ಬ್ಯಾಂಕಾಕ್: ಥಾಯ್ಲೆಂಡ್ ರಾಜ ಮಹಾ ವಜಿರಾಲಾಂಗ್ಕಾರ್ನ್ ಅಧಿಕೃತವಾಗಿ ಪಟ್ಟಕ್ಕೇರುವ ಕೆಲವೇ ದಿನಗಳ ಮುಂಚಿತವಾಗಿ ತಮ್ಮ ಖಾಸಗಿ ಭದ್ರತಾ ಸಿಬ್ಬಂದಿಯನ್ನು ವರಿಸಿ ಅಚ್ಚರಿ ಮೂಡಿಸಿದ್ದಾರೆ.
60ರಲ್ಲಿ ಹೊಡೀತು ಜಾಕ್ ಪಾಟ್ ಬುಧವಾರ ಈ ವಿವಾಹ ಸಮಾರಂಭ ಜರುಗಿದ್ದು, ದೇಶದಲ್ಲೆಡೆ ರಾಜನ ನಡೆ ಸಾಕಷ್ಟು ಆಶ್ಚರ್ಯ ತರಿಸಿದೆ. ಥಾಯ್ಲೆಂಡ್ನ ಬಹುತೇಕ ಎಲ್ಲ ಮಾಧ್ಯಮಗಳು ಈ ಮದುವೆಯನ್ನು ಪ್ರಸಾರ ಮಾಡಿವೆ.
2014ರಲ್ಲಿ ವಜಿರಾಲಾಂಗ್ಕಾರ್ನ್, ಥಾಯ್ ಏರ್ವೇಸ್ನ ಮಾಜಿ ಗಗನಸಖಿ ಸುತಿದಾ ತಿಡ್ಜಾರನ್ನು ಖಾಸಗಿ ಭದ್ರತಾ ಸಿಬ್ಬಂದಿಯಾಗಿ ನೇಮಿಸಿದ್ದರು. ಕೆಲ ವರದಿಗಳ ಪ್ರಕಾರ ರಾಜ ಹಾಗೂ ಸುತಿದಾ ಇಬ್ಬರೂ ಪ್ರೀತಿಯಲ್ಲಿದ್ದರು ಎನ್ನಲಾಗಿತ್ತು. ಆದರೆ ಇದಕ್ಕೆ ಪೂರಕವಾದ ಅಂಶಗಳು ದೊರೆತಿರಲಿಲ್ಲ.
66 ವರ್ಷ ವಯಸ್ಸಿನ ವಜಿರಾಲಾಂಗ್ಕಾರ್ನ್, ಪಟ್ಟಕ್ಕೇರಿದ ಬಳಿಕ ಹತ್ತನೇ ರಾಮ ಎಂದು ಕರೆಸಿಕೊಳ್ಳಲಿದ್ದಾರೆ. 2016ರ ಅಕ್ಟೋಬರ್ನಲ್ಲಿ ವಜಿರಾಲಾಂಗ್ಕಾರ್ನ್ ತಂದೆ ರಾಜ ಭುಮಿಬೋಲ್ ಅದುಲ್ಯಾಡೆಜ್ ನಿಧನರಾಗಿದ್ದರು.
ಬೌದ್ಧ ಹಾಗೂ ಬ್ರಾಹ್ಮಣ ಸಂಪ್ರದಾಯದಂತೆ ರಾಜನ ಪಟ್ಟಾಭಿಷೇಕ ಕಾರ್ಯಕ್ರಮ ಶನಿವಾರದಂದು ಜರುಗಲಿದೆ. ಮರುದಿನ ರಾಜಧಾನಿ ಬ್ಯಾಂಕಾಕ್ನಲ್ಲಿ ಮೆರವಣಿಗೆ ನಡೆಯಲಿದೆ.