ಬಳ್ಳಾರಿ:ಏಪ್ರಿಲ್ 26ರಂದು ಬಳ್ಳಾರಿ ಬಾಲಯ್ಯನವರು ಮಹಾಮಾರಿ ಕೊರೊನಾ ಸೋಂಕಿಗೆ ಬಲಿಯಾಗಿರುವ ವಿಷಯ ತಿಳಿದ ತೆಲುಗಿನ ಖ್ಯಾತ ನಾಯಕ ನಟ ನಂದಮೂರಿ ಬಾಲಕೃಷ್ಣ ಅವರು ಅಂದೇ ಪೋನ್ ಕರೆ ಮಾಡಿ ಬಾಲಯ್ಯನವರ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ.
ಬಳ್ಳಾರಿ ಬಾಲಯ್ಯನವರ ಪುತ್ರನಾದ ತಾರಕ್ ಅವರ ಮೊಬೈಲ್ ಪೋನ್ಗೆ ಕರೆಮಾಡಿದ ನಂದಮೂರಿ ಬಾಲಕೃಷ್ಣ ಅವರು ಅಂದಾಜು ಐದು ನಿಮಿಷಗಳ ಕಾಲ ಮಾತನಾಡಿದ್ದಾರೆ. ಬಳ್ಳಾರಿ ಬಾಲಯ್ಯ ಶಿವೈಕ್ಯರಾದರು ಎಂದು ಗೊತ್ತಾಯಿತು. ಯಾವಾಗ? ಸಾವನ್ನ ಪ್ಪಿದರು. ನನಗೆ ಬಹಳ ನೋವಾಯಿತು? ಎಂಬಿತ್ಯಾದಿ ಪ್ರಶ್ನೆಗಳನ್ನ ಹಾಕಿದ ನಂದಮೂರಿ ಬಾಲಕೃಷ್ಣ ಅವರು ಬಾಲಯ್ಯನವರ ಪುತ್ರ ತಾರಕನ ಬಳಿ ಮಾಹಿತಿ ಪಡೆದ್ರು.
ಬಳಿಕ, ಬಾಲಯ್ಯನವರ ಪತ್ನಿಯೊಂದಿಗೂ ಮಾತನಾಡಿದ ನಂದಮೂರಿ ಬಾಲಕೃಷ್ಣ ಅವರು, ನಿಮಗೆ ಮಕ್ಕಳೆಷ್ಟು? ಎಲ್ಲರಿಗೂ ಮದುವೆಯಾಗಿದೆಯಾ ಎಂಬುದರ ಕುರಿತೂ ಕೂಡ ಮಾಹಿತಿ ಕೇಳಿದಾಗ, ಎಲ್ಲರಿಗೂ ಮದುವೆಯಾಗಿದೆ. ಮೂವರು ಪುತ್ರಿಯರಿದ್ದು, ಒಬ್ಬ ಪುತ್ರಿ ಸಿರುಗುಪ್ಪದಲ್ಲಿ ಇರುತ್ತಾರೆ. ಇನ್ನಿಬ್ಬರು ಬಳ್ಳಾರಿಯಲ್ಲಿ ಇರುತ್ತಾರೆ. ಪುತ್ರನಿಗೂ ಮದುವೆಯಾಗಿದೆ ಎಂಬ ಮಾಹಿತಿಯನ್ನ ಬಾಲಯ್ಯ ಅವರ ಪತ್ನಿಯಿಂದ ನಾಯಕ ನಟ ಬಾಲಕೃಷ್ಣ ಪಡೆದುಕೊಂಡರು.