ಕರ್ನಾಟಕ

karnataka

ETV Bharat / briefs

ನಾಳೆ ಭಾರತ v/s ನ್ಯೂಜಿಲೆಂಡ್ ಕದನ: ಅಭ್ಯಾಸ ವೇಳೆ ಕಾಣಿಸಿಕೊಂಡ ಗಾಯಾಳು 'ಗಬ್ಬರ್' - ಅಭ್ಯಾಸ

ಹೆಬ್ಬೆರಳಿನ ಗಾಯಕ್ಕೊಳಗಾಗಿ ತಂಡದಿಂದ ಹೊರಬಿದ್ದಿರುವ ಶಿಖರ್​ ಧವನ್​, ಇಂದು ಟೀಂ ಇಂಡಿಯಾ ತಂಡದ ಸಹ ಆಟಗಾರರೊಂದಿಗೆ ಮೈದಾನದಲ್ಲಿ ಕಾಣಿಸಿಕೊಂಡರು.

ಸಹ ಆಟಗಾರರೊಂದಿಗೆ ಧವನ್​

By

Published : Jun 12, 2019, 6:27 PM IST

ಟ್ರೆಂಟ್ ಬ್ರಿಡ್ಜ್​:ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಹೆಬ್ಬೆರಳಿನ ಗಾಯದ ಸಮಸ್ಯೆಗೊಳಗಾಗಿ ತಂಡದಿಂದ ಮೂರು ವಾರಗಳ ಕಾಲ ಹೊರಗುಳಿದಿರುವ ಟೀಂ ಇಂಡಿಯಾ ಎಡಗೈ ಬ್ಯಾಟ್ಸ್​ಮನ್​ ಶಿಖರ್​ ಧವನ್​, ವಿಶ್ರಾಂತಿ ಪಡೆದುಕೊಳ್ಳದೆ ಆಟಗಾರರೊಂದಿಗೆ ಮೈದಾನದಲ್ಲಿ ಕಾಣಿಸಿಕೊಂಡರು.

ಸಹ ಆಟಗಾರರೊಂದಿಗೆ ಧವನ್​

ನಾಳೆ ನ್ಯಾಟಿಂಗ್​ಹ್ಯಾಮ್​ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಟೀಂ ಇಂಡಿಯಾ, ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕಾಗಿ ಆಟಗಾರರು ಇಂದು ಟ್ರೆಂಟ್ ಬ್ರಿಡ್ಜ್​​ನಲ್ಲಿ ಅಭ್ಯಾಸ ನಡೆಸಿದ್ರು. ಈ ವೇಳೆ ಮೈದಾನದಲ್ಲಿ ಕಾಣಿಸಿಕೊಂಡ ಶಿಖರ್​ ಧವನ್​ ಇತರೆ ಆಟಗಾರರಿಗೆ ಸಾಥ್​ ನೀಡಿದರು.

ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು ಕಂಡಿರುವ ಭಾರತೀಯ ತಂಡ ಕಿವೀಸ್ ವಿರುದ್ಧದ ಹೋರಾಟದಲ್ಲೂ ಗೆಲ್ಲುವ ಆತ್ಮವಿಶ್ವಾಸದಲ್ಲಿದೆ.

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿ ಗೆಲುವಿನ ರೂವಾರಿಯಾದ ಶಿಖರ್‌, ನಾಳಿನ ಪಂದ್ಯಕ್ಕೆ ಅಲಭ್ಯರಾಗಿವುದು ತಂಡಕ್ಕೆ ಹಿನ್ನಡೆಯಾಗಿದೆ.

ABOUT THE AUTHOR

...view details