ಕರ್ನಾಟಕ

karnataka

ETV Bharat / briefs

ಕೋಮು ದಳ್ಳುರಿಗೆ ಚಿತಾವಣೆ.. ಶ್ರೀಲಂಕಾದಲ್ಲಿ ಮತ್ತೆ ಸಾಮಾಜಿಕ ಜಾಲತಾಣಗಳ ಬಳಕೆ ಬ್ಯಾನ್‌! - ನಿರ್ಬಂಧ

ಫೇಸ್​ಬುಕ್ ಪೋಸ್ಟ್ ಒಂದರಿಂದ ಉದ್ರಿಕ್ತಗೊಂಡ ಗುಂಪೊಂದು ಇನ್ನೊಂದು ಗುಂಪಿಗೆ ಸೇರಿದ್ದ ಅಂಗಡಿ ಮೇಲೆ ದಾಳಿ ನಡೆಸಿ ದಾಂಧಲೆ ನಡೆಸಿದೆ. ಭಾನುವಾರ ವಾಯವ್ಯ ಶ್ರೀಲಂಕಾದ ಚಿಲಾ ಪಟ್ಟಣದ ಹಲವು ಪ್ರದೇಶಗಳಲ್ಲಿ ದಾಳಿಗಳು ನಡೆದಿವೆ.

ಸಾಮಾಜಿಕ ಜಾಲತಾಣ

By

Published : May 13, 2019, 12:07 PM IST

Updated : May 15, 2019, 12:17 PM IST

ಕೊಲಂಬೋ:ಈಸ್ಟರ್ ಭಾನುವಾರದ ಭೀಕರ ಉಗ್ರದಾಳಿಯ ಬಳಿಕ ಮತ್ತೊಮ್ಮೆ ದ್ವೀಪ ರಾಷ್ಟ್ರ ಶ್ರೀಲಂಕಾ ಕೋಮು ಗಲಭೆಗೆ ಸಾಕ್ಷಿಯಾಗಿದೆ. ಪರಿಣಾಮ ಸಾಮಾಜಿಕ ಜಾಲತಾಣಗಳ ಮೇಲೆ ನಿರ್ಬಂಧ ಹೇರಲಾಗಿದೆ.

ಫೇಸ್​ಬುಕ್ ಪೋಸ್ಟ್ ಒಂದರಿಂದ ಉದ್ರಿಕ್ತಗೊಂಡ ಗುಂಪೊಂದು ಇನ್ನೊಂದು ಗುಂಪಿಗೆ ಸೇರಿದ್ದ ಅಂಗಡಿ ಮೇಲೆ ದಾಳಿ ನಡೆಸಿ ದಾಂಧಲೆ ನಡೆಸಿದೆ. ಭಾನುವಾರ ವಾಯವ್ಯ ಶ್ರೀಲಂಕಾದ ಚಿಲಾ ಪಟ್ಟಣದ ಹಲವು ಪ್ರದೇಶಗಳಲ್ಲಿ ದಾಳಿಗಳು ನಡೆದಿವೆ.

ಭಾನುವಾರ ನಡೆದ ಗಲಾಟೆ

ದಾಳಿ ನಡೆದ ತಕ್ಷಣವೇ ಭದ್ರತಾ ಪಡೆ ಸ್ಥಳಕ್ಕಾಗಮಿಸಿ ಗುಂಪನ್ನು ಚದುರಿಸುವ ಕೆಲಸ ಮಾಡಿದೆ.

ಹೆಚ್ಚು ನಗಬೇಡಿ, ಒಂದು ದಿನ ನೀವು ಅಳುತ್ತೀರಾ (Don't Laugh More, 1 Day U Will Cry) ಅನ್ನುವ ಪೋಸ್ಟ್‌ವೊಂದನ್ನ ವ್ಯಕ್ತಿಯೊಬ್ಬ ಫೇಸ್​ಬುಕ್​ನಲ್ಲಿ ಹಾಕಿದ್ದ. ಇದನ್ನು ಎಚ್ಚರಿಕೆ ಎಂದು ಪರಿಗಣಿಸಿದ ಇನ್ನೊಂದು ಗುಂಪಿಗೆ ಸೇರಿದ ಅಂಗಡಿಗಳ ಮೇಲೆ ದಾಳಿ ನಡೆಸಿದ್ದಾರೆ.

ಗಲಾಟೆಯಲ್ಲಿ ಹಾನಿಯಾದ ಸ್ಥಳ

ದಾಳಿಯ ಹಿನ್ನೆಲೆಯಲ್ಲಿ ಪ್ರಸ್ತುತ ಶ್ರೀಲಂಕಾದಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ಅಲ್ಲಿನ ಸರ್ಕಾರ ನಿರ್ಬಂಧ ಹೇರಿದೆ. ಸುಳ್ಳು ಸುದ್ದಿ ರವಾನೆಯಾಗುವ ಸಾಧ್ಯತೆಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

Last Updated : May 15, 2019, 12:17 PM IST

ABOUT THE AUTHOR

...view details