ಮುಂಬೈ:ಮಾಲ್ಡೀವ್ಸ್‌ನಲ್ಲಿ ತನ್ನ ಸಹೋದರಿಯರೊಂದಿಗೆ ಕಾಲ ಕಳೆಯುತ್ತಿರುವ ನಟಿ ತಾಪ್ಸಿ ಪನ್ನು ಕಡಲತೀರದಲ್ಲಿ ತೆಗೆಸಿರುವ ಆಕರ್ಷಕ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. 33 ವರ್ಷದ ಈ ತಾರೆ, ಪ್ರಕೃತಿಯ ಸೌಂದರ್ಯ ಸವಿಯುತ್ತಿರುವ ಸುಂದರವಾದ ಚಿತ್ರಗಳನ್ನು ನೀವೂ ನೋಡಿ..
ಮಾಲ್ಡೀವ್ಸ್‌ನಲ್ಲಿ ಬಾಲಿವುಡ್ ಪಿಂಕ್ ನಟಿ ತಾಪ್ಸಿಯ ಬೆಡಗು ಬಿನ್ನಾಣ: ಫೋಟೋಸ್ - taapsee pannu latest pics
'ಪಿಂಕ್' ನಟಿ ಮಾಲ್ಡೀವ್ಸ್ ನಲ್ಲಿ ತನ್ನ ಸಹೋದರಿಯರೊಂದಿಗೆ ಕಾಲ ಕಳೆಯುತ್ತಿದ್ದು, ಕಡಲತೀರದಲ್ಲಿ ತೆಗೆಸಿರುವ ಅದ್ಭುತವಾದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಸಹೋದರಿಯರೊಂದಿಗೆ ಮಾಲ್ಡೀವ್ಸ್‌ನಲ್ಲಿ ಸಮಯ ಕಳೆಯುತ್ತಿರುವ ತಾಪ್ಸಿಯ ಸುಂದರ ಫೋಟೊ
ವಿಶಾಲವಾದ ನೀಲಿ ಆಕಾಶ, ಸ್ವಚ್ಛ, ಶ್ವೇತ ಮರಳು ಮತ್ತು ತಿಳಿಯಾದ ನೀರಿನ ಮಧ್ಯೆ ಇರುವ ಮರದ ರಚನೆಯ ಪಕ್ಕಕ್ಕೆ ನಿಂತು ತಾಪ್ಸಿ ಆಕರ್ಷಕವಾಗಿ ಪೋಸ್ ಕೊಟ್ಟಿದ್ದಾರೆ.
ತನ್ನ ಇನ್ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಸಹೋದರಿಯರಾದ ಇವಾನಿಯಾ ಮತ್ತು ಶಗುನ್ ಪನ್ನು ಅವರೊಂದಿಗೆ ಗೆಟ್ಅವೇಗೆ ತೆರಳಿದ್ದ ಚಿತ್ರಗಳನ್ನು ಪನ್ನು ಇತ್ತೀಚೆಗೆ ಹಂಚಿಕೊಂಡಿದ್ದರು.