ನವದೆಹಲಿ:ಸತತ ಆರು ದಿನಗಳಿಂದ ಮುಂಬೈ ಷೇರುಪೇಟೆ ಕುಸಿತದ ಹಾದಿ ಹಿಡಿದಿದೆ. ಇಂದು ಸಹ ಮುಂಬೈ ಷೇರುಪೇಟೆ ಕುಸಿತ ಕಂಡಿದೆ. 488 ಅಂಕಗಳನ್ನ ಕಳೆದುಕೊಳ್ಳುವ ಮೂಲಕ 37,789 ಅಂಕಗಳೊಂದಿಗೆ ವ್ಯವಹಾರ ಅಂತ್ಯಗೊಳಿಸಿತು.
ಅಮೆರಿಕ ಚೀನಾ ವ್ಯಾಪಾರ ಯುದ್ಧ: ತತ್ತರಿಸಿದ ಮಾರುಕಟ್ಟೆ, ಲಕ್ಷಾಂತರ ಕೋಟಿ ಮಂಗಮಾಯ - ಲಕ್ಷಾಂತರ ಕೋಟಿ
ಷೇರುಪೇಟೆ ಕುಸಿತಕ್ಕೆ ಚೀನಾ - ಅಮೆರಿಕ ವಾಣಿಜ್ಯ ಯುದ್ಧವಷ್ಟೇ ಅಲ್ಲ, ದೇಶದಲ್ಲಿ ನಡೆಯುತ್ತಿರುವ ಚುನಾವಣೆಯೂ ಪರಿಣಾಮ ಬೀರಿದೆ.
ಲಕ್ಷಾಂತರ ಕೋಟಿ ರೂ. ಕಳೆದುಕೊಂಡ ಹೂಡಿಕೆದಾರರು ದಿಕ್ಕು ತೋಚದಂತಾದರು. ಇನ್ನು ನಿಫ್ಟಿ ಸಹ 138 ಅಂಕಗಳನ್ನು ಕಳೆದುಕೊಂಡು 11,359 ಪಾಯಿಂಟ್ಗಳೊಂದಿಗೆ ವ್ಯವಹಾರ ಮುಗಿಸಿತು. ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಮೋಟರ್ಸ್, ಬಜಾಜ್ ಫೈನಾನ್ಸ್, ಬಜಾಜ್ ಆಟೋ, ಎಸ್ಬಿಐ ಮತ್ತು ವೇದಾಂತ ಅತಿ ಹೆಚ್ಚು ನಷ್ಟ ಅನುಭವಿಸಿ ಸಂಕಷ್ಟಕ್ಕೆ ಸಿಲುಕಿದವು.
ಈ ನಡುವೆ ಅಮೆರಿಕ ಜತೆ ಮಾತುಕತೆಗೆ ಚೀನಾ ಉಪಾಧ್ಯಕ್ಷ ಲಿ ಹು ಎರಡು ದಿನಗಳ ಭೇಟಿ ನೀಡಿದ್ದಾರೆ. ನಾಳೆಯಿಂದ ವ್ಯಾಪಾರ ಬಿಕ್ಕಟ್ಟು ಶಮನ ಕುರಿತಂತೆ ಅಮೆರಿಕ - ಚೀನಾ ನಡುವೆ ಮಾತುಕತೆ ನಡೆಯಲಿದೆ.
ಷೇರುಪೇಟೆ ಕುಸಿತಕ್ಕೆ ಚೀನಾ - ಅಮೆರಿಕ ವಾಣಿಜ್ಯ ಯುದ್ಧವಷ್ಟೇ ಅಲ್ಲ, ದೇಶದಲ್ಲಿ ನಡೆಯುತ್ತಿರುವ ಚುನಾವಣೆಯೂ ಪರಿಣಾಮ ಬೀರಿದೆ. ಫಲಿತಾಂಶಕ್ಕೂ ಮುನ್ನ ಲಾಭದ ಷೇರುಗಳನ್ನ ಮಾರಾಟ ಮಾಡಲು ಹೂಡಿಕೆದಾರರು ಮುಗಿ ಬಿದ್ದಿರುವುದರಿಂದ ಈ ಕುಸಿತ ಆರಂಭವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.