ಕರ್ನಾಟಕ

karnataka

ETV Bharat / briefs

ಹೌದು! ದೇಶಾದ್ಯಂತ ಸೂಪರ್ ಸ್ಪ್ರೆಡರ್ ಧರಣಿಗಳು ನಡಿಬೇಕು : ಬಿಜೆಪಿಗೆ ಟಾಂಗ್​ ನೀಡಿದ ಶಿವಸೇನೆ ಮುಖಂಡೆ!

ಬಿಜೆಪಿಯ ಪ್ರಕಾರ ಕೊರೊನಾ ದೇಶದಲ್ಲಿ ಇನ್ನೂ ಹೆಚ್ಚಾಗಿಲ್ಲ ಎಂದು ಅಂದುಕೊಂಡಿದೆಯೋ ಏನೋ ಎಂದು ಕುಹಕವಾಡಿದ್ದಾರೆ..

Priyanka Chaturvedi
Priyanka Chaturvedi

By

Published : May 4, 2021, 8:31 PM IST

ಮಹಾರಾಷ್ಟ್ರ :ದೇಶಾದ್ಯಂತ ಬಿಜೆಪಿ ಕರೆ ನೀಡಿರುವ ಧರಣಿ ಬಗ್ಗೆ ಶಿವಸೇನೆ ಮುಖಂಡೆ ಪ್ರಿಯಾಂಕಾ ಚತುರ್ವೇದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರಾದ್ಯಂತ ಇಂತಹ ಸೂಪರ್ ಸ್ಪ್ರೆಡರ್ ಧರಣಿ ಕಾರ್ಯಕ್ರಮಗಳು ನಡೆಯಬೇಕಾಗುತ್ತದೆ. ಬಿಜೆಪಿಗೆ ಇನ್ನೂ ದೇಶದಲ್ಲಿ ಕೊರೊನಾ ಉಲ್ಬಣವಾಗುತ್ತಿರುವುದು ಕಾಣುತ್ತಿಲ್ಲ ಎನಿಸುತ್ತಿದೆ ಎಂದು ಚತುರ್ವೇದಿ ಟಾಂಗ್​ ನೀಡಿದ್ದಾರೆ.

ಬಂಗಾಳದಲ್ಲಿ ಚುನಾವಣಾ ಫಲಿತಾಂಶಗಳನ್ನು ಪ್ರಕಟಗೊಂಡ ಬಳಿಕ ಟಿಎಂಸಿ ಕಾರ್ಯಕರ್ತರು ನಡೆಸುತ್ತಿರುವ ವ್ಯಾಪಕ ಹಿಂಸಾಚಾರದ ವಿರುದ್ಧ ಬಿಜೆಪಿ ಮೇ 5ರಂದು ರಾಷ್ಟ್ರವ್ಯಾಪಿ ಧರಣಿ ನಡೆಸಲಿದೆ.

ಪಕ್ಷದ ಎಲ್ಲಾ ಸಾಂಸ್ಥಿಕ ಮಂಡಳಿಗಳಲ್ಲಿನ ಎಲ್ಲಾ ಕೋವಿಡ್ ಪ್ರೋಟೋಕಾಲ್​ಗಳನ್ನು ಅನುಸರಿಸಿ ಈ ಪ್ರತಿಭಟನೆ ನಡೆಯಲಿದೆ ಎಂದು ಬಿಜೆಪಿ ಹೇಳಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಚತುರ್ವೇದಿ, ಬಿಜೆಪಿಯ ಪ್ರಕಾರ ಕೊರೊನಾ ದೇಶದಲ್ಲಿ ಇನ್ನೂ ಹೆಚ್ಚಾಗಿಲ್ಲ ಎಂದು ಅಂದುಕೊಂಡಿದೆಯೋ ಏನೋ ಎಂದು ಕುಹಕವಾಡಿದ್ದಾರೆ.

For All Latest Updates

ABOUT THE AUTHOR

...view details