ಕರ್ನಾಟಕ

karnataka

ETV Bharat / briefs

ಐಎಂಎ  ವಿರುದ್ಧ ದಾಖಲಾಗಿವೆ 27 ಸಾವಿರ ದೂರು... ಚುರುಕುಗೊಂಡಿದೆ ಎಸ್​​ಐಟಿ ತನಿಖೆ - KN_BNG_01_14_IMA_BHAVYA_7204498

ಸಭೆಯಲ್ಲಿ ಪ್ರಕರಣದ ತನಿಖೆಯ ಪ್ರಾಥಮಿಕ ವರದಿ ಆಧಾರದ ಚರ್ಚೆ ನಡೆಸಿ ಯಾವ ತಂಡ ಏನು ಮಾಡಬೇಕು ಎಂಬ ಸೂಚನೆ ನೀಡಲಾಗ್ತಿದೆ ಎಂದು ತಿಳಿದು ಬಂದಿದೆ.

ಎಸ್​ಐಟಿ ಅಧಿಕಾರಿಗಳ ಮಹತ್ವದ ಸಭೆ

By

Published : Jun 14, 2019, 12:38 PM IST

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖೆಯನ್ನ ಎಸ್​ಐಟಿ ಚುರುಕುಗೊಳಿಸಿದೆ.

ಎಡಿಜಿಪಿ ಡಾ. ಸಲೀಂ, ಡಿಐಜಿ ರವಿಕಾಂತೇಗೌಡ, ಡಿಸಿಪಿ ಗಿರೀಶ್, ಎಸಿಪಿ ಬಾಲರಾಜ್ ಸೇರಿದಂತೆ ಅಶೋಕ ನಗರದ ಕೆಎಸ್​ಆರ್​ಪಿ ತರಬೇತಿ ಕೇಂದ್ರದಲ್ಲಿ ಅಧಿಕಾರಿಗಳ ಮಹತ್ವ ಸಭೆ ನಡೆಸಲಾಗುತ್ತಿದೆ.

ಸಭೆಯಲ್ಲಿ ಪ್ರಕರಣದ ತನಿಖೆಯ ಪ್ರಾಥಮಿಕ ವರದಿಯ ಆಧಾರದ ಚರ್ಚೆ ನಡೆಸಿ ಯಾವ ತಂಡ ಏನು ಮಾಡಬೇಕು ಎಂಬ ಸೂಚನೆ ನೀಡಲಾಗ್ತಿದೆ ಎಂದು ತಿಳಿದು ಬಂದಿದೆ.

ಈಗಾಗೇ ಕಮರ್ಷಿಯಲ್ ಪೊಲೀಸರ ಒಂದು ತಂಡ ಆರೋಪಿ ಮನ್ಸೂರ್ ಬಗ್ಗೆ ಮಾಹಿತಿ ಕಲೆ ಹಾಕಲಿದ್ದು, ಮತ್ತೊಂದು ತಂಡ‌ ಆರೋಪಿಯ ಪ್ರಾಪರ್ಟಿ ಬಗ್ಗೆ ಮಾಹಿತಿ ಕಲೆ ಹಾಕಿ ತನಿಖೆ ಚುರುಕುಗೊಳಿಸಿದ್ದಾರೆ.

27ಸಾವಿರ ದೂರು ದಾಖಲು:
ಮತ್ತೊಂದೆಡೆ ಕಳೆದ ಐದು ದಿನಗಳಿಂದ ದೂರು ಸ್ವೀಕಾರ ಪ್ರಕ್ರಿಯೆ ನಡೆಯುತ್ತಿದ್ದು, ಇಂದು ಕೂಡ ‌ಶಿವಾಜಿನಗರದ ಗಣೇಶ್ ಭಾಗ್ ಸಭಾಂಗಣದಲ್ಲಿ ದೂರು ಸ್ವೀಕಾರ ಪ್ರಕ್ರಿಯೆ ನಡೆಯುತ್ತಿದೆ. ಇಲ್ಲಿಯವರೆಗೆ ಒಟ್ಟಾರೆ 27 ಸಾವಿರ ದೂರುಗಳು ಐಎಂಎ ವಿರುದ್ಧ ದಾಖಲಾಗಿದ್ದು, ಬರೊಬ್ಬರಿ ಎರಡು ಮೂರು ಸಾವಿರ ಕೋಟಿಗೂ ಅಧಿಕ ಮೊತ್ತದ ಹಣ ವಂಚನೆ ಶಂಕೆ ಬೆಳಕಿಗೆ ಬಂದಿದೆ.

For All Latest Updates

ABOUT THE AUTHOR

...view details