ಕರ್ನಾಟಕ

karnataka

ETV Bharat / briefs

ಡಬಲ್ ಖುಷಿಯಲ್ಲಿ ಮಜಾ ಟಾಕೀಸ್ ರಾಣಿ ಶ್ವೇತಾ ಚೆಂಗಪ್ಪ - ಶ್ವೇತಾ ಚೆಂಗಪ್ಪ ಮದುವೆ

ಕೊರೊನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿರುವ ನಟಿ ಶ್ವೇತಾ ಚೆಂಗಪ್ಪ ತಮ್ಮ ಮದುವೆ ವಾರ್ಷಿಕೋತ್ಸವದ ಸಂತಸದಲ್ಲಿದ್ದಾರೆ.

Swetha chengappa celebrating marriage anniversary
Swetha chengappa celebrating marriage anniversary

By

Published : May 4, 2021, 10:58 PM IST

ಕೊರೊನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿರುವ ನಟಿ ಶ್ವೇತಾ ಚೆಂಗಪ್ಪ ತಮ್ಮ ಮದುವೆ ವಾರ್ಷಿಕೋತ್ಸವದ ಸಂತಸದಲ್ಲಿದ್ದಾರೆ. ಮೇ 4 ಈ ಜೋಡಿಯ ವಿವಾಹ ದಿನ. ಇವರಿಗೆ ಜಿಯಾನ್​ ಎಂಬ ಮಗ ಕೂಡಾ ಇದ್ದಾನೆ.

ಕುಟುಂಬದ ಜೊತೆಗೆ ಮಜಾ ಟಾಕೀಸ್ ರಾಣಿ
ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ನಿನ್ನ ಜೊತೆ ಎಲ್ಲವನ್ನೂ ಎದುರಿಸುತ್ತೇನೆ. ಲವ್ ಯೂ ಎಂದು ಪತಿ ಕಿರಣ್ ಅಪ್ಪಚ್ಚು ಅವರಿಗೆ ವಿವಾಹ ವಾರ್ಷಿಕೋತ್ಸವಕ್ಕೆ ವಿಶ್​ ಮಾಡಿದ್ದಾರೆ ಶ್ವೇತಾ ಚೆಂಗಪ್ಪ. ಇವರ ವಿವಾಹ ವಾರ್ಷಿಕೋತ್ಸವಕ್ಕೆ ಕಿರುತೆರೆಯ ಕಲಾವಿದರು ಹಾಗೂ ಹಿತೈಷಿಗಳು ಶುಭ ಕೋರಿದ್ದಾರೆ. ಮಜಾಟಾಕೀಸ್ ರಾಣಿಯಾಗಿ ತೆರೆ ಮೇಲೆ ಮಿಂಚುತ್ತಿದ್ದ ಶ್ವೇತಾ ಚೆಂಗಪ್ಪ ಅವರಿಗೆ ಕೊರೋನಾ ಪಾಸಿಟಿವ್​ ಆಗಿತ್ತು. 21 ದಿನಗಳ ಕಾಲ ಕ್ವಾರಂಟೈನ್ ಆಗಿದ್ದ ಶ್ವೇತಾ ಅವರು, ಇದೀಗ ಚೇತರಿಸಿಕೊಂಡಿದ್ದಾರೆ. ಕ್ವಾರಂಟೈನ್ ನಂತರ ಮತ್ತೊಮ್ಮೆ ಕೊರೊನಾ ಟೆಸ್ಟ್​ ಮಾಡಿಸಿ ನೆಗೆಟಿವ್ ಫಲಿತಾಂಶ ಬಂದಿದೆ. ಈ ಬಗ್ಗೆ ನಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಕುಟುಂಬದ ಜೊತೆಗೆ ಮಜಾ ಟಾಕೀಸ್ ರಾಣಿ

ABOUT THE AUTHOR

...view details