ಕೊಲಂಬೋ:ಈಸ್ಟರ್ ಭಾನುವಾರದ ಭೀಕರ ಉಗ್ರದಾಳಿಯ ಬಳಿಕ ಶ್ರೀಲಂಕಾ ಇದೀಗ ಕೋಮು ದಳ್ಳುರಿಗೆ ನಲುಗುತ್ತಿದ್ದು ಓರ್ವ ವ್ಯಕ್ತಿ ಘಟನೆಯಲ್ಲಿ ಬಲಿಯಾಗಿದ್ದಾನೆ.
ಮುಸ್ಲಿಂ ಯುವಕನೊಬ್ಬನ ಫೇಸ್ಬುಕ್ ಪೋಸ್ಟ್ನಿಂದ ಹೊತ್ತಿಕೊಂಡ ಕೋಮು ಗಲಭೆಯ ಕಿಡಿ ಇದೀಗ ರಾಷ್ಟ್ರವ್ಯಾಪಿ ಹರಡಿದೆ. ಕ್ರಿಶ್ಚಿಯನ್ ಸಮುದಾಯವನ್ನು ಗುರಿಯಾಗಿಸಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಲಾಗಿದೆ ಎಂದು ತಪ್ಪಾಗಿ ಅರ್ಥೈಸಿಕೊಂಡ ಕ್ರಿಶ್ಚಿಯನ್ನರು ಕಳೆದ ಕೆಲವು ದಿನಗಳಿಂದ ಮುಸ್ಲಿಮರಿಗೆ ಸೇರಿದ ಅಂಗಡಿ,ಮನೆ ಹಾಗೂ ಮಸೀದಿಗಳ ಮೇಲೆ ದಾಳಿ ನಡೆಸುತ್ತಿದ್ದಾರೆ.
ಹೆಚ್ಚಿನ ಓದಿಗಾಗಿ:
ಕೋಮು ದಳ್ಳುರಿಗೆ ಚಿತಾವಣೆ.. ಶ್ರೀಲಂಕಾದಲ್ಲಿ ಮತ್ತೆ ಸಾಮಾಜಿಕ ಜಾಲತಾಣಗಳ ಬಳಕೆ ಬ್ಯಾನ್!
ಪ್ರಸ್ತುತ ನಡೆಯುತ್ತಿರುವ ದಾಳಿಯಲ್ಲಿ 42 ವರ್ಷದ ಮುಸ್ಲಿಂ ವ್ಯಕ್ತಿಗೆ ಚೂರಿ ಇರಿಯಲಾಗಿದೆ. ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಘಟನೆಯ ಗಂಭೀರತೆ ಅರಿತ ಸರ್ಕಾರ ಇದೀಗ ರಾಷ್ಟ್ರವ್ಯಾಪಿ ಕರ್ಫ್ಯೂ ಹೇರಿಕೆ ಮಾಡಿ ಆದೇಶಿಸಿದೆ. ಸೋಮವಾರ ರಾತ್ರಿ 9 ಗಂಟೆಗೆ ಕರ್ಫ್ಯೂ ಹೇರಲಾಗಿದ್ದು ಇಂದು ಸಂಜೆ 4 ಗಂಟೆವರೆಗೂ ಇರಲಿದೆ. ಜೊತೆಗೆ ಸಾಮಾಜಿಕ ಜಾಲತಾಣಗಳಿಗೂ ನಿರ್ಬಂಧ ವಿಧಿಸಲಾಗಿದೆ.
ಎರಡು ಕೋಟಿ ಇಪ್ಪತ್ತು ಲಕ್ಷ ಜನಸಂಖ್ಯೆ ಹೊಂದಿರುವ ಶ್ರೀಲಂಕಾದಲ್ಲಿ ಸಿಂಹಳೀಯರು ಹಾಗೂ ಬೌದ್ಧ ದರ್ಮಕ್ಕೆ ಸೇರಿದವರೇ ಹೆಚ್ಚಾಗಿದ್ದಾರೆ. ಈ ರಾಷ್ಟ್ರದಲ್ಲಿ ಶೇ.10ರಷ್ಟು ಮುಸ್ಲಿಮರು ವಾಸವಾಗಿದ್ದಾರೆ.