ಚಿತ್ರದುರ್ಗ: ಬಿಜೆಪಿ ಸರ್ಕಾರ ಪೊಲೀಸ್ ಇಲಾಖೆ ದುರ್ಬಳಕೆ ಮಾಡಿಕೊಂಡು ಅಮಾಯಕರ ಮೇಲೆ ಕೇಸ್ ಹಾಕ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ಚಿತ್ರದುರ್ಗದಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಪ್ರತಿಕ್ರಿಯಿಸಿದ್ದಾರೆ. ಯಾವುದೇ ಅಮಾಯಕರ ಮೇಲೆ ಕೇಸ್ ಹಾಕುವ ದುಸ್ಥಿತಿಯಲ್ಲಿ ನಾವಿಲ್ಲ. ಬಿಜೆಪಿಯಲ್ಲಿನ ಕೆಲ ಮಂದಿ ಕಿಡಿಗೇಡಿಗಳು ಪಾಕಿಸ್ತಾನಕ್ಕೆ ಜೈ ಅಂದ್ರೆ ಸುಮ್ಮನೆ ಇರೋಕ್ ಆಗುತ್ತಾ? ಅಂತಾ ಶ್ರೀರಾಮುಲು ಪ್ರಶ್ನಿಸಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಏನೋ ಹೇಳಲು ಹೋಗಿ ಮತ್ತೇನೋ ಹೇಳಿ ವಿವಾದ ಮೈಮೇಲೆ ಎಳೆದುಕೊಂಡಂತೆ ಮಾತಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಶ್ರೀ ರಾಮುಲು ಯಾರೇ ಪಾಕಿಸ್ತಾನಕ್ಕೆ ಜೈ ಅಂದ್ರೂ ಅವರನ್ನ ಅರೆಸ್ಟ್ ಮಾಡಿಸ್ತೀವಿ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಪಿಎಫ್ಐ ಸಂಘಟನೆಗಳ ಮೇಲಿನ ಕೇಸ್ ವಾಪಸ್ ತಗೊಂಡಿತ್ತು. ಆದರೆ, ಯಾವುದೇ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲಿನ ಕೇಸ್ ವಜಾ ಮಾಡಲಿಲ್ಲ. ಆರ್ಎಸ್ಎಸ್ ಮೇಲಿನ ಎಲ್ಲ ಕೇಸ್ಗಳನ್ನೂ ಶೀಘ್ರ ವಾಪಸ್ ತೆಗೆದುಕೊಳ್ತೀವಿ ಅಂದ್ರು.
ಮಾಜಿ ಪ್ರಧಾನಿ ದೇವೆಗೌಡರು ನಮ್ಮ ಮೇಲೆ ಹಗೆತನ ಸಾಧಿಸಿದ್ರೆ ನಾವು ಸುಮ್ಮನೆ ಕೂರಲ್ಲ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸೇಡಿನ ರಾಜಕಾರಣ ಮಾಡುವವರು ನಾವಲ್ಲ. ಬಿಎಸ್ವೈ ದ್ವೇಷದ ರಾಜಕಾರಣ ಮಾಡಿಲ್ಲ. ನಿರುದ್ಯೋಗಿ ಕಾಂಗ್ರೆಸ್-ಜೆಡಿಎಸ್ ನಮ್ಮ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ಅವರಿಂದ ನಾವು ಪಾಠ ಕಲಿಯುವುದು ಬೇಕಾಗಿಲ್ಲ ಎಂದು ದೇವೇಗೌಡ ಹೇಳಿಕೆಗೆ ಶ್ರೀರಾಮುಲು ತಿರುಗೇಟು ಕೊಟ್ಟರು.