ಬಾಗಲಕೋಟೆ:ಮೊಬೈಲ್ ಹಾಗೂ ಟಿವಿ ನೋಡದೆ ಅಭ್ಯಾಸ ಮಾಡು ಎಂದು ತಾಯಿ ಹೇಳಿದ್ದಕ್ಕೆ 15 ವರ್ಷದ ಬಾಲಕ ಮನೆ ಬಿಟ್ಟು ಹೋಗಿರುವ ಘಟನೆ ನಗರದಲ್ಲಿ ನಡೆದಿದ್ದು, ತನ್ನ ಮಗ ಇನ್ನೂ ಸಿಕ್ಕಿಲ್ಲ ಎಂದು ಬಾಲಕನ ತಾಯಿಯ ರೋಧನೆ ಕೇಳತೀರದಾಗಿದೆ.
ಮೊಬೈಲ್ ಹಿಡಿಯಬೇಡ ಎಂದಿದ್ದಕ್ಕೆ ಮಗ ಏನ್ ಮಾಡ್ದಾ ಗೊತ್ತಾ?
ಮೊಬೈಲ್ ಹಿಡಿಯಬೇಡ ಎಂದು ಗದರಿಸಿದಕ್ಕೆ ಮನೆಯಲ್ಲಿ ಇದ್ದ ಎರಡು ಸಾವಿರ ರೂಪಾಯಿ ತೆಗೆದುಕೊಂಡು ಹೋದ ಮನೆ ಮಗ ಇನ್ನೂ ಪತ್ತೆಯಾಗಿಲ್ವಂತೆ. ಇತ್ತ ನಾಪತ್ತೆಯಾದ ಮಗನಿಂದಾಗಿ ತಾಯಿ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ನನ್ನ ಮಗನನ್ನು ಹುಡುಕಿಕೊಡಿ ಎಂದು ಪೊಲೀಸರಲ್ಲಿ ಅಂಗಲಾಚಿ ಬೇಡಿಕೊಂಡಿದ್ದಾರೆ.
ಬಾಗಲಕೋಟೆ ನಗರದ ಶಾಂತ ಯಾವಗಲ್ ಎಂಬವರು ತನ್ನ ಪತಿಯನ್ನು ಕಳೆದುಕೊಂಡು ಮಗನೇ ತನ್ನ ಸರ್ವಸ್ವ ಎಂದು ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಆದರೆ ಕಳೆದ ಮೂರು ತಿಂಗಳಿನಿಂದ ಮನೆ ಬಿಟ್ಟು ಹೋಗಿರುವ ಪುತ್ರನಿಂದಾಗಿ ಶಾಂತಾ ಕಂಗಾಲಾಗಿದ್ದಾರೆ. ಮಗ ಮರಳಿ ಬರುತ್ತಾನೆ ಎಂದು ಪ್ರತಿನಿತ್ಯ ಕಾಯುತ್ತಾ ಕುಳಿತಿದ್ದಾರೆ. ನಾಪತ್ತೆಯಾಗಿರುವ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ಇದುವರೆಗೂ ಎಲ್ಲಿಯೂ ಮಗನ ಬಗ್ಗೆ ಸುಳಿವು ಸಿಕ್ಕಿಲ್ಲ ಎಂದು ಕಣ್ಣೀರಿನಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಬಸವರಾಜ ಯಾವಗಲ್ ಹೆಸರಿನ ಇವರ ಪುತ್ರ, ಸ್ಥಳೀಯ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಹತ್ತನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿದ್ದ. ಮೊಬೈಲ್ ಹಿಡಿಯಬೇಡ ಎಂದು ಗದರಿಸಿದಕ್ಕೆ ಮನೆಯಲ್ಲಿ ಇದ್ದ ಸುಮಾರು ಎರಡು ಸಾವಿರ ರೂಪಾಯಿ ತೆಗೆದುಕೊಂಡು ಹೋದವನು ಇನ್ನೂ ಬಂದಿಲ್ವಂತೆ. ಸಂಬಂಧಿಕರು ಸೇರಿದಂತೆ ಎಲ್ಲ ಕಡೆಗೆ ವಿಚಾರಣೆ ಮಾಡಿರುವುದಾಗಿ ತಿಳಿಸಿರುವ ಶಾಂತ, ನನ್ನ ಮಗನನ್ನು ಹುಡುಕಿಕೊಡಿ ಎಂದು ಪೊಲೀಸರಲ್ಲಿ ಅಂಗಲಾಚಿ ಬೇಡಿಕೊಂಡಿದ್ದಾರೆ.