ಕೊಲಂಬೊ: 5 ವರ್ಷಗಳ ಹಿಂದೆ ಏಕದಿನ ಕ್ರಿಕೆಟ್ ಆಡಿದ್ದ ಆಟಗಾರನನ್ನ ನಾಯಕ ಎಂದು ಘೋಷಿಸಿದ್ದ ಶ್ರೀಲಂಕಾ ಕ್ರಿಕೆಟ್ ಮಂಡಳಿ ಇದೀಗ ಚಂಡಿಮಾಲ್, ತರಂಗ ಸೇರಿದಂತೆ ಪ್ರಮುಖ 4 ಆಟಗಾರರಿಗೆ ಕೊಕ್ ನೀಡಿ ಅಲ್ಲಿನ ಕ್ರಿಕೆಟ್ ಅಭಿಮಾನಿಗಳಿಗೆ ಶಾಕ್ ನೀಡಿದೆ.
ಹೌದು, ಲಂಕಾ ವಿಶ್ವಕಪ್ ತಂಡಕ್ಕೆ ನಾಯಕನಾಗಿರುವ ದಿಮುತ್ ಕರುಣರತ್ನೆ 2015ರ ವಿಶ್ವಕಪ್ನಲ್ಲಿ ಕೊನೆಯ ಬಾರಿಗೆ ಏಕದಿನ ಕ್ರಿಕೆಟ್ ಆಡಿದ್ದರು. ಕಳೆದ 5 ವರ್ಷದಲ್ಲಿ ಏಕದಿನ ಕ್ರಿಕೆಟ್ ಆಡಿರದ ಒಬ್ಬ ಆಟಗಾರನನ್ನ ನಾಯಕನಾಗಿ ನೇಮಿಸಿ ಹಾಲಿ ನಾಯಕ ಲಸಿತ್ ಮಲಿಂಗಾರಿಗೆ ಶಾಕ್ ನೀಡಿದ್ದ ಆಯ್ಕೆ ಸಮಿತಿ ಇದೀಗ ಮಾಜಿ ನಾಯಕ ದಿನೇಶ್ ಚಾಂಡಿಮಾಲ್, ಹಿರಿಯ ಆಟಗಾರ ಉಪುಲ್ ತರಂಗ, ನಿರೋಶನ್ ಡಿಕ್ವೆಲ್ಲಾ ಹಾಗೂ ಸ್ಪಿನ್ನರ್ ಅಖಿಲಾ ದನಂಜಯಾ ಅವರನ್ನು ವಿಶ್ವಕಪ್ ಸ್ಕ್ವಾಡ್ನಿಂದ ಕೈಬಿಟ್ಟಿದೆ.