ಕರ್ನಾಟಕ

karnataka

ETV Bharat / briefs

ಮೋದಿ ಸಂಪುಟಕ್ಕೆ ನಾರಿಶಕ್ತಿ.. 6 ಮಹಿಳೆಯರಿಗೆ ಕ್ಯಾಬಿನೆಟ್​ನಲ್ಲಿ ಸ್ಥಾನ - undefined

ಲೋಕಸಮರದಲ್ಲಿ ಭರ್ಜರಿ ಗೆಲುವಿನ ಬಳಿಕ ನರೇಂದ್ರ ದಾಮೋದರ ದಾಸ್ ಮೋದಿ ನಿನ್ನೆ ಈಶ್ವರನ ಹೆಸರಲ್ಲಿ ಭವ್ಯ ಭಾರತದ 15ನೇ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಲೋಕಸಭೆಯ ಇತಿಹಾಸದಲ್ಲಿ ಅತಿ ಹೆಚ್ಚು ಸಂಸದೆಯರನ್ನು ಹೊಂದಿದ ಬೆನ್ನಲ್ಲೇ ಮೋದಿ 6 ಮಹಿಳೆಯರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಿದ್ದಾರೆ.

6 ಮಹಿಳೆಯರಿಗೆ ಕ್ಯಾಬಿನೆಟ್​ನಲ್ಲಿ ಸ್ಥಾನ

By

Published : May 31, 2019, 2:04 PM IST

Updated : May 31, 2019, 4:17 PM IST

ಲೋಕಸಮರದಲ್ಲಿ ಭರ್ಜರಿ ಗೆಲುವಿನ ಬಳಿಕ ನರೇಂದ್ರ ದಾಮೋದರ ದಾಸ್ ಮೋದಿ ನಿನ್ನೆ ಈಶ್ವರನ ಹೆಸರಲ್ಲಿ ಭವ್ಯ ಭಾರತದ 15ನೇ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಜೊತೆಗೆ 25 ಕ್ಯಾಬಿನೆಟ್, 9 ಸ್ವತಂತ್ರ ರಾಜ್ಯ ಖಾತೆ ಹಾಗೂ 24 ರಾಜ್ಯ ಖಾತೆ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದು, ಒಟ್ಟು 58 ಮಂತ್ರಿಗಳ ಪೈಕಿ 6 ಮಹಿಳೆಯರು ಮೋದಿ ಟೀಂನಲ್ಲಿ ಸ್ಥಾನ ಪಡೆದಿದ್ದಾರೆ. ಈ ಹಿಂದೆ 2014 ರ ಮೋದಿ ಸಚಿವ ಸಂಪುಟದಲ್ಲಿ ಸಪ್ತಸಚಿವೆಯರು ಕಾರ್ಯನಿರ್ವಹಿದ್ದಾರೆ.

ಲೋಕಸಭೆಯ ಇತಿಹಾಸದಲ್ಲಿ ಅತಿ ಹೆಚ್ಚು ಸಂಸದೆಯರನ್ನು ಹೊಂದಿದ ಬೆನ್ನಲ್ಲೇ ಮೋದಿ 6 ಮಹಿಳೆಯರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಿದ್ದಾರೆ. ಆದರೆ ಸುಷ್ಮಾ ಸ್ವರಾಜ್​, ಮನೇಕಾ ಗಾಂಧಿಯನ್ನು ಸಚಿವ ಸಂಪುಟದಿಂದ ಹೊರಗಿಡಲಾಗಿದೆ.

