ಲಂಡನ್:ವಿಶ್ವಕಪ್ ಟೂರ್ನಿಯಲ್ಲಿ ಮೊದಲೆರಡು ಪಂದ್ಯಗಳನ್ನು ಸೋತು ಹಿನ್ನೆಡೆ ಅನುಭವಿಸಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ಮತ್ತೊಂದು ಶಾಕ್ ಎದುರಾಗಿದೆ.
ದಕ್ಷಿಣ ಆಫ್ರಿಕಾ ತಂಡದ ಪ್ರಮುಖ ವೇಗಿ ಡೇಲ್ ಸ್ಟೇನ್ ಭುಜದ ನೋವಿನ ಕಾರಣ ಮಹತ್ವದ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಸತತ ಸೋಲಿನಿಂದ ಕಂಗೆಟ್ಟಿರುವ ಆಫ್ರಿಕಾ ತಂಡಕ್ಕೆ ಈ ಸುದ್ದಿ ಬಿಗ್ ಶಾಕ್ ನೀಡಿದೆ.
ಟೂರ್ನಮೆಂಟ್ನಿಂದ ಹೊರಬಿದ್ದಿರುವ ಡೇಲ್ ಸ್ಟೇನ್ ಬದಲಿಗೆ ಎಡಗೈ ವೇಗಿ ಬ್ಯೂರನ್ ಹೆಂಡ್ರಿಕ್ಸ್ ತಂಡ ಸೇರಿಕೊಳ್ಳಲಿದ್ದಾರೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ತಿಳಿಸಿದೆ.
ಎರಡು ಪಂದ್ಯ ಸೋತು ಕಂಗೆಟ್ಟಿರುವ ದ.ಆಫ್ರಿಕಾಗೆ ಮತ್ತೊಂದು ಆಘಾತ ..!
ವಿಶ್ವಕಪ್ ಆರಂಭಕ್ಕೂ ಮುನ್ನ ಗಾಯಗೊಂಡಿದ್ದ ಸ್ಟೇನ್, ಅಭ್ಯಾಸ ಪಂದ್ಯ ಹಾಗೂ ಮೊದಲೆರಡು ಪಂದ್ಯದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಸ್ಟೇನ್ ಸಂಪೂರ್ಣ ಟೂರ್ನಿಯಿಂದ ಹೊರಗುಳಿಯಲಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ದಕ್ಷಿಣ ಆಫ್ರಿಕಾ ತನ್ನ ಆರಂಭಿಕ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 104 ರನ್ಗಳಿಂದ ಸೋತಿದ್ದರೆ ಎರಡನೇ ಮ್ಯಾಚ್ನಲ್ಲಿ ಬಾಂಗ್ಲಾದೇಶ ವಿರುದ್ಧ ಅಚ್ಚರಿಯ ರೀತಿಯಲ್ಲಿ ಮುಗ್ಗರಿಸಿತ್ತು. ನಾಳೆ ನಡೆಯುವ ತನ್ನ ಮೂರನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಭಾರತವನ್ನು ಎದುರಿಸಲಿದೆ.