ಕರ್ನಾಟಕ

karnataka

ETV Bharat / briefs

ಮತ್ತೊಮ್ಮೆ ಬಿಜೆಪಿ:  ಯಕ್ಷಗಾನ ನಡೆಸಿ ಹರಕೆ ತೀರಿಸಿದ ಟೀಂ ಮೋದಿ ತಂಡ! - ಟೀಂ ಮೋದಿ ತಂಡ

ಮೋದಿ ಮತ್ತೊಮ್ಮೆ ಕೇಂದ್ರದ ಚುಕ್ಕಾಣಿ ಹಿಡಿಯಲಿ ಎಂದು ಮಂಗಳೂರಿನ ಟೀ ಮೋದಿ ತಂಡ ಹರಕೆಕೊಂಡಿತ್ತು. ಅದರಂತೆ ಗುರುವಾರ ಲೋಕಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು ಈಗ ಹರಕೆ ತೀರಿಸಲು ಯಕ್ಷಗಾನವನ್ನು ಆಯೋಜಿಸಿದೆ.

ಯಕ್ಷಗಾನ ಪ್ರದರ್ಶಿಸಿ ಹರಕೆ ತೀರಿಸಿದ ಟೀಂ ಮೋದಿ ತಂಡ

By

Published : May 25, 2019, 12:54 AM IST

ಮಂಗಳೂರು: ಮತ್ತೊಮ್ಮೆ ನರೇಂದ್ರ ಮೋದಿ ಅವರು ಕೇಂದ್ರದ ಗದ್ದುಗೆ ಏರಬೇಕು ಎಂದು ಟೀಂ ಮೋದಿ ಎಂಬ ತಂಡ ಹರಕೆ ಕಟ್ಟಿಕೊಂಡಿತ್ತು. ಅದರಂತೆ ಕೇಂದ್ರದಲ್ಲಿ ಭರ್ಜರಿ ಬಹುಮತದೊಂದಿಗೆ ಎನ್​ಡಿಎ ಸರ್ಕಾರ ಜಯಭೇರಿ ದಾಖಲಿಸಿದೆ.

ಯಕ್ಷಗಾನ ಪ್ರದರ್ಶಿಸಿ ಹರಕೆ ತೀರಿಸಿದ ಟೀಂ ಮೋದಿ ತಂಡ

ಟೀಂ ಮೋದಿ ತಂಡ ಕಟ್ಟಿಕೊಂಡ ಹರಕೆ ತೀರಿಸಲು ಶುಕ್ರವಾರದಂದು ನಗರದ ರಥ ಬೀದಿ ಶ್ರೀ ವೆಂಕಟರಮಣ ದೇವಾಲಯದ ಮುಂಭಾಗದ ಕಟೀಲು ಶ್ರೀದುರ್ಗಾ ಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಶ್ರೀದೇವಿ ಮಹಾತ್ಮೆ ಎಂಬ ಯಕ್ಷಗಾನವನ್ನು ಆಯೋಜಿಸಿ ಗಮನ ಸೆಳೆದಿದೆ.

ಈ ಹಿಂದೆ ಡಿ‌.29ರಂದು ಟೀಂ ಮೋದಿ ತಂಡ ಮೋದಿ ಮತ್ತೆ ಪ್ರಧಾನಿಯಾಗಲೆಂದು ನಗರದ ಮಣ್ಣಗುಡ್ಡೆ ಗುರ್ಜಿಯ ಬಳಿ ಶ್ರೀ ದೇವಿ ಮಹಾತ್ಮೆ ಹರಕೆ ಯಕ್ಷಗಾನ ಸೇವೆ ಆಯೋಜಿಸಿತ್ತು. ಈಗ ಮತ್ತೊಮ್ಮೆ ಮೋದಿಯವರು ಭರ್ಜರಿ ಯಶಸ್ಸು ಕಂಡ ಸಂತೋಷಕ್ಕೆ ಯಕ್ಷಗಾನ ಹರಕೆ ಸೇವೆಯನ್ನು ಮುಂದುವರೆಸಿದೆ.

ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗುವರು ಎಂಬ ಅಚಲ ವಿಶ್ವಾಸದಿಂದ ಚುನಾವಣಾ ಫಲಿತಾಂಶಕ್ಕಿಂತ ಮೊದಲೇ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಯಕ್ಷಗಾನ ಬುಕ್ಕಿಂಗ್ ಮಾಡಿದ್ದೆವು. ಗುರುವಾರ ಚುನಾವಣಾ ಫಲಿತಾಂಶ ಘೋಷಣೆಯಾಗಿದ್ದು. ಮೋದಿ ಭರ್ಜರಿ ಯಶಸ್ಸು ಗಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಯಕ್ಷಗಾನ ಆಯೋಜಿಸಿದ್ದೇವೆ ಎಂದು ಟೀಂ ಮೋದಿ ತಂಡದ ಸದಸ್ಯ ಗೋಪಿ ಭಟ್ ಅಭಿಮಾನದಿಂದ ಹಂಚಿಕೊಂಡರು.

ಮೋದಿಯವರು ಐದು ವರ್ಷ ನಡೆಸಿದ ಆಡಳಿತದಿಂದ ಪ್ರಭಾವಿತರಾದ ಜನರು ಅವರಿಗೆ ಮತ್ತೆ ಬೆಂಬಲಿಸಿದ್ದಾರೆ. ದೇಶ ಸುರಕ್ಷಿತವಾಗಬೇಕಾದರೆ ದಿಟ್ಟತನದಿಂದ ಎದುರಿಸುವ ನರೇಂದ್ರ ಮೋದಿಯವರೇ ಪ್ರಧಾನಿಯಾಗಬೇಕು ಎಂದು ಹರಕೆ ಹೊತ್ತಿದ್ದರು ಎಂದು ಟೀಂ ಮೋದಿ ಸದಸ್ಯ ಹನುಮಂತ ಕಾಮತ್ ವಿಶ್ವಾಸ ವ್ಯಕ್ತಪಡಿಸಿದರು.

ABOUT THE AUTHOR

...view details