ಬೆಂಗಳೂರು: ಕಳೆದ ಮೂರು ದಿನಗಳಿಂದ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಪ್ರದರ್ಶನಕ್ಕೆ ಎರಡು ದಿನಗಳ ಕಾಲ ಮುಕ್ತ ಸಾರ್ವಜನಿಕ ಪ್ರವೇಶ ಕಲ್ಪಿಸಲು ಮುಂದಾಗಿದೆ.
ಕೆರೆ ಕಟ್ಟೆ ಮೇಲೆ ನಿಂತು ಏರೋ ಶೋ ನೋಡಿ... ವಿಶೇಷಚೇತನರಿಗೆ ನೆರವಾದ ಸಿವಿಲ್ ಡಿಫೆನ್ಸ್ ತಂಡ - ಸಿವಿಲ್ ಡಿಫೆನ್ಸ್
ಏರೋ ಶೋ ನೋಡುವ ಜನರಿಗೆ ನೆರವಾಗಲು ಸಿವಿಲ್ ಡಿಫೆನ್ಸ್ ತಂಡ ಮುನ್ನೆಚ್ಚರಿಕಾ ಕ್ರಮ ಕೈಗೊಣಡಿದ್ದು, ಟಿಕೆಟ್ ಇಲ್ಲದೇ ಏರೋ ಶೋ ನೋಡುವ ಅವಕಾಶ ಕಲ್ಪಿಸಿದೆ.
ಹುಣಸಮಾರನಹಳ್ಳಿ ಕೆರೆ ಕಟ್ಟೆ ಮೇಲೆ ಏರೋ ಶೋ ವೀಕ್ಷಿಸುವ ಜನರ ನೆರವಿಗೆ ಬಂದ ಸಿವಿಲ್ ಡಿಫೆನ್ಸ್ ತಂಡ
ಟಿಕೆಟ್ ಇಲ್ಲದೇ ಹೊರಗಿನಿಂದಲೇ ಏರೋ ಶೋ ನೋಡುವ ಜನರಿಗಾಗಿಯೇ ಪ್ರತ್ಯೇಕ ವ್ಯವಸ್ಥೆ ಮಾಡಿಕೊಡಲಾಗಿದೆ. ಚಿಕ್ಕಜಾಲದ ಕೆರೆಯ ಹುಣಸಮಾರನಹಳ್ಳಿ ಕೆರೆ ಕಟ್ಟೆ ಮೇಲೆ ನಿಂತು ನೋಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಆದ್ದರಿಂದ ಇವರಿಗೆ ನೆರವಾಗಲು ಸಿವಿಲ್ ಡಿಫೆನ್ಸ್ ತಂಡ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ.
ನೋಡುವವರಿಗೆ ಅಪಾಯವಾಗದಂತೆ ಎಲ್ಲಾ ರೀತಿಯ ಕ್ರಮ ಕೈಗೊಂಡಿದ್ದು, ವಿಶಿಷ್ಟಚೇತರೊಬ್ಬರ ಕೈ ಹಿಡಿದು ಕಟ್ಟೆ ಹತ್ತಿಸುವ ಮೂಲಕ ಏರ್ ಶೋ ವೀಕ್ಷಣೆಗೆ ಅನುವು ಮಾಡಿದ್ದಾರೆ.