ಧಾರವಾಡ:ಗೋಮಾಳ ಭೂಮಿಗೆ ಕಾಯ್ದಿರಿಸಿದ ಭೂಮಿಯನ್ನು ಪರಭಾರೆ ಮಾಡಬಾರದು ಎಂದು ಆಗ್ರಹಿಸಿ ತಾಲೂಕಿನ ತಡಕೋಡ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಗೋಮಾಳ ಜಾಗ ಸಂರಕ್ಷಿಸಿ; ತಡಕೋಡ ರೈತರ ಆಗ್ರಹ - Vijayapura latest news
ಧಾರವಾಡ ತಾಲೂಕಿನ ತಡಕೋಡ ಗ್ರಾಮಸ್ಥರು, ಗೋಮಾಳ ಎಂದು ಕಾಯ್ದಿರಿಸಿದ ಭೂಮಿಯನ್ನು ಪರಭಾರೆ ಮಾಡಬಾರದೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
Farmers protest
ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ರೈತರು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ತಾಲೂಕಿನ ತಡಕೋಡ ಗ್ರಾಮ ವ್ಯಾಪ್ತಿಯ ತಿಮ್ಮಾಪುರ ಮಹಲ್ ತಡಕೋಡ ಗ್ರಾಮದ ಬ್ಲಾಕ್ ನಂಬರ್ 80 ಕ್ಷೇತ್ರದ 15 ಎಕರೆ 39 ಗುಂಟೆ ಜಾಗವು ಸರ್ಕಾರ ಕಾಯ್ದಿರಿಸಿದ ಗೋಮಾಳ ಜಾಗವಾಗಿದೆ.
ಗ್ರಾಮದ ದನಕರುಗಳಿಗೆ ಮೇಯಿಸಲು ಈ ಜಾಗ ಕಾಯ್ದಿರಿಸಲಾಗಿದೆ. ಯಾವುದೇ ಅನ್ಯ ಉದ್ದೇಶಕ್ಕಾಗಿ, ಪಟ್ಟಭದ್ರ ಹಿತಾಸಕ್ತಿಗಳ ಒತ್ತಡಕ್ಕೆ ಮಣಿಯದೆ ಕಾಯ್ದಿಟ್ಟ ಗೋಮಾಳ ಜಾಗವನ್ನು ಪರಭಾರೆ ಮಾಡಬಾರದು. ಜಮೀನನ್ನು ಅಳತೆ ಮಾಡಿ ಹದ್ದು ಬಸ್ತು ಮಾಡಿ ಸಂರಕ್ಷಣೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
Last Updated : Jul 24, 2020, 5:56 PM IST