ಮೋದಿ ಟೀಂನ ಸಚಿವೆಯರು :

ನಿರ್ಮಲಾ ಸೀತಾರಾಮನ್

1.ನಿರ್ಮಲಾ ಸೀತಾರಾಮನ್ (60)​: ಅರ್ಥಶಾಸ್ತ್ರದಲ್ಲಿ ಸ್ನಾಕೋತ್ತರ ಪದವಿ ಪಡೆದ ನಿರ್ಮಲಾ ಸೀತಾರಾಮನ್​ ಮುಲತಃ ತಮಿಳುನಾಡಿನ ಚೆನ್ನೈಯವರು. 2008 ರಲ್ಲಿ ಕಮಲಪಾಳಯಕ್ಕೆ ಕಾಲಿಟ್ಟರು. 2014 ರಲ್ಲಿ ಪ್ರಥಮ ಬಾರಿಗೆ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು. ನಂತರ 2017 ರಲ್ಲಿ ಕರ್ನಾಟಕ ರಾಜ್ಯಸಭೆಯಿಂದ ಆಯ್ಕೆಗೊಂಡು ದೇಶದ ರಕ್ಷಣಾ ಸಚಿವರಾಗಿ ಕಾರ್ಯನಿರ್ವಹಿಸಿದರು. ಈ ಮೂಲಕ ಇಂದಿರಾ ಗಾಂಧಿ ಬಳಿಕ ರಕ್ಷಣಾ ಖಾತೆಯ ಹೊಣೆಹೊತ್ತ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾದರು. ಇದೀಗ ಮತ್ತೊಮ್ಮೆ ಮೋದಿ ಕ್ಯಾಬಿನೆಟ್​ನಲ್ಲಿ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಸ್ಮೃತಿ ಇರಾನಿ

2. ಸ್ಮೃತಿ ಇರಾನಿ (43) : ಮೂಲತಃ ಉತ್ತರ ಪ್ರದೇಶದ ಅಮೇಥಿಯವರಾದ ಸ್ಮೃತಿ ಇರಾನಿ, ಮಾಡೆಲಿಂಗ್​ ಮತ್ತು ಟಿ.ವಿ ಸೀರಿಯಲ್​ಗಳ ಮೂಲಕ ಜನರಿಗೆ ಚಿರಪರಿಚಿತರಾದವರು. 2011 ರಲ್ಲಿ ಗುಜರಾತ್​ನಿಂದ ರಾಜ್ಯಸಭೆಗೆ ಆಯ್ಕೆಯಾದರು. 2014ರ ಲೋಕಸಮರದಲ್ಲಿ ಅಮೇಥಿಯಿಂದ ಕಣಕ್ಕಿಳಿದು, ರಾಹುಲ್​ ಗಾಂಧಿ ವಿರುದ್ಧ ಸೋಲನುಭವಿಸಿದರೂ ಕೂಡಾ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿದ್ದರು. ಬಳಿಕ 2017ರಲ್ಲಿ ಸಂಪುಟ ಪುನಾರಚನೆ ವೇಳೆ, ಕೆಲ ವಿವಾದಗಳಿಂದಾಗಿ ಜವಳಿ ಖಾತೆಗೆ ನೀಡಲಾಯಿತು. ಈ ಬಾರಿ ಮತ್ತೆ ಅಮೇಥಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಅವರನ್ನ ಸೋಲಿಸಿ ಸಂಸತ್​ ಪ್ರವೇಶಿಸಿದ್ದರು. ನಿನ್ನೆ ಮೋದಿ ಟೀಂನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಸಾಧ್ವಿ ನಿರಂಜನ ಜ್ಯೋತಿ

3.ಸಾಧ್ವಿ ನಿರಂಜನ ಜ್ಯೋತಿ (52) : ಉತ್ತರ ಪ್ರದೇಶದ ಪತೇಪುರ ಲೋಕಸಭೆಯಿಂದ ಅಖಾಡಕ್ಕಿಳಿದು, ಬಿಎಸ್​ಪಿ ಅಭ್ಯರ್ಥಿ ಸುಖದೇವ್​ ವರ್ಮಾ ವಿರುದ್ಧ ಜಯಭೇರಿ ಬಾರಿಸಿ ಸಚಿವ ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಹರ್‌ಸಿಮ್ರತ್ ಕೌರ್ ಬಾದಲ್

