ಕೋಯಿಕ್ಕೋಡ್ (ಕೇರಳ):ಸೌರ ಹಗರಣದ ಆರೋಪಿ ಸರಿತಾ ಎಸ್ ನಾಯರ್ ನ್ಯಾಯಾಲಯದ ವಾರಂಟ್ ಉಲ್ಲಂಘಿಸಿದ ಕಾರಣ ಆಕೆಯನ್ನು ಬಂಧಿಸಲಾಗಿದೆ.
ಪ್ರಕರಣ ಕುರಿತಾಗಿ ನ್ಯಾಯಾಲಯಕ್ಕೆ ಹಾಜರಾಗಲು ಕೋರ್ಟ್ ವಾರಂಟ್ ಹೊರಡಿಸಿತ್ತು. ಆದರೆ, ಆಕೆ ವಾರಂಟ್ ಉಲ್ಲಂಘಿಸಿ, ನ್ಯಾಯಾಲಯಕ್ಕೆ ಹಾಜರಾಗಲಿಲ್ಲ. ಹಾಗಾಗಿ ಆಕೆಯನ್ನು ಕೊಯಿಕ್ಕೋಡ್ನ ಕಸಾಬಾ ಪೊಲೀಸರು ಬಂಧಿಸಿದ್ದಾರೆ.
ಕೋಯಿಕ್ಕೋಡ್ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ರ ಆದೇಶದಂತೆ ಈ ಬಂಧನ ಮಾಡಲಾಗಿದೆ. ಕೋಯಿಕ್ಕೋಡ್ ಮೂಲದ ಅಬ್ದುಲ್ ಮಜೀದ್ ಅವರು ನೀಡಿದ ದೂರಿನ ಮೇರೆಗೆ ನ್ಯಾಯಾಲಯ ಆಕೆಗೆ ವಾರಂಟ್ ಹೊರಡಿಸಿತ್ತು.