ಬೆಳ್ತಂಗಡಿ: ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ವೇಣೂರು ಪ್ರಖಂಡ ವತಿಯಿಂದ ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ನಾಗ ಬನ, ಕಲ್ಕುಡ ದೈವದ ಕಟ್ಟೆ ಹಾಗೂ ಬಾಹುಬಲಿ ಬೆಟ್ಟದ ಒಳ ಪ್ರಾಂಗಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸುವ ಮೂಲಕ ಶ್ರಮದಾನ ನಡೆಸಲಾಯಿತು.
ಬೆಳ್ತಂಗಡಿ: ವಿಶ್ವ ಹಿಂದೂ ಪರಿಷತ್ ವತಿಯಿಂದ ಶ್ರಮದಾನ ಕಾರ್ಯಕ್ರಮ - Bhajaranga dala social works
ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ನಾಗ ಬನ, ಕಲ್ಕುಡ ದೈವದ ಕಟ್ಟೆ ಹಾಗೂ ಬಾಹುಬಲಿ ಬೆಟ್ಟದ ಒಳ ಪ್ರಾಂಗಣದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ಕಾರ್ಯಕರ್ತರು ಸ್ವಚ್ಛತಾ ಕಾರ್ಯ ನೆರವೇರಿಸಿದರು.
ವೇಣೂರು ಪ್ರಖಂಡದ ವಿವಿಧ ಗ್ರಾಮಗಳಿಂದ ಕಾರ್ಯಕರ್ತರು ಈ ಶ್ರಮದಾನದಲ್ಲಿ ಭಾಗವಹಿಸಿದ್ದರು. ಈ ವೇಳೆ ಸಭೆಯನ್ನು ಉದ್ದೇಶಿಸಿ ವಿಎಚ್ ಪಿ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಗಣೇಶ್ ಹೆಗ್ಡೆ ನಾರಾವಿ, ಶ್ರೀ ವಿಜಯರಾಜ ಅಧಿಕಾರಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವಿಎಚ್ ಪಿ ವೇಣೂರು ಪ್ರಖಂಡ ಅಧ್ಯಕ್ಷ ಶಶಾಂಕ ಭಟ್, ರಾಮಪ್ರಸಾದ್ ಮರೋಡಿ, ರಕ್ಷಿತ್ ಬಜಿರೆ, ಶಾಸಕ ಹರೀಶ್ ಪೂಂಜಾ, ಗಣ್ಯರಾದ ಪ್ರವೀಣ್ ಇಂದ್ರ. ಸುಂದರ್ ಹೆಗ್ಡೆ, ಸೌರಭ್ ಕೊಟ್ಟಾರಿ, ಅರುಣ್, ಮೋಹನ್ ಅಂಡಿಂಜೆ, ಸದಾನಂದ ಉಂಗಿಲಬೈಲ್, ಪಂಚಾಯತ್ ಸದಸ್ಯರಾದ ಲೋಕಯ್ಯ ಪೂಜಾರಿ, ನೇಮಯ್ಯ ಕುಲಾಲ್, ಯಶೋಧರ ಹೆಗ್ಡೆ, ಲಕ್ಷ್ಮಣ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.