ನವದೆಹಲಿ: ಟೀಂ ಇಂಡಿಯಾ ಸೇರಿದಂತೆ ಎಲ್ಲ ತಂಡಗಳು ಐಸಿಸಿ ವಿಶ್ವಕಪ್ಗಾಗಿ ಭರ್ಜರಿ ತಯಾರಿ ನಡೆಸಿದ್ದು, ಇದೇ ಮೇ 30ರಿಂದ ಮಹಾಟೂರ್ನಿ ಇಂಗ್ಲೆಂಡ್ನಲ್ಲಿ ಆರಂಭಗೊಳ್ಳಲಿದೆ. ಕೊಹ್ಲಿ ಪಡೆ ಕೂಡ ಸಮರಕ್ಕೆ ಸನ್ನದ್ಧವಾಗಿದ್ದು, ಮೇ 22ರಂದು ಪ್ರಯಾಣ ಬೆಳೆಸಲಿದೆ.
ಇದರ ಮಧ್ಯೆ ಟೀಂ ಇಂಡಿಯಾದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಮಾತನಾಡಿದ್ದು, ನಮ್ಮ ಬೌಲಿಂಗ್ ಶಕ್ತಿ ಮುಂದೆ ಎದುರಾಳಿ ತಂಡದ ಬ್ಯಾಟ್ಸ್ಮನ್ಗಳ ಆಟ ನಡೆಯುವುದಿಲ್ಲ ಎಂದು ತಿಳಿಸಿದ್ದಾರೆ. ಆರಂಭದ ಓವರ್ ಹಾಗೂ ಡೆತ್ ಓವರ್ಗಳಲ್ಲಿ ಅದ್ಭುತವಾಗಿ ಬೌಲಿಂಗ್ ಪ್ರದರ್ಶನ ನೀಡುವ ಸಾಮರ್ಥ್ಯ ನಮ್ಮಲಿದೆ ಎಂದು ತಿಳಿಸಿರುವ ಭುವಿ, ಎದುರಾಳಿ ತಂಡಗಳಿಗೆ ವಾರ್ನಿಂಗ್ ಮಾಡಿದ್ದಾರೆ.