ಬೆಳಗಾವಿ: ಹಿಂದೆ ಸಿದ್ದಾರಾಮಯ್ಯ ಹಾಗೂ ಕುಮಾರಸ್ವಾಮಿಯವರು ರಾಜ್ಯದ ಭೂಮಿ ಕಬಳಿಕೆ ಮಾಡುವವರನ್ನು ವಿರೋಧಿಸಿದ್ದರು. ಈಗ ಅವರೇ ಜಿಂದಾಲ್ ಕಂಪನಿಗೆ ಜಮೀನು ನೀಡುತ್ತಿರುವುದು ರಾಜ್ಯಕ್ಕೆ ಮಾಡಿದ ಅನ್ಯಾಯ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಿಂದಾಲ್ ಕಂಪನಿಗೆ ಜಮೀನು ವಿಚಾರ: ಸುರೇಶ್ ಅಂಗಡಿ ಹೇಳಿದ್ದೇನು? - undefined
ಹಿಂದೆ ಸಿದ್ದಾರಾಮಯ್ಯ ಹಾಗೂ ಕುಮಾರಸ್ವಾಮಿಯವರು ರಾಜ್ಯದ ಭೂಮಿ ಕಬಳಿಕೆ ಮಾಡುವವರನ್ನು ವಿರೋಧಿಸಿದ್ದರು. ಈಗ ಅವರೇ ಜಿಂದಾಲ್ ಕಂಪನಿಗೆ ಜಮೀನು ನೀಡುತ್ತಿರುವುದು ರಾಜ್ಯಕ್ಕೆ ಮಾಡಿದ ಅನ್ಯಾಯ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
![ಜಿಂದಾಲ್ ಕಂಪನಿಗೆ ಜಮೀನು ವಿಚಾರ: ಸುರೇಶ್ ಅಂಗಡಿ ಹೇಳಿದ್ದೇನು?](https://etvbharatimages.akamaized.net/etvbharat/prod-images/768-512-3550649-thumbnail-3x2-.jpg)
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈಲ್ವೆ ಖಾತೆಯಿಂದ ರಾಜ್ಯದಲ್ಲಿ ಅನೇಕ ಯೋಜನೆಗಳನ್ನು ತರುವಂತಹ ಸವಾಲುಗಳು ನಮ್ಮ ಮುಂದಿದ್ದು, ಬರುವ ದಿನಗಳಲ್ಲಿ ಎಲ್ಲಾ ಜನಪ್ರತಿನಿಧಿಗಳ ಜೊತೆ ಚರ್ಚೆಸಿ ಶೀಘ್ರವಾಗಿ ಅವಶ್ಯಕತೆ ಇರುವ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತದೆ. ಕೇವಲ ಹೊಸ ಯೋಜನೆಗಳನ್ನು ತರುವುದಷ್ಟೆ ಮಹತ್ವವಲ್ಲ. ಈಗಿರುವ ರೈಲು ಪ್ರಯಾಣದಲ್ಲಿ ಶುಚಿತ್ವ ಮತ್ತು ಉತ್ತಮ ಸೇವೆ ನೀಡುವುದು ನಮ್ಮ ಆಲೋಚನೆಯಾಗಿದ್ದು, ಬರುವಂತಹ ದಿನಗಳಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.
ಐಎಂಎ ಸಂಸ್ಥೆ ಜನರಿಗೆ ವಂಚನೆ ಮಾಡಿರುವುದು ನಮ್ಮ ಗಮನಕ್ಕೆ ಬಂದಿದೆ. ಜನರ ಹಣವನ್ನು ಲೂಟಿ ಹೊಡೆದು ಬೇರೆ ದೇಶಕ್ಕೆ ಪರಾರಿಯಾದವರನ್ನು ಬಿಡುವುದಿಲ್ಲ. ಹೊರ ದೇಶದಲ್ಲಿ ಆರೋಪಿಗಳು ತಲೆಮರಿಸಿಕೊಂಡರು ಅವರನ್ನು ದೇಶಕ್ಕೆ ವಾಪಸ್ ತರುವಂತಹ ಕಾನೂನು ನಮ್ಮಲ್ಲಿದ್ದು, ಇದನ್ನು ಇನ್ನಷ್ಟು ಬಿಗಿಗೊಳಿಸಲಾಗುವುದು ಎಂದರು.