ಕರ್ನಾಟಕ

karnataka

ETV Bharat / briefs

ಉಮೇಶ್ ಕತ್ತಿ ಇರೆಸ್ಪಾನ್ಸಿಬಲ್ ಮಿನಿಸ್ಟರ್... ನೀ ಸಾಯಿ ಹೋಗು ಅನ್ನೋದು ಉದ್ಧಟತನ: ಸಿದ್ದರಾಮಯ್ಯ - ಬೆಂಗಳೂರು ಸುದ್ದಿ

ನಾನು 5 ವರ್ಷ ಸಿಎಂ ಆಗಿದ್ದೆ, ಒಬ್ಬನೇ ಒಬ್ಬ ಪೊಲಿಟಿಕಲ್ ಸೆಕ್ರೆಟರಿ ಇರಲಿಲ್ಲ. ಈಗ ಅನಗತ್ಯ ಹುದ್ದೆ ಸೃಷ್ಟಿ ಮಾಡಿಕೊಂಡಿದ್ದಾರೆ. ಅದನ್ನ ಎಲ್ಲಾ ಕಟ್ ಆಫ್ ಮಾಡಲಿ..

siddaramaiah
siddaramaiah

By

Published : Apr 29, 2021, 3:37 PM IST

Updated : Apr 29, 2021, 5:35 PM IST

ಬೆಂಗಳೂರು: ರಾಜ್ಯ ಸರ್ಕಾರ ಈ ಸಂದರ್ಭ ಅನಗತ್ಯ ವೆಚ್ಚ ಕಡಿಮೆ ಮಾಡ್ಲಿ. ವಿಶೇಷ ಕಾರ್ಯದರ್ಶಿ ಹುದ್ದೆಯನ್ನು ತೆಗೆದು ಹಾಕಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

ಬೆಂಗಳೂರಿನ ಶಿವಾನಂದ ವೃತ್ತ ಸಮೀಪದ ತಮ್ಮ ಸರ್ಕಾರಿ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಅನಗತ್ಯ ಹುದ್ದೆಗಳಿಗೆ ಕಡಿವಾಣ ಹಾಕಿ. ಅಭಿವೃದ್ಧಿ ಕೆಲಸ ಈಗ ನಿಲ್ಲಿಸಿ. ಅಕ್ಕಿ ಕೊಡಲು 20-30 ಕೋಟಿ ಮೀಸಲಿಡಲಿ. ಬಿಪಿಎಲ್ ಕಾರ್ಡ್​ದಾರರಿಗೆ ಹಣ ಕೊಡ್ಲಿ. ಜೇಬಿನಲ್ಲಿ ದುಡ್ಡು ಇದ್ರೆ ಮಾತ್ರ ಮಾರುಕಟ್ಟೆಗೆ ಹೋಗಿ ಹಣ್ಣು ತರಕಾರಿ ತರಬಹುದು. ಹೀಗಾಗಿ ಮೊದಲು ಅವರ ಜೀಬಿಗೆ ದುಡ್ಡು ಹಾಕ್ಲಿ ಎಂದು ಸಲಹೆಯಿತ್ತರು.

ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಹೋಗಬೇಕು. ಅಲ್ಲಿ ಅಧಿಕಾರಿಗಳ ಜತೆ ಸಭೆ ಮಾಡಬೇಕು. ಅಚ್ಚರಿ ವಿಸಿಟ್ ಮಾಡಬೇಕು. ಬೆಂಗಳೂರು ಬಿಟ್ಟು ಹೊರ ಹೋಗ್ಲಿ. ಬೆಂಗಳೂರಿನಲ್ಲಿ ಇರಕ್ಕೆ ಜವಾಬ್ದಾರಿ ಕೊಟ್ಟಿಲ್ಲ. ಶಾಸಕರು ಫೋನ್ ಮಾಡಿದ್ರೆ ಸುಧಾಕರ್ ಫೋನ್ ತೆಗೆಯಲ್ಲ ಎಂದು ಸಚಿವರ ವಿರುದ್ಧ ಸಿದ್ದರಾಮಯ್ಯ ಗರಂ ಆದರು.

