ಬೆಂಗಳೂರು:ದೇಶದ ಜನತೆ ಪ್ರಚಂಡ ಬಹುಮತ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಮೊದಲ ಅವಧಿಯ ಕೇಂದ್ರ ಸರ್ಕಾರದ ಯಶಸ್ಸು ಜನತೆಯೇ ಘೋಷಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ಗೆ ಟ್ವೀಟ್ ಮೂಲಕ ಸಂಸದೆ ಶೋಭಾ ಕರಂದ್ಲಾಜೆ ಟಾಂಗ್ ನೀಡಿದ್ದಾರೆ.
ಕೇವಲ 1 ಸ್ಥಾನ ಗೆದ್ದ ಮೇಲಾದರೂ ವಾಸ್ತವ ತಿಳ್ಕೊಳ್ಳಿ: ಗುಂಡೂರಾವ್ ಗೆ ಶೋಭಾ ಟಾಂಗ್! - undefined
ಶೋಭಾ ಕರಂದ್ಲಾಜೆ ಹಾಗೂ ದಿನೇಶ್ ಗುಂಡೂರಾವ್ ನಡುವೆ ಟ್ವೀಟ್ ವಾರ್ ನಡೆದಿದೆ.
ಆರ್ಥಿಕ ಬೆಳವಣಿಕೆ ಹಾಗೂ ಉದ್ಯೋಗ ಸೃಷ್ಟಿಯಲ್ಲಿ ಮೋದಿ ಆಡಳಿತ ವಿಫಲವಾಗಿದೆ ಎನ್ನುವ ದಿನೇಶ್ ಗುಂಡೂರಾವ್ ಟ್ವೀಟ್ಗೆ ಪ್ರತಿ ಟ್ವೀಟ್ ಮಾಡಿರುವ ಶೋಭಾ ಕರಂದ್ಲಾಜೆ, ಇಡೀ ದೇಶದ ಜನತೆ ಮೋದಿ ಸರ್ಕಾರಕ್ಕೆ ಬಹುಮತ ನೀಡಿ ಸರ್ಕಾರದ ಯಶಸ್ಸನ್ನು ಸಾರಿ ಹೇಳಿದ್ದಾರೆ. ಕೇವಲ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಮಾತ್ರ ಮೋದಿ ಸರ್ಕಾರ ವಿಫಲವಾಗಿದೆ ಎಂದು ಪ್ರತಿಪಾದಿಸಲು ಹೊರಟಿವೆ.
ಕನಿಷ್ಠ ರಾಜ್ಯದ 28 ಕ್ಷೇತ್ರದಲ್ಲಿ ಕೇವಲ 1 ಸ್ಥಾನ ಗಳಿಸಿದ್ದರಿಂದಲಾದರೂ ವಾಸ್ತವಿಕತೆಯನ್ನು ಅರಿಯಿರಿ ಮಿ.ಗುಂಡೂರಾವ್ ಎಂದು ಟ್ವೀಟ್ ಮೂಲಕ ಶೋಭಾ ಕರಂದ್ಲಾಜೆ ಕಾಂಗ್ರೆಸ್ ಅನ್ನು ಲೇವಡಿ ಮಾಡಿದ್ದಾರೆ.