ಕರ್ನಾಟಕ

karnataka

ETV Bharat / briefs

2 ದಶಕಗಳ ಬಳಿಕ ಮತ್ತೊಂದು ಪ್ರೇಮಕತೆಯೊಂದಿಗೆ ಒಂದಾಗುತ್ತಿದ್ದಾರೆ ಶಾರುಖ್​-ಭನ್ಸಾಲಿ! - ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಹೊಸ ಚಿತ್ರ

1975ರಲ್ಲಿ ನಡೆದ ನೈಜ ಘಟನೆಯಾಧಾರಿತ ಸಿನಿಮಾ ಇದಾಗಿದೆ. ಭಾರತೀಯ ಚಿತ್ರಕಾರ ಪಿ.ಕೆ.ಮಹಾನಂದಿಯಾ ಅವರು ದೆಹಲಿಗೆ ಪ್ರವಾಸಕ್ಕೆಂದು ಬಂದಿದ್ದ ಸ್ವೀಡನ್‌ನ ಚಾರ್ಲೊಟ್ ವಾನ್ ಶೆಡ್ವಿನ್ ಅವರನ್ನು ಭೇಟಿಯಾಗುತ್ತಾನೆ. ಆಕೆ ತನ್ನ ಚಿತ್ರ ಬಿಡಿಸಿ ಕೊಡಲು ಕೇಳಿಕೊಂಡಾಗ, ಆತ ಚಿತ್ರಿಸಿಕೊಡುತ್ತಾನೆ. ಅಲ್ಲಿ ಪ್ರೀತಿ ಪ್ರಾರಂಭವಾಗುತ್ತದೆ..

SRK film
SRK film

By

Published : May 8, 2021, 4:08 PM IST

ಹೈದರಾಬಾದ್ :ಕಿಂಗ್​ ಖಾನ್​ ಶಾರುಖ್ ಹಾಗೂ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಮತ್ತೆ ಒಂದಾಗಿ ಬಾಲಿವುಡ್​ನಲ್ಲಿ ಹವಾ ಸೃಷ್ಟಿಸಲಿದ್ದಾರೆ.

ತನ್ನ ಪ್ರೀತಿಗಾಗಿ ನವದೆಹಲಿಯಿಂದ ಗೋಥೆನ್‌ಬರ್ಗ್​ಗೆ ಬೈಸಿಕಲ್‌ನಲ್ಲಿ ಪ್ರಯಾಣ ಬೆಳೆಸಿದ ವ್ಯಕ್ತಿಯೊಬ್ಬನ ಪ್ರೇಮಕಥಾ ಆಧಾರಿತ ಚಿತ್ರ ಇದಾಗಿದೆ.

ಬಾಲಿವುಡ್​ ಬಾದ್​ಶಾ ಮತ್ತು ಭನ್ಸಾಲಿ ಸುಮಾರು ಎರಡು ದಶಕಗಳ ಬಳಿಕ ಮತ್ತೆ ಒಂದಾಗುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಈ ಚಿತ್ರವನ್ನು ಶಾರುಕ್​ ಜೊತೆ ಮಾಡಬೇಕೆಂದು ಭನ್ಸಾಲಿ ಪ್ರಯತ್ನಿಸುತ್ತಿದ್ದರು.

1975ರಲ್ಲಿ ನಡೆದ ನೈಜ ಘಟನೆಯಾಧಾರಿತ ಸಿನಿಮಾ ಇದಾಗಿದೆ. ಭಾರತೀಯ ಚಿತ್ರಕಾರ ಪಿ.ಕೆ.ಮಹಾನಂದಿಯಾ ಅವರು ದೆಹಲಿಗೆ ಪ್ರವಾಸಕ್ಕೆಂದು ಬಂದಿದ್ದ ಸ್ವೀಡನ್‌ನ ಚಾರ್ಲೊಟ್ ವಾನ್ ಶೆಡ್ವಿನ್ ಅವರನ್ನು ಭೇಟಿಯಾಗುತ್ತಾನೆ.

ಆಕೆ ತನ್ನ ಚಿತ್ರ ಬಿಡಿಸಿ ಕೊಡಲು ಕೇಳಿಕೊಂಡಾಗ, ಆತ ಚಿತ್ರಿಸಿಕೊಡುತ್ತಾನೆ. ಅಲ್ಲಿ ಪ್ರೀತಿ ಪ್ರಾರಂಭವಾಗುತ್ತದೆ. ಆ ಬಳಿಕ ತನ್ನ ಪ್ರೀತಿಯನ್ನು ಪಡೆಯಲು ಭಾರತದಿಂದ ಯುರೋಪ್​ಗೆ ಬೈಸಿಕಲ್​ ಪ್ರಯಾಣ ಬೆಳೆಸುವ ಆತ ತನ್ನ ಪ್ರೀತಿಯನ್ನು ಪಡೆಯುತ್ತಾನೋ, ಇಲ್ಲವೋ ಎಂಬುದು ಚಿತ್ರದ ಕತೆ.

'ದೇವದಾಸ್'​ನಂತಹ ಬ್ಲಾಕ್​ ಬಸ್ಟರ್ ಚಿತ್ರದ ಬಳಿಕ ಎಸ್​ಆರ್​ಕೆ ಹಾಗೂ ಭನ್ಸಾಲಿ ಕೆಲ ಕಾರಣಾಂತರಗಳಿಂದ ಮತ್ತೆ ಒಂದಾಗಲಿಲ್ಲ. ಸದ್ಯ ಮತ್ತೊಂದು ಪ್ರೇಮಕತೆಯಲ್ಲಿಇಬ್ಬರನ್ನು ಕಾಣುವುದಕ್ಕೆ ಆಸಕ್ತಿದಾಯಕವಾಗಿದೆ.

ಚಿತ್ರಕ್ಕೆ 'ಇಜಾರ್' ಎಂದು ಟೈಟಲ್​ ಇಡಲಾಗಿದೆ. ಲೀಡ್​ ರೋಲ್​ನಲ್ಲಿ ಅಂತರಾಷ್ಟ್ರೀಯ ಮಟ್ಟದ ನಟಿಯೋರ್ವಳು ಮಿಂಚಲಿದ್ದಾಳೆ ಎನ್ನಲಾಗಿದೆ.

ABOUT THE AUTHOR

...view details