ಗುರುದಾಸಪುರ( ಪಂಜಾಬ್): ಬಿಜೆಪಿ ಈ ಬಾರಿ ಗುರುದಾಸಪುರ ಸಂಸತ್ ಸ್ಥಾನಕ್ಕೆ ನಟ ಸನ್ನಿ ಡಿಯೋಲ್ಗೆ ಟಿಕೆಟ್ ನೀಡಿದೆ. ಒಂದೆಡೆ ಕ್ರಿಕೆಟರ್ ನವಜೋತ್ ಸಿಧು ಬಿಜೆಪಿ ತ್ಯಜಿಸಿ ಪ್ರಧಾನಿ ವಿರುದ್ಧ ತೊಡೆ ತಟ್ಟಿದ್ದರೆ, ಇತ್ತ ಬಿಜೆಪಿ ಮತ್ತೊಬ್ಬ ಪ್ರಭಾವಿ ನಟನಿಗೆ ಮಣೆ ಹಾಕುವ ಮೂಲಕ ಪಂಜಾಬ್ನಲ್ಲಿ ನವಜೋತ್ ಸಿಧುಗೆ ಟಾಂಗ್ ಕೊಡಲು ಅಣಿ ಆಗಿದೆ.
ಗೆಲುವಿಗಾಗಿ ದೇವರ ಮೊರೆ ಹೋದ ಸನ್ನಿ ಡಿಯೋಲ್ - ದೇರಾ ಬಾಬಾ ನಾನಕ್
ಬಿಜೆಪಿ ಅಭ್ಯರ್ಥಿ ಸನ್ನಿ ಡಿಯೋಲ್ ಇಂದು ಗುರುದ್ವಾರ ದೇರಾ ಬಾಬಾ ನಾನಕ್ಗೆ ಭೇಟಿ ನೀಡಿ ದೇರಾ ಬಾಬಾ ನಾನಕ್ ಅವರ ಆಶೀರ್ವಾದ ಪಡೆದರು.

ಸನ್ನಿ ಡಿಯೋಲ್
ಅಂದಹಾಗೆ ಬಿಜೆಪಿ ಅಭ್ಯರ್ಥಿ ಸನ್ನಿ ಡಿಯೋಲ್ ಇಂದು ಗುರುದ್ವಾರ ದೇರಾ ಬಾಬಾ ನಾನಕ್ಗೆ ಭೇಟಿ ನೀಡಿ ದೇರಾ ಬಾಬಾ ನಾನಕ್ ಅವರ ಆಶೀರ್ವಾದ ಪಡೆದರು.
ದೇವರಿಗೆ ಪ್ರಾರ್ಥನೆ ಸಲ್ಲಿಸಿದ ಸನ್ನಿ ಡಿಯೋಲ್, ಚುನಾವಣೆಯಲ್ಲಿ ತಮ್ಮ ಗೆಲುವಿಗೆ ಪ್ರಾರ್ಥಿಸಿದರು.