4. ಹರ್‌ಸಿಮ್ರತ್ ಕೌರ್ ಬಾದಲ್ (53) : ಪದವೀಧರೆಯಾದ ಹರ್‌ಸಿಮ್ರತ್ ಕೌರ್ ಬಾದಲ್ ಮೂಲತಃ ಪಂಜಾಬ್​ನ ಬಟಿಂಡದವರು. ಶಿರೋಮಣಿ ಅಕಾಲಿ ದಳ (ಎಸ್​ಎಡಿ) ದ ಅಧ್ಯಕ್ಷರಾಗಿರುವ ಸುಖ್​ಬಿರ್​ ಸಿಂಗ್​ ಬಾದಲ್​ ಅವರ ಪತ್ನಿ. ರಾಜಕೀಯ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದ ಇವರು 2 ನೇ ಬಾರಿ ಕ್ಯಾಬಿನೆಟ್​ನಲ್ಲಿ ಸ್ಥಾನ ಪಡೆದಿದ್ದಾರೆ. ಕಳೆದ ಬಾರಿ ಆಹಾರ ಸಂಸ್ಕರಣೆ ಖಾತೆ ನಿಭಾಯಿಸಿದ್ದರು. ಎಸ್‌ಎಡಿ ಪ್ರಭಾವಿ ನಾಯಕಿ ಹರ್‌ಸಿಮ್ರತ್‌ ಕೌರ್‌ ಬಾದಲ್‌ 3 ನೇ ಬಾರಿಗೆ ಲೋಕಸಭೆ ಪ್ರವೇಶಿಸಿದ್ದು, ರಾಜ್ಯ ಖಾತೆ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇವರ ತಂದೆ ಪ್ರಕಾಶ್​ ಸಿಂಗ್​ ಬಾದಲ್​ 4 ಬಾರಿ ಪಂಜಾಬ್​ನ ಸಿಎಂ ಆಗಿದ್ದರು.

ರೇಣುಕಾ ಸಿಂಗ್ ಸರೂಟ

5. ರೇಣುಕಾ ಸಿಂಗ್ ಸರೂಟ (58) : ಛತ್ತೀಸ್​ಗಢದ ಸರ್ಬುಜಾ ಲೋಕಸಭಾ ಕ್ಷೇತ್ರದಿಂದ ಸಂಸತ್ ಗೆ ಪ್ರವೇಶಿಸಿರುವ ರೇಣುಕಾ ಸಿಂಗ್ ಸರೂಟ, ಇಂದು ರಾಜ್ಯ ಖಾತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

6. ದೇಬೊಶ್ರೀ ಚೌಧರಿ : ಸ್ನಾತಕೋತ್ತರ ಪದವೀಧರೆಯಾಗಿರುವ ದೇಬೊಶ್ರೀ ಚೌಧರಿ ಮೂಲತಃ ಪಶ್ಚಿಮ ಬಂಗಾಳದ ದಕ್ಷಿಣ ದಿನಾಜ್​ಪುರ್​ ಜಿಲ್ಲೆಯ ಬಲೂರ್​ಘಾಟ್​ನವರು. ಪಶ್ಚಿಮ ಬಂಗಾಳ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದ ಇವರು ಇದೇ ಮೊದಲ ಬಾರಿ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. 2014 ರಲ್ಲಿ ಲೋಕಸಭೆ ಮತ್ತು 2016 ರಲ್ಲಿ ವಿಧಾನ ಸಭೆಗೆ ಸ್ಪರ್ಧಿಸಿ ಪರಾಭವಗೊಂಡಿದ್ದರು. ಈ ಬಾರಿ ಪಶ್ಚಿಮ ಬಂಗಾಳದ ಪುರುಲಿಯಾ ಲೋಕಸಭಾ ಕ್ಷೇತ್ರದಿಂದ ಗೆದ್ದಿರುವ ದೇಬೊಶ್ರೀ ಚೌಧರಿ ನರೇಂದ್ರ ಮೋದಿ ಸರ್ಕಾರದಲ್ಲಿ ರಾಜ್ಯ ಖಾತೆ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

Last Updated : May 31, 2019, 4:17 PM IST

For All Latest Updates

TAGGED:

ABOUT THE AUTHOR

...view details