ಕರ್ನಾಟಕ

karnataka

ETV Bharat / briefs

ಬಿಎಸ್​ವೈ ಸಂಪುಟದಲ್ಲಿದ್ದ ಅರ್ಧದಷ್ಟು ಮಂದಿಗೆ ರೀ ಎಂಟ್ರಿ ಡೌಟ್..? ಹೊಸಬರಿಗೆ ಮಣೆ ಸಾಧ್ಯತೆ

ಯಡಿಯೂರಪ್ಪ ರಾಜೀನಾಮೆ ನೀಡುತ್ತಿದ್ದಂತೆ ಸಚಿವ ಸಂಪುಟ ವಿಸರ್ಜನೆಯಾಗಿದ್ದು, ಬಿಎಎಸ್​ವೈ ಸಂಪುಟದಲ್ಲಿದ್ದ ಸಚಿವರೆಲ್ಲಾ ಈಗ ಮಾಜಿಗಳಾಗಿದ್ದಾರೆ. ಅದರಲ್ಲಿ‌ 10-14 ಮಾಜಿ ಸಚಿವರಿಗೆ ಮತ್ತೆ ಹೊಸ ಸಂಪುಟದಲ್ಲಿ ಅವಕಾಶ ಸಿಗುವುದಿಲ್ಲ ಎನ್ನಲಾಗುತ್ತಿದೆ. ಹಿರಿಯ ನಾಯಕರಿಗೂ ಸಚಿವ ಸ್ಥಾನ ಅನುಮಾನ ಎನ್ನಲಾಗುತ್ತಿದೆ.

BS yadiyurappa
ಬಿಎಸ್ ಯಡಿಯೂರಪ್ಪ

By

Published : Jul 27, 2021, 5:30 AM IST

ಬೆಂಗಳೂರು: ಯಡಿಯೂರಪ್ಪ ಸಂಪುಟದಲ್ಲಿದ್ದ ಹಲವರಿಗೆ ನೂತನ ಸಂಪುಟದಲ್ಲಿ ಸ್ಥಾನ ಸಿಗುವುದು ಅನುಮಾನವಾಗಿದೆ. ವಲಸಿಗರಿಗೂ ಇದೇ ಭೀತಿ ಎದುರಾಗಿದ್ದು, ಹೊಸ ಮುಖಗಳಿಗೆ ಹೊಸ ಸಂಪುಟದಲ್ಲಿ ಅವಕಾಶ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.

ಯಡಿಯೂರಪ್ಪ ರಾಜೀನಾಮೆ ನೀಡುತ್ತಿದ್ದಂತೆ ಸಚಿವ ಸಂಪುಟ ವಿಸರ್ಜನೆಯಾಗಿದ್ದು, ಬಿಎಎಸ್​ವೈ ಸಂಪುಟದಲ್ಲಿದ್ದ ಸಚಿವರೆಲ್ಲಾ ಈಗ ಮಾಜಿಗಳಾಗಿದ್ದಾರೆ. ಅದರಲ್ಲಿ‌ 10-14 ಮಾಜಿ ಸಚಿವರಿಗೆ ಮತ್ತೆ ಹೊಸ ಸಂಪುಟದಲ್ಲಿ ಅವಕಾಶ ಸಿಗುವುದಿಲ್ಲ ಎನ್ನಲಾಗುತ್ತಿದೆ. ಹಿರಿಯ ನಾಯಕರಿಗೂ ಸಚಿವ ಸ್ಥಾನ ಅನುಮಾನ ಎನ್ನಲಾಗುತ್ತಿದೆ.

ಬಿಎಸ್​ವೈ ಸಂಪುಟದಲ್ಲಿದ್ದ ಹಿರಿಯ ನಾಯಕರಾದ ಕೆ.ಎಸ್.ಈಶ್ವರಪ್ಪ, ಜಗದೀಶ್ಶೆಟ್ಟರ್, ಸುರೇಶ್ ಕುಮಾರ್,ಕೋಟಾ ಶ್ರೀನಿವಾಸ ಪೂಜಾರಿ,ಸಿಸಿ ಪಾಟೀಲ್, ಶಶಿಕಲಾ ಜೊಲ್ಲೆ,ಪ್ರಭು‌ ಚವ್ಹಾಣ್​ಗೆ ಹೊಸ ಸಂಪುಟದಲ್ಲಿ ಅವಕಾಶ ಸಿಗುವುದಿಲ್ಲ ಎನ್ನಲಾಗುತ್ತಿದೆ. ವಲಸಿಗರಿಗೂ ಈ ಬಿಸಿ ತಟ್ಟಲಿದೆ.ಬಿ.ಸಿ ಪಾಟೀಲ್, ಶಿವರಾಮ ಹೆಬ್ಬಾರ್, ಶ್ರೀಮಂತ ಪಾಟೀಲ್, ಗೋಪಾಲಯ್ಯ ಅವರಿಗೆ ಸಚಿವ ಸ್ಥಾನ ಸಿಗುವುದಿಲ್ಲ ಎನ್ನಲಾಗುತ್ತಿದೆ. ಈ ವಿಚಾರದಲ್ಲಿ ಯಡಿಯೂರಪ್ಪ ನಿಲುವು ಮಹತ್ವದ ಪಾತ್ರ ವಹಿಸಲಿದೆ.

ಇನ್ನು ಮೈಸೂರು ಶಾಸಕ ರಾಮದಾಸ್, ಸುರಪುರ ಶಾಸಕ ರಾಜುಗೌಡ, ಹಾಸನ ಶಾಸಕ ಪ್ರೀತಂ ಗೌಡ, ಯಲಬುರ್ಗಾ‌ ಶಾಸಕ ಹಾಲಪ್ಪ ಆಚಾರ್, ಕುಡಚಿ ಶಾಸಕ ಪಿ ರಾಜೀವ್, ಕಾರ್ಕಳ ಶಾಸಕ ಸುನಿಲ್ ಕುಮಾರ್, ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ, ಅಂಕೋಲಾ ಶಾಸಕಿ ರೂಪಾಲಿ ನಾಯಕ್ ಅಥವಾ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್​ಗೆ ಹೊಸ ಸಚಿವ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎನ್ನಲಾಗುತ್ತಿದೆ.

ಆದರೆ ಯಾರು ಮುಖ್ಯಮಂತ್ರಿ ಆಗಲಿದ್ದಾರೆ.ಹೈಕಮಾಂಡ್ ಸಂಪುಟ ರಚನೆ ಕುರಿತು ಏನು ನಿರ್ದೇಶನ ನೀಡಲಿದೆ ಎನ್ನುವುದರ ಮೇಲೆ ನೂತನ ಸಚಿವ ಸಂಪುಟದಲ್ಲಿ ಯಾರು ಇನ್ ಯಾರು ಔಟ್ ಎನ್ನುವುದು ಅಂತಿಮಗೊಳ್ಳಲಿದೆ.

ಇದನ್ನು ಓದಿ:ಸಚಿವ ಶ್ರೀ ರಾಮುಲುಗೆ ಈ ಬಾರಿ ಡಿಸಿಎಂ ಪೋಸ್ಟ್ ಖಚಿತ : ಹೈಕಮಾಂಡ್ ನಿಂದ ಖುದ್ದು ವಾಗ್ದಾನ

ABOUT THE AUTHOR

...view details