ಕರ್ನಾಟಕ

karnataka

ETV Bharat / briefs

ಮುಂಬೈ: ಕೋವಿಡ್ ರೋಗಿಗಳ ಸೇವೆಗೆ ನಿಂತ ದೇವಾಲಯಗಳು ಮತ್ತು ಗುರುದ್ವಾರಗಳು

ಕೋವಿಡ್ -19 ಎರಡನೇ ಅಲೆ ಬಹಳ ಭೀಕರವಾಗಿರುವ ಹಿನ್ನೆಲೆ ಆಮ್ಲಜನಕ , ಬೆಡ್​ ಮತ್ತು ವೆಂಟಿಲೇಟರ್‌ಗಳ ಕೊರತೆ ಎದುರಾಗಿದೆ. ಇಂತಹ ಸಮಯದಲ್ಲಿ ಅನೇಕ ದೇವಾಲಯಗಳೇ ಕೋವಿಡ್​ ಕೇರ್​ ಸೆಂಟರ್​ಗಳಾಗಿ ಪರಿವರ್ತನೆಯಾಗಿದ್ದು, ಸೋಂಕಿತರ ಜೀವ ಉಳಿಸುವ ಪ್ರಾಣವಾಯುವನ್ನು ಸಹ ಒದಗಿಸುತ್ತಿವೆ.

oxygen
oxygen

By

Published : May 15, 2021, 4:09 PM IST

ಮುಂಬೈ: ಕೊರೊನಾ ಉಲ್ಭಣವಾದ ಹಿನ್ನೆಲೆ ಕೆಲವು ದೇವಾಲಯಗಳು ಮತ್ತು ಗುರುದ್ವಾರಗಳು ಜನರ ರಕ್ಷಣೆಗೆ ಬಂದಿವೆ. ಕೆಲವು ದೇವಾಲಯಗಳನ್ನು ಕೋವಿಡ್ ಕೇಂದ್ರಗಳಾಗಿ ಪರಿವರ್ತಿಸಲಾಗಿದ್ದರೆ, ಕೆಲ ಗುರುದ್ವಾರಗಳಲ್ಲಿ ಆಮ್ಲಜನಕ ಸಿಲಿಂಡರ್ ಹಂಚಲಾಗುತ್ತಿದೆ.

ಕಾಂದಿವಲಿಯ ಪವನಧಾಮ ದೇವಸ್ಥಾನವನ್ನು ಕೋವಿಡ್ ಕೇಂದ್ರವಾಗಿ ಪರಿವರ್ತಿಸಿ ನೂರು ಹಾಸಿಗೆಗಳು ಮತ್ತು ಆಮ್ಲಜನಕವನ್ನು ಒದಗಿಸಲಾಗಿದೆ. ಈ ಕೇಂದ್ರದಲ್ಲಿ ದಿನದ 24 ಗಂಟೆಯೂ ವೈದ್ಯರ ತಂಡ ಲಭ್ಯವಿದೆ. ಆಸ್ಪತ್ರೆಗಳಲ್ಲಿ ಬೆಡ್​ ಹುಡುಕುವಲ್ಲಿ ರೋಗಿಗಳು ಸಮಸ್ಯೆಗಳನ್ನು ಎದುರಿಸುತ್ತಿರುವುದರಿಂದ ಇದು ಬಹಳ ಉಪಯುಕ್ತವಾಗಿದೆ.

ದಾದರ್ ಪೂರ್ವದ ಶ್ರೀ ಗುರು ಸಿಂಗ್ ಸಭಾ ಗುರುದ್ವಾರ ಸಮಿತಿಯು ಆಮ್ಲಜನಕವನ್ನು ಉಚಿತವಾಗಿ ನೀಡಲು ಪ್ರಾರಂಭಿಸಿದೆ. ಕೋವಿಡ್ ಸೋಂಕಿತರ ಸಂಬಂಧಿಕರು ಆಮ್ಲಜನಕ ಹುಡುಕುತ್ತಾ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಅಲೆಯದಂತೆ ಇದು ವರದಾನವಾಗಿದೆ. ಅಗತ್ಯವಿರುವ ರೋಗಿಗಳಿಗೆ ಉಚಿತವಾಗಿ ಒದಗಿಸಲು 80 ಸಣ್ಣ ಮತ್ತು ಜಂಬೊ ಆಮ್ಲಜನಕ ಸಿಲಿಂಡರ್‌ಗಳನ್ನು ಖರೀದಿಸಿದ್ದಾರೆ. ಹೆಚ್ಚಿನ ಆಮ್ಲಜನಕ ಸಿಲಿಂಡರ್‌ಗಳನ್ನು ಖರೀದಿಸಲು ಆದೇಶಿಸಲಾಗಿದೆ ಎಂದು ಶ್ರೀ ಗುರು ಸಿಂಗ್ ಸಭಾ ಗುರುದ್ವಾರ ಸಮಿತಿಯ ಅಧ್ಯಕ್ಷ ರಘಬೀರ್ ಸಿಂಗ್ ಗಿಲ್ ಹೇಳಿದ್ದಾರೆ.

ಅಂಧೇರಿ ಪೂರ್ವದ ಜೆ.ಬಿ. ನಗರದಲ್ಲಿರುವ ಜೈನ ದೇವಾಲಯ ಲಸಿಕೆ ಶಿಬಿರವನ್ನು ಪ್ರಾರಂಭಿಸಿದೆ. ಇಲ್ಲಿ ಲಸಿಕೆಗಳಿಗೆ ಕೋಲ್ಡ್ ಸ್ಟೋರೇಜ್ ಒದಗಿಸಲಾಗಿದೆ ಮತ್ತು ವೈದ್ಯರಿಗೆ ವಿಶ್ರಾಂತಿ ಪಡೆಯಲು ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಭದ್ರತೆಗಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕೋವಿನ್ ಅಪ್ಲಿಕೇಶನ್‌ನಲ್ಲಿ, ಕೇಂದ್ರವನ್ನು ತರುಣ್​ ಭರತ್ ಜೈನ್ ಮಂದಿರ ಹೆಸರಿನೊಂದಿಗೆ ಕಾಣಬಹುದು. ಇದು ಲಸಿಕೆಗಾಗಿ ಸೆವೆನ್ ಹಿಲ್ಸ್ ಆಸ್ಪತ್ರೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ABOUT THE AUTHOR

...view details