ಸಿದ್ದರಾಮಯ್ಯ

ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಅಸ್ಸಾಂ ಮತ್ತು ಕೇರಳದಲ್ಲಿ ಗೆಲ್ಲುತ್ತೆ. ತಮಿಳುನಾಡು ಮತ್ತು ಪಾಂಡಿಚೇರಿಯಲ್ಲಿ ಕಾಂಗ್ರೆಸ್ ಒಕ್ಕೂಟಕ್ಕೆ ಗೆಲುವು ಸಿಗುತ್ತೆ. ರಾಜ್ಯದಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುತ್ತೆ. ನಮ್ಮ ಸರ್ಕಾರ ಬಂದರೆ 10 ಕೆಜಿ ಅಕ್ಕಿ ಕೊಡ್ತೀವಿ ಅಂದಿದ್ದೆ. ಈ ಸರ್ಕಾರವು ಈಗ ಪರ್ ಹೆಡ್ 10 ಕೆಜಿ ಅಕ್ಕಿ ಕೊಡಬೇಕು. ಜನರ ರಕ್ಷಣೆಗಾಗಿ ಸರ್ಕಾರ ಇರೋದು. ಜನರ ತೆರಿಗೆ ಹಣ ಜನರ ನೆರವಿಗೆ ಸರ್ಕಾರ ಬರಬೇಕು. ಬಿಪಿಎಲ್ ಕಾರ್ಡ್ ಹೋಲ್ಡರ್ಸ್ ಎಲ್ಲರಿಗೂ ಹಣ ಕೊಡಬೇಕು. ಜೇಬಲ್ಲಿ ದುಡ್ಡಿದ್ದರೆ ತಾನೆ ಮಾರ್ಕೆಟ್ ಹೋಗೋದು. ಸರ್ಕಾರ ಕೂಡಲೆ ಕ್ರಮ ಕೈಗೊಳ್ಳಬೇಕು. ಇದಕ್ಕೆಲ್ಲಾ 25-30 ಸಾವಿರ ಕೋಟಿಗೆ ಸರ್ಕಾರ ಖರ್ಚು ಮಾಡಬೇಕು. ಅಭಿವೃದ್ಧಿ ಕೆಲಸ ನಿಲ್ಲಿಸಲಿ. ಅನಗತ್ಯ ಖರ್ಚಿಗೆ ಬ್ರೇಕ್ ಹಾಕಲಿ ಎಂದು ಗರಂ ಆದರು.

ಇದನ್ನೂ ಓದಿ:ಅಲ್ಲೇ ಸಿದ್ದರಾಮಯ್ಯ ಮನೆಯಲ್ಲೇ ಶವ ಹೂಳಲಿ.. ಅವನ್ಯಾರು ಡಿಕೆಶಿ ನನ್ನ ರಾಜೀನಾಮೆ ಕೇಳೋಕೆ.. ಕತ್ತಿ ಕಿಡಿ

ನಾನು 5 ವರ್ಷ ಸಿಎಂ ಆಗಿದ್ದೆ, ಒಬ್ಬನೇ ಒಬ್ಬ ಪೊಲಿಟಿಕಲ್ ಸೆಕ್ರೆಟರಿ ಇರಲಿಲ್ಲ. ಈಗ ಅನಗತ್ಯ ಹುದ್ದೆ ಸೃಷ್ಟಿ ಮಾಡಿಕೊಂಡಿದ್ದಾರೆ. ಅದನ್ನ ಎಲ್ಲಾ ಕಟ್ ಆಫ್ ಮಾಡಲಿ ಎಂದು ಸಲಹೆ ನೀಡಿದರು. ಕೊರೊನಾ ಶಾಶ್ವತವಾಗಿ ದೂರವಾಗಬೇಕಾದರೆ ವ್ಯಾಕ್ಸಿನೇಷನ್‌ ಮಸ್ಟ್ ಆಗಬೇಕು. ನಾನು ವ್ಯಾಕ್ಸಿನ್ ತಗೊಂಡು 6 ವಾರ ಆಗಿತ್ತು. ಹಾಗಾಗಿ ಇನ್ನೊಂದು ಡೋಸ್ ಕೋ ವ್ಯಾಕ್ಸಿನ್ ಹಾಕಿಸಿಕೊಂಡಿದ್ದೀನಿ. ಬೈರತಿ ಸುರೇಶ್, ಜಮೀರ್, ರಾಜಶೇಖರ ಪಾಟೀಲ್ ಎಲ್ಲರೂ ಹಾಕಿಸಿಕೊಂಡೆವು ಎಂದರು.

