕೂಷವಾಗಿ ಲೆಕ್ಕ ಹಾಕಲಾಗಿದ್ದು, ಇದರಲ್ಲಿ ಯಾವುದೇ ತಪ್ಪು ಮಾಡಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಅರವಿಂದ ಸುಬ್ರಮಣಿಯನ್​ ತಿಳಿಸಿರುವ ಪ್ರಕಾರ, ದೇಶದ ಜೆಡಿಪಿ ಲೆಕ್ಕಾಚಾರದಲ್ಲಿ 2.5 ಹೆಚ್ಚಳವಾಗಿ ಲೆಕ್ಕ ಹಾಕಲಾಗಿದೆ ಎಂದು ಹೇಳಿದ್ದರು. 2011ರ ಯುಪಿಎ2 ಸರ್ಕಾರ ಆಡಳಿತದಲ್ಲಿದ್ದಾಗ ಹಾಗೂ 2017ಎನ್​ಡಿಎ1 ಸರ್ಕಾರ ಕೇಂದ್ರದಲ್ಲಿದ್ದಾಗ ದೇಶದ ಜೆಡಿಪಿ 4.5ರಷ್ಟಿತ್ತು. ಆದರೆ ಅದು ಶೇ.7ರಷ್ಟಿತ್ತು ಎಂದು ಹೇಳಿಕೆ ನೀಡಿತ್ತು. ಸರಿಯಾದ ಮಾಪನ ಮಾಡದೇ ಈ ಅಂಕಿ ನೀಡಲಾಗಿತ್ತು ಎಂದು ಅವರು ಪ್ರತಿಪಾದಿಸಿದ್ದರು.

ಕೇಂದ್ರದ ಉತ್ತರವೇನು?

ಅರವಿಂದ ಸುಬ್ರಹ್ಮಣ್ಯನ್ ಹೇಳಿಕೆ ಬಗ್ಗೆ ಇದೀಗ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸರ್ಕಾರದ ಅಂಕಿ-ಅಂಶ ಹಾಗೂ ಯೋಜನಾ ಜಾರಿ ಸಚಿವಾಲಯ, ತಾನು ಬಿಡುಗಡೆ ಮಾಡಿರುವ ಜಿಡಿಪಿ ಅಂದಾಜು ಸೂಕ್ತ ವಿಧಾನದ ಆಧರಿತವಾಗಿಯೇ ಇದೆ ಎಂದು ಹೇಳಿದ್ದು, ದೇಶದ ಒಟ್ಟಾರೆ ಆರ್ಥಿಕ ಬೆಳವಣಿಗೆಯನ್ನು ಯಾವುದೇ ತಪ್ಪಿಲ್ಲದಂತೆ ಎಲ್ಲ ಅಂಶಗಳನ್ನ ನಿಖರವಾಗಿ ದಾಖಲಿಸಿ ಅಂದಾಜು ಮಾಡಲಾಗಿದೆ. ನೂರಕ್ಕೆ ನೂರಷ್ಟು ನಾವು ಮಾಡಿದ ಅಂದಾಜು ಕರೆಕ್ಟಾಗಿದೆ ಎಂದು ಸಮರ್ಥಿಸಿಕೊಂಡಿದೆ. ವಿವಿಧ ಮಾನದಂಡಗಳನ್ನಅಳವಡಿಸಿಕೊಂಡು, ಲಭ್ಯವಿರುವ ಡೇಟಾ ಆಧರಿಸಿ ಜಿಡಿಪಿ ಲೆಕ್ಕ ಹಾಕಲಾಗಿದೆ ಎಂದು ಸಷ್ಟಪಡಿಸಿದೆ.

ಇದೇ ವೇಳ ಈ ಹಿಂದೆ ತಮ್ಮದೇ ಸರ್ಕಾರದ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ್​ ಸುಬ್ರಮಣಿಯನ್​, ಅರುಣ್​ ಜೇಟ್ಲಿ ಅವರೊಂದಿಗಿನ ಮುನಿಸಿನ ಹಿನ್ನೆಲೆಯಲ್ಲಿ ಅವಧಿಗೆ ಮುನ್ನವೇ, ವೈಯಕ್ತಿಕ ಕಾರಣ ನೀಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ABOUT THE AUTHOR

...view details