ಕರ್ನಾಟಕ

karnataka

ETV Bharat / briefs

2018 ಈ ಮೋಸ್ಟ್​​ ರೆಪ್ಯೂಟೇಬಲ್​ ಸಿಇಒ...ಈ ಬಾರಿ ಟಾಪ್​ 10ರಲ್ಲೂ ಪಡೆಯಲಿಲ್ಲ ಸ್ಥಾನ...! - ನ್ಯೂಯಾರ್ಕ್

ಸುಂದರ್​ ಪಿಚೈ ತಮ್ಮ ಕಂಪನಿ ಗೂಗಲ್​ನಲ್ಲಿ ಬಂದ ಲೈಂಗಿಕ ಕಿರುಕುಳ ಪ್ರಕರಣ ನಿಭಾಯಿಸುವಲ್ಲಿ ಎಡವಿದ್ದು, ಈ ಸಂಬಂಧ ಬಂದ ಟೀಕೆಗಳಿಂದಾಗಿ ಈ ಬಾರಿ ವಿಖ್ಯಾತ ಸಿಇಒಗಳ ಟಾಪ್​ 10 ಪಟ್ಟಿಯಿಂದ ಹೊರ ಬಿದ್ದಿದ್ದಾರೆ.

ಸುಂದರ್​ ಪಿಚೈ

By

Published : May 27, 2019, 4:54 PM IST

ನ್ಯೂಯಾರ್ಕ್​: 2018 ನೇ ಇಸವಿ... ಗೂಗಲ್​ನ ಸಿಇಒ ಔನ್ನತ್ಯದಲ್ಲಿದ್ದ ಕಾಲವದು. ವಿಶ್ವದ ಅತ್ಯಂತ ವಿಶ್ವಾಸಾರ್ಹ ಹಾಗೂ ಖ್ಯಾತ ಸಿಇಒ ಎಂಬ ಹೆಗ್ಗಳಿಕೆ ಭಾರತ ಮೂಲದ ಸುಂದರ್​ ಪಿಚೈ ಪಾಲಿಗೆ ಒಲಿದು ಬಂದಿತ್ತು.

ಆದರೆ, 12 ತಿಂಗಳುಗಳ ಕಾಲ ಚಕ್ರ ಉರುಳಿಹೋಗಿದೆ. ಸುಂದರ್​ ಪಿಚೈ ತಮ್ಮ ಕಂಪನಿ ಗೂಗಲ್​ನಲ್ಲಿ ಬಂದ ಲೈಂಗಿಕ ಕಿರುಕುಳ ಪ್ರಕರಣ ನಿಭಾಯಿಸುವಲ್ಲಿ ಎಡವಿದ್ದು, ಈ ಸಂಬಂಧ ಬಂದ ಟೀಕೆಗಳಿಂದಾಗಿ ಈ ಬಾರಿ ವಿಖ್ಯಾತ ಸಿಇಒಗಳ ಟಾಪ್​ 10 ಪಟ್ಟಿಯಿಂದ ಹೊರ ಬಿದ್ದಿದ್ದಾರೆ.

ನಂಬರ್​ ಒನ್​ ಇರಲಿ 10ರಲ್ಲೂ ಸ್ಥಾನ ಪಡೆಯುವಲ್ಲಿ ಪಿಚೈ ವಿಫಲರಾಗಿದ್ದಾರೆ. ಇನ್ನು ಲಿಂಕ್ಡ್​​ಇನ್​ ಸಿಇಒ ಮೈಕಲ್​​ ವೇನರ್​ ಸಹ ಲಿಸ್ಟ್​ನಿಂದ ಹೊರ ಬಿದ್ದಿದ್ದಾರೆ ಎಂದು ಪೋರ್ಬ್ಸ್​ ವರದಿ ಹೇಳಿದೆ.

ಈ ಬಾರಿ ಅತ್ಯಂತ ವಿಶ್ವಾಸಾರ್ಹ ಹಾಗೂ ಖ್ಯಾತ ಸಿಇಒಗಳ ಲಿಸ್ಟ್​ನಲ್ಲಿ ರಾಯಲ್​ ಡಚ್​ ಶೆಲ್​ನ ಸಿಇಒ ಬೆನ್​ ವಾನ್​ ಬ್ಯೂರ್ಡನ್​ ಮೊದಲ ಸ್ಥಾನ ಪಡೆದು ಎಲ್ಲ ಪ್ರತಿಷ್ಠಿತರನ್ನು ಹಿಂದಿಕ್ಕಿದ್ದಾರೆ.

ಇನ್ನು ಸುಂದರ್ ಅವರ ನಾಯಕತ್ವದ ಕೌಶಲ್ಯ ಗಣನೀಯ ಅಂಕಗಳನ್ನ ಕಳೆದುಕೊಂಡಿದ್ದು, 6.5 ಅಂಕ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿದ್ದಾರೆ. ಅವರ ರೆಪ್ಯೂಟೇಷನ್​ ಸಹ 8.4 ಅಂಕಗಳಿಗೆ ಕುಸಿತ ಕಂಡಿದೆ.

ABOUT THE AUTHOR

...view details