ಹೈದರಾಬಾದ್:ನಿವೃತ್ತ ನ್ಯಾ. ನೂತಿ ರಾಮ್ಮೋಹನ್ ರಾವ್, ಪತ್ನಿ ಜಯಲಕ್ಷ್ಮಿ ಮತ್ತು ಅವರ ಪುತ್ರ ವಶಿಷ್ಟ ಮೇಲೆ ಸೊಸೆ ಸಿಂಧು ಶರ್ಮಾ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದಾರೆ.
ಮಾಜಿ ನ್ಯಾಯಮೂರ್ತಿ ಕುಟುಂಬದಿಂದ ಸೊಸೆ ಮೇಲೆ ಹಲ್ಲೆ ವಶಿಷ್ಟ ಮತ್ತು ಸಿಂಧು ಶರ್ಮಾ ಮದುವೆಯ ಚಿತ್ರ ನಾವಿಬ್ಬರೂ ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ದೆವು. ಆದರೆ, ದಿನಗಳೆದಂತೆ ಪತಿ ವಶಿಷ್ಟ ಮತ್ತು ಅತ್ತೆ, ಮಾವ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು. . ಹಣಕ್ಕಾಗಿ ನನಗೆ ಮಾನಸಿಕ ಮತ್ತು ದೈಹಿಕವಾಗಿ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಸಿಂಧು ಶರ್ಮ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಿವೃತ್ತ ನ್ಯಾಯಮೂರ್ತಿ ಕುಟುಂಬದಿಂದ ಸೊಸೆ ಮೇಲೆ ಚಿತ್ರಹಿಂಸೆ ಸುಪ್ರೀಂಕೋರ್ಟ್ ಮಾರ್ಗಸೂಚಿಗಳ ಪ್ರಕಾರ, ವಶಿಷ್ಟ ಮತ್ತು ಸಿಂಧುಗೆ ಎರಡು ಬಾರಿ ಕೌನ್ಸೆಲಿಂಗ್ಗೆ ಕರೆದಿದ್ದರೂ ಪ್ರಯೋಜನವಾಗಲಿಲ್ಲ. ಶನಿವಾರ ಮತ್ತೆ ಪೊಲೀಸ್ ಠಾಣೆಗೆ ಕರೆದರೂ ಪ್ರಯೋಜನವಾಗಲಿಲ್ಲ. ಆರು ದಿನಗಳ ಹಿಂದೆ ವಶಿಷ್ಟ ಮತ್ತು ಆತನ ಕುಟುಂಬ ಸಿಂಧುವಿಗೆ ಚಿತ್ರಹಿಂಸೆ ನೀಡಿದ್ದಾರೆ. ಸಿಂಧು ಶರೀರದ ಮೇಲೆ ಗಾಯಗಳಾಗಿದ್ದು, ವಶಿಷ್ಟ ಮತ್ತು ಆತನ ತಂದೆ-ತಾಯಿ ವಿರುದ್ಧ ಐಪಿಸಿ 498-ಎ, 406, 323 ಕಲಂ ಪ್ರಕಾರ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಲಾಗಿದೆ ಎಂದು ಇನ್ಸ್ಪೆಕ್ಟರ್ ಮಂಜುಳಾ ಹೇಳಿದ್ದಾರೆ.
ನಿವೃತ್ತ ನ್ಯಾಯಮೂರ್ತಿ ಕುಟುಂಬದಿಂದ ಸೊಸೆ ಮೇಲೆ ಹಲ್ಲೆ 'ನನ್ನ ಮಕ್ಕಳನ್ನು ನನಗೆ ಕೊಡಿ'- ಸಿಂಧು ಶರ್ಮಾ
ನನಗೆ ಚಿತ್ರಹಿಂಸೆ ನೀಡಿ ನನ್ನ ಮಕ್ಕಳನ್ನು ನನ್ನಿಂದ ದೂರ ಮಾಡಿದ್ದಾರೆ. ಅವರಿಬ್ಬರನ್ನು ನನಗೆ ಕೊಡಿಸಬೇಕೆಂದು ಪೊಲೀಸರಲ್ಲಿ ಬೇಡಿಕೊಳ್ಳುತ್ತೇನೆ. ನನಗೆ ಮದುವೆಯಾಗಿ ಏಳು ವರ್ಷವಾಗಿದೆ. ನನಗೆ ಇಬ್ಬರು ಪುಟ್ಟ ಹೆಣ್ಣು ಮಕ್ಕಳಿದ್ದಾರೆ. ಅದರಲ್ಲಿ ಒಂದು ಮಗು ಇನ್ನು ಹಾಲು ಕುಡಿಯುತ್ತಿದ್ದು, ಅವರನ್ನು ನನ್ನಿಂದ ದೂರ ಮಾಡಿದ್ದಾರೆ. ಮದುವೆಯಾಗಿ ಕೆಲ ತಿಂಗಳಿಗೆ ಗಂಡ, ಅತ್ತೆ-ಮಾವ ಚಿತ್ರಹಿಂಸೆ ನೀಡಲು ಶುರು ಮಾಡಿದ್ರು. ಈಗ ನಮ್ಮ ಮಾವ ಸೇರಿ ಮೂವರು ನನ್ನ ಮೇಲೆ ಹಲ್ಲೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಾನು ಮಾನಸಿಕ ಅಸ್ವಸ್ಥೆ ಎಂದು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸಿಂಧು ಶರ್ಮಾ ಮಾಧ್ಯಮದ ಎದುರು ಅಳಲು ತೋಡಿಕೊಂಡರು.
ಈ ಘಟನೆ ಕುರಿತು ಸಿಸಿಎಸ್ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.