ಕರ್ನಾಟಕ

karnataka

ETV Bharat / briefs

ಧವನ್​ ಅಲಭ್ಯತೆ ಕೊಹ್ಲಿ ಪಡೆಗೆ ತುಂಬಲಾರದ ನಷ್ಟ: ರಾಸ್​ ಟೇಲರ್​​ - ವಿಶ್ವಕಪ್​

ನಾಳೆ ಭಾರತ-ನ್ಯೂಜಿಲೆಂಡ್​ ತಂಡಗಳು ಮುಖಾಮುಖಿಯಾಗಲಿದ್ದು, ಅದಕ್ಕೂ ಮುಂಚಿತವಾಗಿ ರಾಸ್​ ಟೇಲರ್​ ಶಿಖರ್​ ಧವನ್​ ಬಗ್ಗೆ ಮಾತನಾಡಿದ್ದಾರೆ.

ರಾಸ್​ ಟೇಲರ್​​

By

Published : Jun 12, 2019, 9:53 PM IST

ನಾಟಿಂಗ್​ಹ್ಯಾಮ್​: ವಿಶ್ವಕಪ್​​ನಲ್ಲಿ ಉತ್ತಮ ಅಭಿಯಾನ ಆರಂಭಿಸಿರುವ ಟೀಂ ಇಂಡಿಯಾಗೆ ಬಹುದೊಡ್ಡ ಹೊಡೆತ ಬಿದ್ದಿದ್ದು, ಹೆಬ್ಬೆರಳ ಗಾಯಕ್ಕೊಳಗಾಗಿರುವ ಎಡಗೈ ಬ್ಯಾಟ್ಸ್​​ಮನ್​ ಶಿಖರ್​ ಧವನ್​ ತಂಡದಿಂದ ಹೊರಗುಳಿದಿದ್ದಾರೆ. ಈ ವಿಚಾರವಾಗಿ ಕಿವೀಸ್‌ ಆಟಗಾರ ರಾಸ್ ಟೇಲರ್‌ ಮಾತನಾಡಿದ್ದಾರೆ.

ಶಿಖರ್​ ಧವನ್ ಗಾಯಗೊಂಡಿರುವುದ ಟೀಂ ಇಂಡಿಯಾಗೆ ತುಂಬಲಾರದ ನಷ್ಟ ಎಂದು ರಾಸ್ ಟೇಲರ್​ ಹೇಳಿದ್ದಾರೆ. ಐಸಿಸಿ ಟೂರ್ನಿಗಳಲ್ಲಿ ಧವನ್ ಅದ್ಭುತ ರೆಕಾರ್ಡ್​ ಹೊಂದಿದ್ದು, ಇದೀಗ ಅವರು ತಂಡದಲ್ಲಿ ಇಲ್ಲದಿರುವುದು ನಿಜಕ್ಕೂ ತಂಡಕ್ಕೆ ದೊಡ್ಡ ಹೊಡೆತ ಎಂದಿದ್ದಾರೆ. ರೋಹಿತ್​-ಶಿಖರ್ ಜೋಡಿ ನಿಜಕ್ಕೂ ಅದ್ಭುತವಾಗಿದ್ದು, ಇದೀಗ ಅದನ್ನು ಟೀಂ ಇಂಡಿಯಾ ಹೇಗೆ ತುಂಬಿಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ ಎಂದು ಅವರು ಹೇಳಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 117ರನ್​ ಸಿಡಿಸಿದ ಧವನ್​ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಹೆಬ್ಬೆರಳಿನ ಗಾಯಕ್ಕೊಳಗಾಗಿರುವ ಅವರು ಮುಂದಿನ ಮೂರು ವಾರಗಳ ಕಾಲ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ.

ABOUT THE AUTHOR

...view details