ಕರ್ನಾಟಕ

karnataka

ETV Bharat / briefs

ಟಿಡಿಆರ್ ವರ್ಗಾವಣೆ ವಂಚನೆ ಪ್ರಕರಣ : ತನಿಖೆ ಚುರುಕುಗೊಳಿಸಿದ ಎಸಿಬಿ - undefined

ಟಿಡಿಆರ್ ವರ್ಗಾವಣೆಯಲ್ಲಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿ‌ ಮುಂದೆ ಐವರು ಆರೋಪಿಗಳು ಹಾಜರಾಗಿದ್ದು, ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

ತನಿಖೆ ಚುರುಕುಗೊಳಿಸಿದ ಎಸಿಬಿ

By

Published : Jun 2, 2019, 11:21 AM IST

ಬೆಂಗಳೂರು : ಟಿಡಿಆರ್ ವರ್ಗಾವಣೆಯಲ್ಲಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿ‌ ಮುಂದೆ ಐವರು ಆರೋಪಿಗಳು ಹಾಜರಾಗಿದ್ದಾರೆ.

ವಾಲ್ ಮಾರ್ಕ್ ವ್ಯವಸ್ಥಾಪಕ ನಿರ್ದೇಶಕ ರತನ್ ಲಾಥ್, ಅಮಿತ್ ಬೋಳಾರ, ಮಧ್ಯವರ್ತಿಗಳಾದ ಗೌತಮ್, ದೀಪಕ್ ಕುಮಾರ್ ಮತ್ತು ಸುರೇಂದ್ರ ಹಾಜರಾಗಿ ತನಿಖೆಗೆ ಸಹಕಾರ ನೀಡಿದ್ದಾರೆ.


ಇನ್ನು ಈ ಆರೋಪಿಗಳು ಲೋಕಾಯುಕ್ತ ವಿಶೇಷ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು ಪಡೆದಿದ್ದರು. ಈ ವೇಳೆ ನ್ಯಾಯಾಲಯ ಜೂನ್ 3 ರೊಳಗೆ ಎಸಿಬಿ ಎದುರು ಹಾಜರಾಗಲು ಸೂಚನೆ ನೀಡಿತ್ತು. ಹಾಗೆ ಪ್ರತಿಯೊಬ್ಬರೂ 2 ಲಕ್ಷ ರೂ. ಮೌಲ್ಯದ ವೈಯಕ್ತಿಕ ಬಾಂಡ್ ನೀಡಬೇಕು. ತನಿಖೆಗೆ ಸಹಕರಿಸಬೇಕು, ಸಾಕ್ಷ್ಯ ನಾಶ ಪಡಿಸುವಂತಿಲ್ಲ, ತನಿಖೆ ಪೂರ್ಣಗೊಳ್ಳುವವರೆಗೂ ಪ್ರತಿ ತಿಂಗಳ 2 ಮತ್ತು 4ನೇ ಸೋಮವಾರ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು. ದೇಶ ಬಿಟ್ಟು ಹೋಗುವಂತಿಲ್ಲ ಎಂದು ಲೋಕಾಯುಕ್ತ ನ್ಯಾಯಾಲಯ ಷರತ್ತು ವಿಧಿಸಿತ್ತು.

ಹೀಗಾಗಿ ಎಸಿಬಿ ಮುಂದೆ ಹಾಜರಾಗಿ ಜಾಮೀನು ಷರತ್ತು ಪೂರ್ಣಗೊಳಿಸಿದ್ದಾರೆ. ಇನ್ನು ಎಸಿಬಿ ಅಧಿಕಾರಿಗಳು ಟಿಡಿಆರ್ ಪ್ರಕರಣಕ್ಕೆ ಸಂಬಂಧಿಸಿಸಂತೆ ತನಿಖೆ ಚುರುಕುಗೊಳಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details