ಕರ್ನಾಟಕ

karnataka

ETV Bharat / briefs

ಟೆಕ್ಕಿ ದಂಪತಿ‌ ನಡುವೆ ಜಗಳ: ಮನನೊಂದು ನೇಣಿಗೆ ಶರಣಾದ ಪತ್ನಿ! - ಆತ್ಮಹತ್ಯೆ

ಬೆಂಗಳೂರಿನಲ್ಲಿ ಖಾಸಗಿ ಕಂಪನಿವೊಂದರಲ್ಲಿ ಸಾಫ್ಟ್​ವೇರ್ ಉದ್ಯೋಗಿಯಾಗಿದ್ದ ಸುಪ್ರೀಯಾ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.‌ ಈಕೆಯ ಸಾವಿಗೆ ಕಾರಣವಾದ ಆರೋಪದಡಿ ಪತಿ ಅಕ್ಷಯ್​​ನನ್ನು ವಶಕ್ಕೆ ಪಡೆದುಕೊಂಡು ಜೆ.ಸಿ.ನಗರ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

ನೇಣಿಗೆ ಶರಣಾದ ಪತ್ನಿ

By

Published : May 7, 2019, 3:58 AM IST

ಬೆಂಗಳೂರು:ಕೌಟುಂಬಿಕ ಕಲಹಕ್ಕೆ ಬೇಸತ್ತು ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಜೆ.ಸಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ‌ ನಡೆದಿದೆ.

ಬೆಂಗಳೂರಿನಲ್ಲಿ ಖಾಸಗಿ ಕಂಪನಿವೊಂದರಲ್ಲಿ ಸಾಫ್ಟ್​ವೇರ್ ಉದ್ಯೋಗಿಯಾಗಿದ್ದ ಸುಪ್ರೀಯಾ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.‌ ಈಕೆಯ ಸಾವಿಗೆ ಕಾರಣನಾದ ಆರೋಪದಡಿ ಪತಿ ಅಕ್ಷಯ್​​ನನ್ನು ವಶಕ್ಕೆ ಪಡೆದುಕೊಂಡು ಜೆ.ಸಿ.ನಗರ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

ನೇಣಿಗೆ ಶರಣಾದ ಪತ್ನಿ

ಹುಬ್ಬಳ್ಳಿ‌ ಮೂಲದ ಸುಪ್ರೀಯಾ ನಾಲ್ಕು ವರ್ಷಗಳ ಹಿಂದೆ ಸಾಫ್ಟ್​​ವೇರ್ ಉದ್ಯೋಗಿ ಅಕ್ಷಯ್ ಜತೆ ಮದುವೆಯಾಗಿತ್ತು. ದಂಪತಿಗೆ ಒಂದು ವರ್ಷದ ಗಂಡು ಮಗುವಿದೆ. ಮೂರು ದಿನದ ಹಿಂದೆ ಪತ್ನಿಗೆ ಬೈಕ್‌‌ ಕೊಡಿಸುವುದಾಗಿ ಅಕ್ಷಯ್ ಹೇಳಿದ್ದ ಎನ್ನಲಾಗಿದ್ದು, ನಿನ್ನೆ ಸಂಜೆ ಕೌಟುಂಬಿ‌ಕ ಕಲಹ ಹಿನ್ನೆಲೆಯಲ್ಲಿ ಇಬ್ಬರ‌ ನಡುವೆ ಜಗಳ ನಡೆದಿದೆ. ಇದೇ ಕಾರಣಕ್ಕೆ ಮನನೊಂದು ‌ಮನೆಯಲ್ಲಿ ಯಾರು ಇಲ್ಲದ ವೇಳೆ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಸುಪ್ರೀಯಾ ಕುಟುಂಬಸ್ಥರು, ಅಕ್ಷಯ್ ಸುಪ್ರಿಯಾಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದ. ಜತೆಗೆ ಆತ ಬೇರೆ ಕಡೆ ಸಂಬಂಧ ಸಹ ಹೊಂದಿದ್ದನು ಎಂದು ತಿಳಿಸಿದ್ದಾರೆ. ಸದ್ಯ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಜೆ.ಪಿ.ನಗರ ಪೊಲೀಸರು ಅಕ್ಷಯ್​​ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.

ABOUT THE AUTHOR

...view details