ರಾಯಚೂರು :ಜಿಲ್ಲೆಯ ಲಿಂಗಸುಗೂರಲ್ಲಿ ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ವಹಿಸುವಲ್ಲಿ ವಿಫಲರಾದ ಅಂಗಡಿ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.
ಕೋವಿಡ್-19 ಮುನ್ನೆಚ್ಚರಿಕಾ ಕ್ರಮ ಪಾಲಿಸುವಲ್ಲಿ ವಿಫಲ.. ಅಂಗಡಿ ಮಾಲೀಕರ ವಿರುದ್ಧ ಪ್ರಕರಣ - Corona Precautionary measures
ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವಲ್ಲಿ ಬೇಜವಾಬ್ದಾರಿತನ ತೋರಿದ ಲಿಂಗಸುಗೂರು ನಗರದ ಇಬ್ಬರು ಅಂಗಡಿ ಮಾಲೀಕರು ಮೇಲೆ ಪ್ರಕರಣ ದಾಖಲಿಸಲಾಗಿದೆ..
Shop owners breaks Covid-19 rules in lingasuguru
ಹನುಮಂತ ದೇವರ ಗುಡಿ ಬಳಿಯ ಬಾಂಡೆ ಸಾಮಾನು ಮಾರುವ ಅಂಗಡಿ ಮಾಲೀಕ ಶಿವರಾಜ ಗೋಂದಳೆ ಮತ್ತು ನಗರೇಶ್ವರ ದೇವಸ್ಥಾನ ಬಳಿ ಬಾಂಡೆ ಸಾಮಾನು ಮಾರುವ ಅಂಗಡಿ ಮಾಲೀಕ ಸುರೇಶ ಸುತ್ತೇಕಾರ್ ವಿರುದ್ಧ ಈರಣ್ಣ ಪೊಲೀಸ್ ಕಾನ್‌ಸ್ಟೇಬಲ್ ನೀಡಿದ ದೂರಿನ ಮೇಲೆ ಪ್ರತ್ಯೇಕ ಪ್ರಕರಣ ದಾಖಲಾಗಿವೆ.
ಕೋವಿಡ್-19 ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವಲ್ಲಿ ಅಂಗಡಿ ಮಾಲೀಕರು ನಿರ್ಲಕ್ಷ್ಯವಹಿಸಿದ್ದಾರೆ ಮತ್ತು ಅನಾವಶ್ಯಕವಾಗಿ ಗುಂಪು ಗುಂಪಾಗಿ ಕೂಡಿದ ಆರೋಪದ ಮೇಲೆ ಪಿಎಸ್ಐ ಪ್ರಕಾಶರೆಡ್ಡಿ ಡಂಬಳ ಪ್ರಕರಣ ದಾಖಲಿಕೊಂಡಿದ್ದಾರೆ ಎಂದು ಸಿಪಿಐ ಯಶವಂತ ಬಿಸನಳ್ಳಿ ತಿಳಿಸಿದ್ದಾರೆ.