ನನಗಿರುವ ಮಾಹಿತಿ 18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನೇಷನ್ ಮಾಡಬೇಕು 1.5 ರಿಂದ 2 ಕೋಟಿ ವ್ಯಾಕ್ಸಿನೇಷನ್ ಬೇಕಿದೆ. ವ್ಯಾಕ್ಸಿನೇಷನ್‌ ಕೊರತೆ ಇದೆ. ದೇಶದಲ್ಲಿ ಕೊರತೆ ಇದ್ದರೆ ವಿದೇಶದಿಂದ ತರಿಸಿ. ವ್ಯಾಕ್ಸಿನೇಷನ್‌ ಪ್ರತಿಯೊಬ್ಬರಿಗೂ ಕಡ್ಡಾಯ ಹಾಕಿಸಬೇಕು. ಈ ರೋಗ ತಡೆಗಟ್ಟುವುದು ತಾತ್ಕಾಲಿಕ ಹಾಗೂ ಶಾಶ್ವತವಾಗಿರಬೇಕು. ತಾತ್ಕಾಲಿಕವಾಗಿ ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಮಾಡಬೇಕು. ಪ್ರತಿಯೊಬ್ಬರು ಕಡ್ಡಾಯವಾಗಿ ವ್ಯಾಕ್ಸಿನೇಷನ್‌ ತೆಗೆದುಕೊಳ್ಳಬೇಕು. ವ್ಯಾಕ್ಸಿನೇಷನ್‌ ನಂತರವು ಕೊರೊನಾ ಬರುವುದು ತುಂಬಾ ಕಡಿಮೆ. ಶೇ.0.03 ಮಾತ್ರ ಅನ್ನೋ ಮಾಹಿತಿ ಇದೆ ಎಂದು ತಿಳಿಸಿದರು.

ಲಾಕ್​ಡೌನ್​ಗೆ ನನ್ನ ವಿರೋಧ ಇಲ್ಲ. ತಜ್ಞರ ಸಲಹೆ ಮೇಲೆ ಮಾಡಿದ್ದಾರೆ. ಆದರೆ ಮಾಡಿದ ಮೇಲೆ ಕೂಲಿ ಕಾರ್ಮಿಕರಿಗೆ ಫೈನಾನ್ಶಿಯಲ್ ಪ್ಯಾಕೇಜ್ ಅನೌನ್ಸ್ ಮಾಡಬೇಕು ಎಂದರು.

ವಿಕ್ಟೋರಿಯಾ ವೈದ್ಯರ ಜೊತೆ ಚರ್ಚೆ ಮಾಡಿದೆ. ಅಲ್ಲಿ 750 ಬೆಡ್ ಇದೆ ಅದರಲ್ಲಿ 65 ಐಸಿಯು ಬೆಡ್ ಇದೆ. ಕನಿಷ್ಠ 200 ಆದರೂ ಐಸಿಯು ಬೆಡ್ ಇರಬೇಕು ಅಲ್ಲಿ. ಆರೋಗ್ಯ ಸಚಿವರು 100 ಐಸಿಯು ಬೆಡ್ ಮಾಡ್ತೀನಿ ಅಂದಿದಾರೆ. ಐಸಿಯು ಬೆಡ್ ಎಲ್ಲಾ ಕಡೆ ಸಮಸ್ಯೆ ಇದೆ. ಕೇವಲ ಐಸಿಯು ಬೆಡ್ ಮಾಡೋದಲ್ಲ ಮ್ಯಾನ್ ಪವರ್ ಇಟ್ಕೋಬೇಕು. ಪ್ಯಾರಾ ಮೆಡಿಕಲ್ ಹಾಗೂ ಡಾಕ್ಟರ್ ನೇಮಕ ಆಗಬೇಕು. ನಿವೃತ್ತರನ್ನು ಸೇವೆಗೆ ಪಡೆಯಬೇಕು. ಸರ್ಕಾರ ಇದನ್ನು ತಪ್ಪಿಸೋಕೆ ಸುಳ್ಳು ಹೇಳೋದು ಬಿಡಬೇಕು. ನಮ್ಮನ್ನು ವಿಶ್ವಾಸಕ್ಕೆ ತಗೆದುಕೊಳ್ಳಬೇಕು ಎಂದು‌ ಹೇಳಿದರು.

