ಹೈದರಾಬಾದ್:ಸೆಲೆಬ್ರಿಟಿ ಕಪಲ್ ರಾಜ್ ಕುಂದ್ರಾ ಹಾಗೂ ನಟಿ ಶಿಲ್ಪಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಆದರೆ, ಇಂದು ರಾಜ್ ಕುಂದ್ರಾ ತಮ್ಮ ಮೊದಲ ಪತ್ನಿ ಹಾಗೂ ಮುರಿದು ಬಿದ್ದ ಮೊದಲ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಬರೋಬ್ಬರಿ 15 ವರ್ಷಗಳ ನಂತರ ರಾಜ್ ಕುಂದ್ರಾ ಮೊದಲ ಪತ್ನಿ ಕವಿತಾರಿಂದ ದೂರಾಗಿದ್ದಕ್ಕೆ ಏನು ಕಾರಣ ಎಂದು ತಿಳಿಸಿದ್ದಾರೆ.
ಶಿಲ್ಪಾ ಶೆಟ್ಟಿ ಅವರನ್ನು ಮದುವೆಯಾಗುವ ಮೊದಲು ರಾಜ್ ಕುಂದ್ರಾ ಅವರಿಗೆ ಕವಿತಾ ಎಂಬವರ ಜೊತೆ ಮದುವೆಯಾಗಿತ್ತು. ಇತ್ತೀಚೆಗೆ ಶಿಲ್ಪಾ ಶೆಟ್ಟಿ ಅವರ ಹುಟ್ಟುಹಬ್ಬದ ಸಮಯದಲ್ಲಿ ಕೆಲವೊಂದು ಹಳೇ ಸುದ್ದಿಗಳು ವೈರಲ್ ಆಗಿದ್ದವು. ಅವುಗಳನ್ನು ನೋಡಿದ ನಂತರ ಇನ್ನೂ ಮೌನವಾಗಿರುವುದು ಸರಿಯಲ್ಲ ಎಂದು ಇಂಗ್ಲಿಷ್ ಪತ್ರಿಕೆಗೆ ನೀಡಿರುವ ಸಂದರ್ಶನಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ.