ಚಿಕ್ಕಬಳ್ಳಾಪುರ:ಗೌರಿಬಿದನೂರು ಶಾಸಕ ಶಿವಶಂಕರ್ ರೆಡ್ಡಿ ಹಾಗೂ ಅನರ್ಹ ಶಾಸಕ ಸುಧಾಕರ್ ನಡುವಿನ ವಾಗ್ವಾದ ತಾರಕಕ್ಕೇರಿದೆ.
ನಮ್ಮ ಕ್ಷೇತ್ರಕ್ಕೆ ಕೈ ಹಾಕಿದ್ರೆ ಕೈ ಕತ್ತರಿಸುತ್ತೇನೆ: ಅನರ್ಹ ಶಾಸಕನಿಗೆ ಮಾಜಿ ಸಚಿವ ಎಚ್ಚರಿಕೆ! - Shivashankar Reddy warning to Sudhakar
ಉಪಚುನಾವಣೆ ಸಮೀಪಿಸುತ್ತಿದ್ದಂತೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ. ಒಂದೆಡೆ ಮಾಜಿ ಕೃಷಿ ಸಚಿವ ಹಾಗೂ ಗೌರಿಬಿದನೂರು ಕ್ಷೇತ್ರದ ಶಾಸಕ ಶಿವಶಂಕರ್ ರೆಡ್ಡಿ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಪಣತೊಟ್ಟಿದ್ದು, ಬಿರುಸಿನ ತಯಾರಿ ನಡೆಸಿಕೊಂಡು ಬಂದಿದ್ದಾರೆ. ಮತ್ತೊಂದೆಡೆ ಸಮ್ಮಿಶ್ರ ಸರ್ಕಾರಕ್ಕೆ ದೊಡ್ಡ ಶಾಕ್ ನೀಡಿದ್ದ ಅನರ್ಹ ಶಾಸಕ ಸುಧಾಕರ್ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ಈ ನಡುವೆ ಗೌರಿಬಿದನೂರು ಕ್ಷೇತ್ರದ ಕೆಲ ಹಳ್ಳಿಗಳ ಮೇಲೆ ಡಾ. ಸುಧಾಕರ್ ಕಣ್ಣಾಕಿದ್ದಾರೆ ಎಂದು ಶಾಸಕ ಶಿವಶಂಕರ್ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಶಿವಶಂಕರ್ ರೆಡ್ಡಿ ಖಡಕ್ ವಾರ್ನಿಂಗ್
ಸದ್ಯ ಅನರ್ಹ ಶಾಸಕ ಡಾ. ಸುಧಾಕರ್ಗೆ ಮಾಜಿ ಸಚಿವ ಶಿವಶಂಕರ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ. ನನ್ನ ಕ್ಷೇತ್ರಕ್ಕೆ ಯಾರೇ ಕೈ ಹಾಕಿದರೂ ಅವರ ಕೈ ಕತ್ತರಿಸುತ್ತೇನೆಂದು ಪರೋಕ್ಷವಾಗಿ ಅನರ್ಹ ಶಾಸಕ ಸುಧಾಕರ್ಗೆ ಎಚ್ಚರಿಕೆ ರವಾನಿಸಿದ್ದಾರೆ.
ಗೌರಿಬಿದನೂರು ತಾಲೂಕಿನ ಹಿರೇಬಿದನೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಮಂಚೇನಹಳ್ಳಿ ನೂತನ ತಾಲೂಕು ಮಾಡುವ ವಿಷಯದಲ್ಲಿ ಗೌರಿಬಿದನೂರು ತಾಲೂಕಿನ ತೊಂಡೆಬಾವಿ ಹೋಬಳಿ ಮಂಚೇನಹಳ್ಳಿ ಸೇರಿಸುವ ವಿಷಯದಲ್ಲಿ ಅನರ್ಹ ಶಾಸಕರಿಗೆ ಶಿವಶಂಕರ್ ರೆಡ್ಡಿ ಈ ಎಚ್ಚರಿಕೆ ನೀಡಿದ್ದಾರೆ.
Last Updated : Oct 20, 2019, 4:35 PM IST