ಇದನ್ನೂ ಓದಿ:ಅಕ್ಕಿ ಇಲ್ಲದೇ ಉಪವಾಸ ಸಾಯ್ಬೇಕಾ ಎಂದ ರೈತನಿಗೆ ಸತ್ತರೆ ಒಳ್ಳೆಯದೇ ಎಂದ ಸಚಿವ ಕತ್ತಿ.. ಆಡಿಯೋ ವೈರಲ್​​

ನಾನು ಸಿಎಂಗೆ ಏನು ಕ್ರಮ ಕೈಗೊಳ್ಳಬೇಕು ಅಂತ ಸುದೀರ್ಘ ಪತ್ರ ಬರೆದಿದ್ದೇನೆ. ಊರಿಗೆ ಹೋಗುವ ವಲಸಿಗ ಕಾರ್ಮಿಕರಿಗೆ ಉದ್ಯೋಗ ಸಿಗುವಂತೆ ಮಾಡಬೇಕು. ಶಾಸಕರು ಮಾಜಿ ಶಾಸಕರಿಗೆ ಪತ್ರ ಬರೆದು ನಿಮ್ಮ ನಿಮ್ಮ ಕ್ಷೇತ್ರದಲ್ಲಿ ಎಷ್ಟು ಸಹಾಯ ಮಾಡಬೇಕೋ ಮಾಡಿ ಎಂದಿದ್ದೇನೆ. ಎಚ್ಚರಿಕೆ ಬರಲಿ ಅನ್ನೋ ಕಾರಣಕ್ಕೆ ನಾನು ಟೀಕೆ ಮಾಡುತ್ತೇನೆ. ಸತ್ಯ ಹೇಳಿದ್ದೆ ಟೀಕೆ ಮಾಡ್ತಾರೆ ಅನ್ನೋದಲ್ಲ ಎಂದರು.

ಉಮೇಶ್ ಕತ್ತಿ ಇರೆಸ್ಪಾನ್ಸಿಬಲ್ ಮಿನಿಸ್ಟರ್. ನೀ ಸಾಯಿ ಹೋಗು ಅನ್ನೋದು ಅತ್ಯಂತ ಉದ್ದಟತನದ ಮಾತು. ದುರಹಂಕಾರದ ಮಾತು. ನನ್ನ ಪ್ರಕಾರ ಮಂತ್ರಿಯಾಗಿ ಇರೋಕೆ ಲಾಯಕಲ್ಲ. ಯಡಿಯೂರಪ್ಪ ವಿಷಾದ ವ್ಯಕ್ತಪಡಿಸೋದಲ್ಲ‌. ಕೂಡಲೇ ಸಂಪುಟದಿಂದ ಕೈ ಬಿಡಬೇಕು. ಬಡವರಿಗೆ ಇಂತವರಿಂದ ಏನು ಸಹಾಯ ಸಿಗೋಕೆ ಸಾಧ್ಯ ಎಂದರು.

ಹೆಣ ಹೂಳುವುದು ಹಾಗೂ ಸುಡುವುದು ಎರಡು ವ್ಯವಸ್ಥೆಯನ್ನು ಹೆಚ್ಚು ಮಾಡಬೇಕು. ಕ್ಯೂನಲ್ಲಿ ನಿಂತು ಗೋಗರಿಯೋದು, ಲಂಚ ಕೊಡೋದು ಆಗಬಾರದು. ಸರ್ಕಾರ ಸಾವಿನ ವಿಚಾರದಲ್ಲಿ ಸುಳ್ಳು ಹೇಳುತ್ತಿದೆ. ಇದು ಸಾವಿಗೆ ಪ್ರಚೋದನೆ ಕೊಡುವ ಹೇಳಿಕೆ ಆಗಿದೆ ಎಂದರು.

ಇದನ್ನೂ ಓದಿ:ಐದು ಕೆಜಿ ಅಕ್ಕಿ ವಿತರಿಸುವಂತೆ ಪತ್ರ ಚಳವಳಿ ನಡೆಸುತ್ತೇವೆ: ಡಿಕೆಶಿ

Last Updated : Apr 29, 2021, 5:35 PM IST

ABOUT THE AUTHOR

...view details