ಕರ್ನಾಟಕ

karnataka

ETV Bharat / briefs

ಶೂಟಿಂಗ್ ಹಂತದಲ್ಲೇ ವಿವಾದದಲ್ಲಿ ಸಲ್ಲೂ ಸಿನಿಮಾ... ದಬಾಂಗ್ 3 ಸೆಟ್​ನಲ್ಲಿ ಆಗಿದ್ದೇನು..? - ಬಿಜೆಪಿ

ದಬಾಂಗ್​​ 3 ಚಿತ್ರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿದೆ ಎಂದು ಆರೋಪಿಸಿರುವ ಬಿಜೆಪಿ ಶಾಸಕ, ಚಿತ್ರದ ನಾಯಕ ನಟ ಸಲ್ಮಾನ್ ಖಾನ್ ವಿರುದ್ಧ ಎಫ್​ಐಆರ್​ ದಾಖಲಿಸುವಂತೆ ಒತ್ತಾಯ ಕೇಳಿಬಂದಿದೆ.

ದಬಾಂಗ್ 3

By

Published : Apr 5, 2019, 11:33 AM IST

ಇಂದೋರ್​:ಸಲ್ಮಾನ್ ಖಾನ್ ನಟನೆಯ ಹೊಸ ಸಿನಿಮಾ ದಬಾಂಗ್​ 3 ಶೂಟಿಂಗ್​ನ ಆರಂಭಿಕ ಹಂತದಲ್ಲೇ ವಿವಾದದ ಕಿಡಿ ಹೊತ್ತಿಸಿದೆ.

ದಬಾಂಗ್​​ 3 ಚಿತ್ರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿದೆ ಎಂದು ಆರೋಪಿಸಿರುವ ಬಿಜೆಪಿ ಶಾಸಕ, ಚಿತ್ರದ ನಾಯಕ ನಟ ಸಲ್ಮಾನ್ ಖಾನ್ ವಿರುದ್ಧ ಎಫ್​ಐಆರ್​ ದಾಖಲಿಸುವಂತೆ ಒತ್ತಾಯ ಕೇಳಿಬಂದಿದೆ.

ಅಷ್ಟಕ್ಕೂ ಆಗಿದ್ದೇನು..?

ದಬಾಂಗ್ 3 ಚಿತ್ರ ಕಳೆದ ಕೆಲವು ದಿನಗಳಿಂದ ಮಧ್ಯಪ್ರದೇಶದ ನರ್ಮದಾ ನದಿ ತಟದಲ್ಲಿ ಹಾಡಿ ಚಿತ್ರೀಕರಣ ನಡೆಸುತ್ತಿದೆ. ಹಾಡಿಗಾಗಿ ಶಿವಲಿಂಗ ಮೂರ್ತಿಯನ್ನು ಇರಿಸಲಾಗಿದ್ದು, ಮೂರ್ತಿಯ ಮೇಲ್ಭಾಗದಲ್ಲಿ ಸಣ್ಣ ವೇದಿಕೆಯನ್ನು ನಿರ್ಮಿಸಲಾಗಿತ್ತು. ಇದರ ಮೇಲೆ ನಿಂತು ಹಾಡಿನ ಚಿತ್ರೀಕರಣ ನಡೆಲಾಗಿತ್ತು.

ಇದೇ ಸದ್ಯ ವಿವಾದಕ್ಕೆ ಕಾರಣವಾಗಿದೆ. ಭೋಪಾಲ್​ ಜಿಲ್ಲೆಯ ಹುಜೂರ್​​ನ ಶಾಸಕ ರಾಮೇಶ್ವರ ಶರ್ಮ ದಬಾಂಗ್ 3 ಹಾಡಿನ ಚಿತ್ರೀಕರಣದಲ್ಲಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗಿದೆ ಎಂದು ಆರೋಪಿಸಿದ್ದಾರೆ. ಈ ಘಟನೆಯ ಹಿಂದಿರುವ ಎಲ್ಲರ ಮೇಲೂ ದೂರು ದಾಖಲಿಸಲು ಒತ್ತಾಯ ಮಾಡಿದ್ದಾರೆ.

ಹಾಡಿನ ಶೂಟಿಂಗ್​ನ ಕೆಲ ಫೋಟೋಗಳು ವೈರಲ್ ಆಗುತ್ತಿದ್ದಂತೆ ರಾಜ್ಯ ಬಿಜೆಪಿ ನಾಯಕರು ಮುಖ್ಯಮಂತ್ರಿ ಕಮಲ್ ನಾಥ್ ಸರ್ಕಾರ ವಿರುದ್ಧ ಕಿಡಿಕಾರಿದ್ದಾರೆ. ಕಮಲ್​ನಾಥ್ ಸರ್ಕಾರದಲ್ಲಿ ಹಿಂದೂಗಳ ಭಾವನೆಗಳಿಗೆ ಹೆಚ್ಚಿನ ಧಕ್ಕೆ ಉಂಟಾಗುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ವಿವಾದದ ಬಗ್ಗೆ ತಿಳಿಯುತ್ತಿದ್ದಂತೆ ಪ್ರತಿಕ್ರಿಯಿಸಿದ ಸಲ್ಮಾನ್ ಖಾನ್, ವಿವಾದದಿಂದ ನೋವಾಗಿದೆ ಎಂದಿದ್ದಾರೆ.

ABOUT THE AUTHOR

...view details