ಕರ್ನಾಟಕ

karnataka

ETV Bharat / briefs

ಲತಾ ರಜನಿಕಾಂತ್​ಗೆ ಎದುರಾಯ್ತು ಸಂಕಷ್ಟ... ವಂಚನೆ ಪ್ರಕರಣದಲ್ಲಿ ಸುಪ್ರೀಂ​​ನಿಂದ ನೋಟಿಸ್​​ - ರಜನಿಕಾಂತ್​ ಪತ್ನಿ

ಕೊಚ್ಚಡಿಯನ್​ ಸಿನಿಮಾ ಸಂಬಂಧ ಜಾಹೀರಾತು ಮಾಡಿದ್ದ ಆಡ್​ ಬ್ಯೂರೋ ಆಡ್ವಟೈಸಿಂಗ್ ಪ್ರೈವೆಟ್ ಲಿಮಿಟೆಡ್ ಕಂಪೆನಿಗೆ ಸಂಭಾವನೆಯಲ್ಲಿ ವ್ಯತ್ಯಾಸ ಮಾಡಿದ್ದ ಲತಾ ರಜಿನಿಕಾಂತ್ ವಿರುದ್ದ ಸಿವಿಲ್ ಕೋರ್ಟ್​ನಲ್ಲಿ ದೂರು ದಾಖಲಾಗಿತ್ತು.

ಲತಾ ರಜನಿಕಾಂತ್​

By

Published : May 12, 2019, 1:00 AM IST

ಬೆಂಗಳೂರು: 2014ರಲ್ಲಿ ತೆರೆ ಕಂಡಿದ್ದ ಕೊಚ್ಚಡಿಯನ್​ ಸಿನಿಮಾಗೆ ಸಂಬಂಧಿಸಿದಂತೆ ಜಾಹಿರಾತು ಕಂಪನಿಯೊಂದಕ್ಕೆ ಹಣ ಪಾವತಿಸುವಂತೆ ನೀಡಿದ್ದ ಆದೇಶ ಪಾಲಿಸದ ಹಿನ್ನಲೆಯಲ್ಲಿ ತಮಿಳು ನಟ ರಜನಿಕಾಂತ್​ ಪತ್ನಿ ಲತಾ ರಜನಿಕಾಂತ್​ ಅವರಿಗೆ ಸುಪ್ರೀಂಕೋರ್ಟ್​ ನೋಟಿಸ್​ ನೀಡಿದೆ.

ಲತಾ ರಜನಿಕಾಂತ್​ಗೆ ನೋಟಿಸ್​​

ಕೊಚ್ಚಡಿಯನ್​ ಸಿನಿಮಾ ಸಂಬಂಧ ಜಾಹೀರಾತು ಮಾಡಿದ್ದ ಆಡ್​ ಬ್ಯೂರೋ ಆಡ್ವಟೈಸಿಂಗ್ ಪ್ರೈವೆಟ್ ಲಿಮಿಟೆಡ್ ಕಂಪೆನಿಗೆ ಸಂಭಾವನೆಯಲ್ಲಿ ವ್ಯತ್ಯಾಸ ಮಾಡಿದ್ದ ಲತಾ ರಜಿನಿಕಾಂತ್ ವಿರುದ್ದ ಸಿವಿಲ್ ಕೋರ್ಟ್​ನಲ್ಲಿ ಕಂಪೆನಿ ಮಾಲೀಕ ಅಬಿರ್ ಚಂದ್ ನಹರ್ ಕೋರ್ಟ್​​​ನಲ್ಲಿ 10 ಕೋಟಿ ವಂಚನೆ ಕೇಸ್ ಹಾಕಿದ್ದರು .ಅಲ್ಲದೇ ನಕಲಿ ದಾಖಲೆ ತೋರಿಸಿ ವಂಚನೆ ಮಾಡಿದ್ದ ಅರೋಪ ಮಾಡಿದ್ದರು. ಆದರೆ ಇದನ್ನ ಪ್ರಶ್ನೀಸಿ ಲತಾ ರಜನಿಕಾಂತ್ ಹೈಕೋರ್ಟ್ ಮೊರೆ ಹೋಗಿದ್ದರು. ಈ ಪ್ರಕರಣವನ್ನು ರಾಜ್ಯ ಹೈಕೋರ್ಟ್ ಕ್ವಾಷ್ ಮಾಡಿತ್ತು.

ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಆ್ಯಡ್ ಕಂಪನಿ ಮಾಲೀಕ‌ ‌‌ನಂತರ ಪ್ರಕರಣವನ್ನ ವಿಚಾರಣೆ ಮಾಡಿದ್ದ ಸುಪ್ರೀಂಕೋರ್ಟ್​ ಪೊಲೀಸರಿಗೆ ತನಿಖೆ ಮಾಡುವಂತೆ ಆದೇಶಿಸಿತ್ತು. ಈ ಹಿನ್ನಲೆ ಪ್ರಕರಣದ ತನಿಖೆಯನ್ನ ಕೈಗೆತ್ತಿಕೊಂಡಿದ್ದ ಹಲಸೂರುಗೇಟ್ ಪೊಲೀಸರು ನೊಟಿಸ್ ಜಾರಿ‌ ಮಾಡಿದ್ದಾರೆ. ಈ ಹಿಂದೆ ಕೂಡ ಅವರಿಗೆ ನೋಟಿಸ್​ ಜಾರಿ ಮಾಡಿದಾಗ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರಲಿಲ್ಲ.

ಇದೀಗ ನೋಟಿಸ್ ರಿಸಿವ್​ ಮಾಡಿರುವ ಲತಾ, ನಾನು ಪ್ರವಾಸದಲ್ಲಿದ್ದೇನೆ ಮೇ 20ರ ನಂತರ ಹಾಜರಾಗುವುದಾಗಿ ಹೇಳಿದ್ದಾರೆ. ಇನ್ನು ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಕಳೆದ 2015ರಲ್ಲಿ ಎಫ್ಐಆರ್ ದಾಖಲಾಗಿತ್ತು. ಐಪಿಸಿ ಸೆಕ್ಷನ್ 196,199,420,463 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ABOUT THE AUTHOR

...view details