ಕರ್ನಾಟಕ

karnataka

ETV Bharat / briefs

ಏನ್ರೀ ಎಲ್ಲಾ ಸರಿಯಿದೆಯಾ ಇಲ್ಲಿ... ಜಿಲ್ಲಾ ಆಸ್ಪತ್ರೆಗೆ ಶಾಸಕ ವೀರಣ್ಣ ಚರಂತಿಮಠ ದಿಢೀರ್ ಭೇಟಿ.. - ಸರ್ಕಾರಿ ಆಸ್ಪತ್ರೆ

ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಿಢೀರ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆ ಬಗ್ಗೆ ಪರಿಶೀಲಿಸಿದರು.

ಶಾಸಕ ಡಾ.ವೀರಣ್ಣ ಚರಂತಿಮಠ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ ದಿಢೀರ ಭೇಟಿ ನೀಡಿದರು

By

Published : Jun 2, 2019, 7:52 PM IST

ಬಾಗಲಕೋಟೆ :ನಗರದ ನವನಗರದಲ್ಲಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ‌ಶಾಸಕ ಡಾ.ವೀರಣ್ಣ ಚರಂತಿಮಠ ರವಿವಾರ ದಿಢೀರ‌್ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು.

ಶಾಸಕ ಡಾ.ವೀರಣ್ಣ ಚರಂತಿಮಠ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಿಢೀರ ಭೇಟಿ ನೀಡಿದರು

ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ನೀಡುವ ಔಷಧ ಕೊಠಡಿಗೆ ಭೇಟಿದರು. ಹೆರಿಗೆ ವಿಭಾಗದಲ್ಲಿ ದಾಖಲಾದ ಮಹಿಳೆಯರನ್ನು ಮಾತಾಡಿಸಿ ಆಸ್ಪತ್ರೆಯ ವ್ಯವಸ್ಥೆ ಹಾಗೂ ಚಿಕಿತ್ಸೆ ಬಗ್ಗೆ ಮಾಹಿತಿ ಪಡೆದುಕೊಂಡರು. ಗರ್ಭಿಣಿ ಮಹಿಳೆಯರಿಗೆ ಸೋಂಕು ತಗುಲದಂತೆ ನೋಡಿಕೊಳ್ಳಬೇಕು ಎಂದು ವೈದ್ಯರಿಗೆ ಸೂಚಿಸಿದರು.

ಸರ್ಕಾರಿ ಆಸ್ಪತ್ರೆಯಲ್ಲಿ‌ ಮಕ್ಕಳ‌ ವಿಭಾಗಕ್ಕೆ‌ ಭೇಟಿ‌ ನೀಡಿ ಮಕ್ಕಳಿಗೆ ಆಟಿಕೆ‌ ಸಾಮಾಗ್ರಿಗಳನ್ನು ಒದಗಿಸಬೇಕು. ಆಕರ್ಷಿಸುವ ಆಟಿಗೆ ಸಾಮಾನು ಖರೀದಿ ಮಾಡಿ ಕೊಠಡಿಯಲ್ಲಿ ಇಡಬೇಕು. ಇವೆಲ್ಲ ಮನರಂಜನೆಗೆ ಅನುಕೂಲವಾಗಲಿದೆ ಎಂದರು.

ರೋಗಿಗಳಿಗೆ ಒಳ್ಳೆಯ ವಾತಾವರಣ ಕಲ್ಪಿಸುವ ದೃಷ್ಟಿಯಿಂದ ಆಸ್ಪತ್ರೆಯ ಜಾಗದಲ್ಲಿ ಉದ್ಯಾನ ನಿರ್ಮಿಸಿಬೇಕು. ಆ ಕೆಲಸವನ್ನು ಶೀಘ್ರವೇ ಕೈಗೆತ್ತಿಕೊಳ್ಳಬೇಕು ಎಂದು ಡಿಎಚ್ಒ ಅವರಿಗೆ ತಿಳಿಸಿದರು. ಐಸಿಯು ವಿಭಾಗದ ಶುಚಿತ್ವದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.ಆಸ್ಪತ್ರೆಯ ಒಳಚರಂಡಿ ವ್ಯವಸ್ಥೆ ಹಾಗೂ ಕಟ್ಟಡ ನಿರ್ವಹಣೆ ಕಾಮಗಾರಿ ಕುರಿತು ಡಿಎಚ್ಒ ದೇಸಾಯಿ ಅವರು ಶಾಸಕರ‌ ಗಮನಕ್ಕೆ ತಂದರು. ಸ್ಥಳದಲ್ಲೇ ಇದ್ದ ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ ಅವರಿಗೆ ತಕ್ಷಣವೇ ಒಳಚರಂಡಿ ಕಾಮಗಾರಿಗೆ ಸೂಚಿಸಿದರು.

ABOUT THE AUTHOR

...view details