ಕರ್ನಾಟಕ

karnataka

ETV Bharat / briefs

ಫ್ರಾನ್ಸ್ ಮತ್ತು ಇತರ ರಾಷ್ಟ್ರಗಳಿಂದ ಆಮ್ಲಜನಕ ಪ್ಲಾಂಟ್​ ತರಿಸುತ್ತಿರುವ ಸೋನು ಸೂದ್ - Sonu Sood brings in oxygen plant from France

ದೆಹಲಿ, ಮಹಾರಾಷ್ಟ್ರ ಸೇರಿದಂತೆ ಕೊರೊನಾಗೆ ಅಪಾರ ಹಾನಿಗೊಳಗಾದ ರಾಜ್ಯಗಳಲ್ಲಿ ಕನಿಷ್ಠ ನಾಲ್ಕು ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಲು ಸೋನು ಸೂದ್ ಯೋಜಿಸುತ್ತಿದ್ದಾರೆ.

Sonu Sood
Sonu Sood

By

Published : May 10, 2021, 9:53 PM IST

ನವದೆಹಲಿ: ಬಾಲಿವುಡ್ ನಟ ಸೋನು ಸೂದ್ ಭಾರತದ ವಿವಿಧ ಸ್ಥಳಗಳಲ್ಲಿ ಸ್ಥಾಪಿಸಲು ಫ್ರಾನ್ಸ್ ಮತ್ತು ಇತರ ರಾಷ್ಟ್ರಗಳಿಂದ ಆಮ್ಲಜನಕ ಪ್ಲಾಂಟ್​ಗಳನ್ನು ತರುತ್ತಿದ್ದಾರೆ.

ದೆಹಲಿ, ಮಹಾರಾಷ್ಟ್ರ ಸೇರಿದಂತೆ ಕೊರೊನಾಗೆ ಅಪಾರ ಹಾನಿಗೊಳಗಾದ ರಾಜ್ಯಗಳಲ್ಲಿ ಕನಿಷ್ಠ ನಾಲ್ಕು ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಲು ಸೋನು ಸೂದ್ ಯೋಜಿಸುತ್ತಿದ್ದಾರೆ.

ಆಮ್ಲಜನಕ ಸಿಲಿಂಡರ್‌ಗಳು ಲಭ್ಯವಿಲ್ಲದ ಕಾರಣ ಬಹಳಷ್ಟು ಜನರು ತೊಂದರೆ ಅನುಭವಿಸುತ್ತಿದ್ದಾರೆ. ನಾವು ಈಗ ಅದನ್ನು ಪಡೆದುಕೊಂಡಿದ್ದೇವೆ ಹಾಗೂ ಅದನ್ನು ಈಗಾಗಲೇ ಜನರಿಗೆ ನೀಡುತ್ತಿದ್ದೇವೆ. ಆದಾಗ್ಯೂ, ಈ ಆಮ್ಲಜನಕ ಸ್ಥಾವರಗಳು ಇಡೀ ಆಸ್ಪತ್ರೆಗಳಿಗೆ ಸರಬರಾಜು ಮಾಡುತ್ತದೆ. ಆಮ್ಲಜನಕ ಸಿಲಿಂಡರ್‌ಗಳನ್ನು ಸಹ ಭರ್ತಿ ಮಾಡಲಾಗಿದೆ. ಇದು ಕೋವಿಡ್​ನಿಂದ ಬಳಲುತ್ತಿರುವ ಜನರ ಪ್ರಮುಖ ಸಮಸ್ಯೆಯನ್ನು ಪರಿಹರಿಸುತ್ತದೆ, ಎಂದು ಸೋನು ಹೇಳಿದ್ದಾರೆ.

ಮೊದಲ ಸ್ಥಾವರವನ್ನು ಈಗಾಗಲೇ ಆರ್ಡರ್​ ಮಾಡಲಾಗಿದ್ದು, ಇದು ಫ್ರಾನ್ಸ್‌ನಿಂದ 10-12 ದಿನಗಳಲ್ಲಿ ಬರಲಿದೆ ಎಂದು ಅಧಿಕೃತ ಮಾಹಿತಿಯೊಂದು ಹೊರಬಿದ್ದಿದೆ.

ABOUT THE AUTHOR

...view details