ಮುಂಬೈ: ಇಲ್ಲಿನ ಶಿರಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಪೈಸ್ಜೈಟ್ ವಿಮಾನವೊಂದು ಲ್ಯಾಂಡಿಂಗ್ ವೇಳೆ ರನ್ ವೇ ಬಿಟ್ಟು ಬೇರೆಡೆ ಜಾರಿದ ಘಟನೆ ನಡೆದಿದೆ.
ರನ್ವೇ ಬಿಟ್ಟು ಬೇರೆಡೆ ಜಾರಿದ ವಿಮಾನ.. ಶಿರಡಿಯಲ್ಲಿ ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ಅನಾಹುತ
ದೆಹಲಿಯಿಂದ ಶಿರಡಿಗೆ ತೆರಳಿದ್ದ ವಿಮಾನ ಲ್ಯಾಂಡಿಂಗ್ ವೇಳೆ ರನ್ವೇ ಬಿಟ್ಟು ಬೇರೆಡೆ ಜಾರಿದ ಘಟನೆ ನಡೆದಿದೆ.
ದೆಹಲಿಯಿಂದ ಶಿರಡಿಗೆ ಭಕ್ತರನ್ನ ಹೊತ್ತುಕೊಂಡು SG946 ವಿಮಾನ ತೆರಳಿತ್ತು. ಶಿರಡಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ರನ್ವೇ ಬಿಟ್ಟು ಸುಮಾರು 30ರಿಂದ 40 ಮೀಟರ್ ಬೇರೆಡೆ ಜಾರಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಆದರೆ, ಕೆಲ ಗಂಟೆಗಳ ಕಾಲ ಇದೇ ವಿಮಾನದಲ್ಲಿ ಸಿಲುಕಿಕೊಂಡಿದ್ದ ಪ್ರಯಾಣಿಕರು ಆತಂಕ ಎದುರಿಸುವಂತಾಗಿತ್ತು. ಈಗಾಗಲೇ ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶ ನೀಡಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ವಿಮಾನ ಆಫರೇಟರ್, ನಿಲ್ದಾಣ ಸಣ್ಣದಾಗಿರುವ ಕಾರಣ, ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.
2017ರಲ್ಲಿ ಉದ್ಘಾಟನೆಗೊಂಡಿರುವ ಈ ವಿಮಾನ ನಿಲ್ದಾಣ, ಶಿರಡಿ ಕ್ಷೇತ್ರದಿಂದ ಸುಮಾರು 14 ಕಿ.ಮೀ ದೂರದಲ್ಲಿದೆ. ಇಲ್ಲಿಗೆ ಪ್ರತಿದಿನ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ.