ಕರ್ನಾಟಕ

karnataka

ETV Bharat / briefs

ಸುಳ್ವಾಡಿ ವಿಷ ದುರಂತ: ನಾನು ತಪ್ಪು ಮಾಡಿಲ್ಲವೆಂದು ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ - ಚಾಮರಾಜನಗರ

ಸುಳ್ವಾಡಿ ವಿಷ ಪ್ರಸಾದ ದುರಂತದ ಮೊದಲನೇ ಆರೋಪಿ ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.

ಸುಳ್ವಾಡಿ ವಿಷ ದುರಂತ:ಮಹದೇವಸ್ವಾಮಿ ಜಾಮೀನು ಅರ್ಜಿ

By

Published : Feb 12, 2019, 7:27 PM IST

ಚಾಮರಾಜನಗರ: ತಾನು ತಪ್ಪು ಮಾಡಿಲ್ಲ. ಪ್ರಕರಣಕಕ್ಕೂ ತನಗೂ ಸಂಬಂಧವಿಲ್ಲವೆಂದು ಸುಳ್ವಾಡಿ ವಿಷ ಪ್ರಸಾದ ದುರಂತದ ಮೊದಲನೇ ಆರೋಪಿ ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.

ಸುಳ್ವಾಡಿ ವಿಷ ದುರಂತ:ಮಹದೇವಸ್ವಾಮಿ ಜಾಮೀನು ಅರ್ಜಿ

3 ಪುಟಗಳ ಜಾಮೀನು ಅರ್ಜಿಯನ್ನು ವಕಲಾತ್ತು ವಹಿಸಿರುವ ಕೊಡಗಿನ ವಕೀಲ ಅಪ್ಪಯ್ಯ ಎಂಬವರು ಅಂಚೆ ಮೂಲಕ ತಮ್ಮ ಲಿಖಿತ ವಾದ ಮಂಡಿಸಿ ರವಾನಿಸಿದ್ದಾರೆ. ಸರ್ಕಾರಿ ಅಭಿಯೋಜಕರಾದ ಲೋಲಾಕ್ಷಿ ಜಾಮೀನು ಅರ್ಜಿಗೆ ತಕರಾರು ಸಲ್ಲಿಸಿದ್ದು, ನಾಳೆ ವಾದ ಮಂಡಿಸಲಿದ್ದಾರೆ.

ಇನ್ನು, ಎ2-ಅಂಬಿಕಾ, ಎ3 ದೊಡ್ಡಯ್ಯ, ಎ4 ಮಾದೇಶನ ಪರ ಬೆಂಗಳೂರಿನ ದುರ್ಗಾಪ್ರಸಾದ್ ಎಂಬವರು ವಕಾಲತ್ತು ವಹಿಸುವರು ಎಂದು ತಿಳಿದುಬಂದಿದ್ದು, ನಾಳೆ ಉಳಿದ ಆರೋಪಿಗಳ ಪರ ಜಾಮೀನು ಅರ್ಜಿ ಸಲ್ಲಿಸುವ ನಿರೀಕ್ಷೆ ಇದೆ.

ಇಂದು ಸಹ ಮೈಸೂರು ಕಾರಗೃಹದಲ್ಲಿರುವ ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾ. ಬಸವರಾಜು ವಿಚಾರಣೆ ನಡೆಸಿದರು.

ABOUT THE AUTHOR

...view details